More

    ಶ್ರೀ ಶರಣಬಸವೇಶ್ವರ ರಥೋತ್ಸವ ಅದ್ದೂರಿ

    ಗಂಗಾವತಿ: ತಾಲೂಕಿನ ಬಸಾಪಟ್ಟಣದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರೆ ನಿಮಿತ್ತ ಭಾನುವಾರ ಸಂಜೆ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು.

    ಬೆಳಗ್ಗೆ ಮೂರ್ತಿಗೆ ಮಹಾರುದ್ರಾಭಿಷೇಕ, ಗಣಾರಾಧನೆ, ಅನ್ನಸಂತರ್ಪಣೆ, ಪುರಾಣ ಮಹಾಮಂಗಲ ನಡೆ ಮತ್ತು ಸಂಜೆ ವೇಳೆ ಸರ್ವಾಲಂಕೃತ ರಥೋತ್ಸವ ಜರುಗಿತು.
    ಗಂಗಾವತಿ ನಗರದ ಶ್ರೀ ಶರಣಬಸವೇಶ್ವರ ನಗರದ ಶ್ರೀ ಶರಣಬಸವೇಶ್ವರ ದೇವಾಲಯದ ಜಾತ್ರೋತ್ಸವ ನಿಮಿತ್ತ ಉಚ್ಚಾಯ ಜರುಗಿತು. ಬೆಳಗ್ಗೆ ವಿಶೇಷ ಮೂರ್ತಿಗೆ ಅಭಿಷೇಕ, ಭಜನೆ, ಸಾಮೂಹಿಕ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಉಡುಮಕಲ್ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರೋತ್ಸವ ನಿಮಿತ್ತ ಸಾಮೂಹಿಕ ವಿವಾಹ ನಡೆಯಿತು. ದೇವಾಲಯದಲ್ಲಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಒಂದು ಜೋಡಿ ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

    ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿದರು. ಅಕ್ರಮ ಸಕ್ರಮ ಸಮಿತಿ ಸದಸ್ಯ ಸಿದ್ದಲಿಂಗಯ್ಯ ಗಡ್ಡಿಮಠ, ಗ್ರಾಪಂ ಸದಸ್ಯರಾದ ಹನುಮನಗೌಡ, ಯಂಕಪ್ಪ, ಮುಖಂಡರಾದ ಶೇಖರ್ ಭಜಂತ್ರಿ, ತಿಪ್ಪಣ್ಣ ಬುನ್ನಟ್ಟಿ, ಶಿವಮೂರ್ತಿ ಗೌಡ, ಶರಣಯ್ಯಸ್ವಾಮಿ ಮರಳಿಮಠ, ದುರುಗೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts