More

    ಶರಣರ ಸಂದೇಶಗಳು ಸರ್ವಕಾಲಿಕ

    ವಿಜಯಪುರ: ಬಸವಾದಿ ಶರಣ ಸಂದೇಶಗಳು ಸರ್ವಕಾಲಿಕ. ಅವರು ಮಾನವೀಯ ಮೌಲ್ಯಗಳನ್ನು ಕಾಪಾಡುವುದರ ಜೊತೆಗೆ ನಾಡಿನಲ್ಲಿ ಸಾಮರಸ್ಯ ಹಾಗೂ ಭಾವೈಕ್ಯತೆ ಮೂಡಿಸುವ ಕಾರ್ಯಮಾಡಿದ್ದಾರೆ ಎಂದು ಸಾಹಿತಿ ಶೋಭಾ ಮೆಡೆಗಾರ ಅಭಿಪ್ರಾಯಿಸಿದರು.

    ಇಲ್ಲಿನ ಕನಕದಾಸ ಬಡಾವಣೆಯ ಬಾಲಕಿಯರ ವಸತಿ ನಿಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಗುರುವಾರ ನಡೆದ ಡಾ. ಎಸ್.ಎಂ. ಶಿರಗುಪ್ಪಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಬಸವಾದಿ ಶರಣರು ಅವರ ವಚನಗಳು ಇಂದಿಗೂ ನಮ್ಮೆಲ್ಲರ ಬಾಳಿಗೆ ಬೆಳಕಾಗಿವೆ. ಶರಣರ ವಚನಗಳಿಲ್ಲದೆ ನಾವು ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ. ವಚನ ಸಾಹಿತ್ಯ ಕನ್ನಡ ಸಾಹಿತ್ಯದ ತಳಹದಿಯಾಗಿದೆ. ಆದ್ದರಿಂದ ಬಸವಾದಿ ಶರಣರ ವಿಚಾರಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

    ಬಿ.ಪಿ. ಹಿರೇಮಠ ನೀಡಿದ ಜ.ಚ.ನಿ. ದತ್ತಿ ಉಪನ್ಯಾಸದಲ್ಲಿ ಶಿಕ್ಷಕಿ ಕವಿತಾ ಕಲ್ಯಾಣಪ್ಪಗೋಳ ಮಾತನಾಡಿ, ಜ.ಚ.ನಿ. ಅವರು ಕಾಯಕ ಸಿದ್ಧಾಂತಕ್ಕೆ ಮಹತ್ವ ನೀಡಿದವರು. ಶಿವಯೋಗದಲ್ಲಿ ಪರಮಾತ್ಮನನ್ನು ಕಂಡವರು. ಮಾನವೀಯ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಲು ರಾಜ್ಯಾದ್ಯಂತ ಪ್ರವಚನಗಳನ್ನು ಮಾಡಿ ಸಿದ್ದಿಪುರುಷರಾದರು. ಬೆಂಗಳೂರಿನ ನಿಡುಮಾಮಿಡಿ ಮಠದ ಮೂಲ ಸಂಸ್ಥಾಪಕರಾದ ಜ.ಚ.ನಿ. ವಿಜಯಪುರದ ಜಿಲ್ಲೆಗೆ ಚಿರಪರಿಚಿತರಾಗಿದ್ದರು ಎಂದರು.

    ತಾಲೂಕು ಕಲ್ಯಾಣಾಧಿಕಾರಿ ಬಸವರಾಜ ಅಂಗಡಿ ಮಾತನಾಡಿ, ವಿಜಯಪುರ ಜಿಲ್ಲೆ ಶರಣ ಸಿದ್ಧಾಂತಗಳನ್ನು ಅಳವಡಿಸಿಕೊಂಡು ನಾಡಿಗೆ ಮಾದರಿಯಾಗಿದೆ. ಪ್ರತಿಮನೆಗಳಲ್ಲಿ ಶರಣರ ಚಿಂತನೆಗಳು ಕಾಣುತ್ತೇವೆ. ಕಾಯಕವೇ ಕೈಲಾಸ ಎಂಬ ಸಿದ್ಧಾಂತದಲ್ಲಿ ನಂಬಿಕೆ ಇಟ್ಟವರು ನಾವು ಎಂದರು.

    ಉಪನ್ಯಾಸಕಿ ಲತಾ ಗುಂಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಧ್ಯಾಪಕಿ ಸುವರ್ಣಾ ಹುರಕಡ್ಲಿ ಉದ್ಘಾಟಿಸಿದರು. ಸಂಗೀತಾ ಮಠಪತಿ, ರಾಜೇಸಾಬ ಶಿವನಗುತ್ತಿ, ಉಮೇಶ ಹಿರೇಮಠ, ಡಾ. ಎಸ್.ಎಂ. ಶಿರಗುಪ್ಪಿ, ಗೀತಾ ಮೂಲಿಮನಿ, ಕೆ. ಸುನಂದಾ, ಸುನೀತಾ ಜೊಯಿಸ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts