More

    ಆಸೀಸ್ ವಿರುದ್ಧ ಟೆಸ್ಟ್ ಸರಣಿಯಿಂದ ಹೊರಬಿದ್ದ ಉಮೇಶ್ ಯಾದವ್

    ನವದೆಹಲಿ: ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಎಡ ಮೀನಖಂಡದ ಗಾಯಕ್ಕೊಳಗಾಗಿರುವ ವೇಗಿ ಉಮೇಶ್ ಯಾದವ್ ಆಸೀಸ್ ವಿರುದ್ಧದ ಸರಣಿಯಿಂದ ಹೊರಬಿದ್ದಿದ್ದಾರೆ. ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳುವ ಸಲುವಾಗಿ ಉಮೇಶ್ ತವರಿಗೆ ಮರಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ನೆಟ್ ಬೌಲರ್ ಟಿ. ನಟರಾಜನ್ ತಂಡದಲ್ಲಿ ಉಮೇಶ್ ಯಾದವ್ ಸ್ಥಾನವನ್ನು ತುಂಬುವ ನಿರೀಕ್ಷೆ ಇದೆ. ಆದರೆ 3ನೇ ಟೆಸ್ಟ್‌ಗೆ ಆಡುವ ಬಳಗದಲ್ಲಿ ಉಮೇಶ್ ಸ್ಥಾನವನ್ನು ಶಾರ್ದೂಲ್ ಠಾಕೂರ್ ತುಂಬುವ ಸಾಧ್ಯತೆ ಎದುರಾಗಿದೆ.

    ಇದನ್ನೂ ಓದಿ: PHOTO | ಎಂಸಿಜಿಯಲ್ಲಿ ರೋಹಿತ್ ಶರ್ಮ ಅಭ್ಯಾಸ ಶುರು

    ಎಡಗೈ ವೇಗಿಯಾಗಿರುವ ಕಾರಣ ವೈವಿಧ್ಯತೆಯ ದೃಷ್ಟಿಯಿಂದ ನಟರಾಜನ್ ಆಯ್ಕೆಗೆ ಒಲವು ಇದ್ದರೂ, ಅವರು ತಮಿಳುನಾಡು ಪರ ಇದುವರೆಗೆ ಕೇವಲ 1 ಪ್ರಥಮ ದರ್ಜೆ ಪಂದ್ಯವನ್ನಷ್ಟೇ ಆಡಿರುವುದು ಹಿನ್ನಡೆಯಾಗಿದೆ. ಶಾರ್ದೂಲ್ ಠಾಕೂರ್ 2018ರಲ್ಲಿ ವಿಂಡೀಸ್ ವಿರುದ್ಧ ಪದಾರ್ಪಣೆಯ ಟೆಸ್ಟ್‌ನಲ್ಲೇ ಗಾಯಗೊಂಡು, ಕೇವಲ 10 ಎಸೆತಗಳನ್ನಷ್ಟೇ ಎಸೆದಿದ್ದರೂ, ರಣಜಿ ಟ್ರೋಫಿಯಲ್ಲಿ ಮುಂಬೈ ಪರ 50ಕ್ಕೂ ಅಧಿಕ ಪಂದ್ಯವಾಡಿದ ಅನುಭವ ಹೊಂದಿದ್ದಾರೆ. ಅಲ್ಲದೆ, ಉಪಯುಕ್ತ ಬ್ಯಾಟಿಂಗ್ ಕೂಡ ಮಾಡಬಲ್ಲ ಶಾರ್ದೂಲ್ ಸೇರ್ಪಡೆ ಬಾಲಂಗೋಚಿ ವಿಭಾಗದ ವೈಲ್ಯವನ್ನೂ ನಿವಾರಿಸಬಹುದು ಎಂಬ ಲೆಕ್ಕಾಚಾರ ಹಾಕಲಾಗಿದೆ.

    ಕಳೆದ 7 ಟೆಸ್ಟ್ ಇನಿಂಗ್ಸ್‌ಗಳಲ್ಲೂ ಭಾರತ ತಂಡ 50ಕ್ಕಿಂತ ಕಡಿಮೆ ರನ್‌ಗೆ ಕೊನೇ 5 ವಿಕೆಟ್ ಕಳೆದುಕೊಂಡಿರುವುದು ಕಳವಳಕಾರಿಯಾಗಿದೆ. ಸಿಡ್ನಿಗೆ ತಲುಪಿದ ಬಳಿಕ ಕೋಚ್ ರವಿಶಾಸ್ತ್ರಿ, ನಾಯಕ ಅಜಿಂಕ್ಯ ರಹಾನೆ ಮತ್ತು ಬೌಲಿಂಗ್ ಕೋಚ್ ಭರತ್ ಅರುಣ್ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.

    PHOTO| 2020ಕ್ಕೆ ಬೆನ್ನು ತೋರಿಸಿದ ಕ್ರಿಕೆಟರ್ ವೇದಾ, ಗಮನಸೆಳೆದ ಟ್ಯಾಟೂ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts