More

    ಶಿಶಿರ್, ಉದಯಚಂದ್ರ ಜೋಡಿಗೆ ಪ್ರಶಸ್ತಿ, ರೋಟರಾಕ್ಟ್ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧಾ ಕೂಟ

    ಮಂಗಳೂರು: ಜಿಲ್ಲಾ ರೋಟರಾಕ್ಟ್ ಸಂಸ್ಥೆಯ ಆಶ್ರಯದಲ್ಲಿ ರೋಟರಾಕ್ಟ್ ಮಾಹಿತಿ ಮತ್ತು ಜಾಗೃತಿ ಅಭಿಯಾನದ ಅಂಗವಾಗಿ ದಿ. ಶಾಂತರಾಮ ವಾಮಂಜೂರು ಸ್ಮಾರಕ 17ನೇ ವಾರ್ಷಿಕ ಅಂತರಕ್ಲಬ್ ಜಿಲ್ಲಾ ಮಟ್ಟದ ರೋಟರಾಕ್ಟ್ ರಸಪ್ರಶ್ನೆ ಸ್ಪರ್ಧಾ ಕೂಟವು ಸಂಸ್ಥೆಯ ಸಭಾಪತಿ ಡಾ. ದೇವದಾಸ್ ರೈ ನೇತೃತ್ವದಲ್ಲಿ ಭಾನುವಾರ ಜರುಗಿತು.

    ರೋಟರಾಕ್ಟ್ ಮೈಸೂರು ಸಂಸ್ಥೆಯನ್ನು ಪ್ರತಿನಿಧಿಸಿದ ಶಿಶಿರ್ ಮತ್ತು ಉದಯಚಂದ್ರ ಜೋಡಿ ತಂಡ ಪ್ರಥಮ ಸ್ಥಾನ ಗಳಿಸಿತು. ರೋಟರಾಕ್ಟ್ ಮಂಗಳೂರು ಸಿಟಿ ಸಂಸ್ಥೆಯನ್ನು ಪ್ರತಿನಿಧಿಸಿದ ಅರ್‌ವಿನ್ ಡಿಸೋಜ ಮತ್ತು ಪೂಜಾ ಜೋಡಿ ತಂಡವು ದ್ವಿತೀಯ ಸ್ಥಾನ ಪಡೆಯಿತು. ಮಂಗಳೂರು ಸಿಟಿ ಸಂಸ್ಥೆಯ ಅಧ್ಯಕ್ಷ ಅರ್ಜುನ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರು, ಮಂಗಳೂರು, ಪುತ್ತೂರು, ತಿಂಗಳಾಡಿ ಂಸ್ಥೆಗಳ 13 ತಂಡಗಳು ಅಂತಿಮ ಮತ್ತು ನಿರ್ಣಾಯಕ ಸುತ್ತಿಗೆ ಪ್ರವೇಶ ಪಡೆದ್ದಿದವು.

    ತುಳು ಚಲನಚಿತ್ರ ನಟ ಬೋಜರಾಜ್ ವಾಮಂಜೂರ್ ಅತಿಥಿಯಾಗಿದ್ದರು. ಸಹೋದರ ಶಾಂತಾರಾಮ ವಾಮಂಜೂರು ಸ್ಮರಣಾರ್ಥ ವರ್ಷಂಪ್ರತಿ ಈ ಸ್ಪರ್ಧಾಕೂಟ ಆಯೋಜಿಸುವ ರೋಟರಾಕ್ಟ್ ಕಾರ್ಯ ಶ್ಲಾಘನೀಯ ಎಂದ ಅವರು, ರೋಟರಾಕ್ಟ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ, ಪ್ರಮಾಣ ಪತ್ರ ಪ್ರದಾನ ಮಾಡಿದರು.

    ರೋಟರಾಕ್ಟ್ ಜಿಲ್ಲಾ ಸಮಿತಿ ಅಧ್ಯಕ್ಷ ರತ್ನಾಕರ್ ರೈ ಅತಿಥಿಯಾಗಿ ಪಾಲ್ಗೊಂಡು ರೋಟರಾಕ್ಟ್ ಯುವ ಸದಸ್ಯರು ಸಂಸ್ಥೆಯ ಧ್ಯೇಯ, ನೀತಿ, ಮಾಹಿತಿ, ಉದ್ದೇಶಗಳ ಜ್ಞಾನವನ್ನು ವೃದ್ಧಿಸಬೇಕು ಮತ್ತು ಸಂಸ್ಥೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.

    ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಅಧ್ಯಕ್ಷರಾದ ಸಾಯಿಬಾಬಾ ರಾವ್ ಗೌರವ ಅತಿಥಿಯಾಗಿ ಪಾಲ್ಗೊಂಡು ಸ್ಪರ್ಧಾ ವಿಜೇತರ ವಿಶಿಷ್ಟ ಸಾಧನೆಯನ್ನು ಶ್ಲಾಘಿಸಿದರು.

    ಗಣೇಶ್ ವಂದಿಸಿದರು. ಸ್ಪರ್ಧಾಕೂಟವನ್ನು ರೋಟರಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ ಸಭಾಪತಿ ಡಾ. ದೇವದಾಸ್ ರೈ ನಿರೂಪಿಸಿದ್ದರು. ದಿ.ಶಾಂತರಾಮ್ ವಾಮಂಜೂರ್ ಸಂಸ್ಥೆಯ ನಿಷ್ಠಾವಂತ ಸದಸ್ಯನಾಗಿದ್ದು, ನಿಸ್ವಾರ್ಥ ಸೇವಾ ಮನೋಭಾವ ಹೊಂದಿದ್ದು 2006ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ವಾಹನ ಅಪಘಾತದಲ್ಲಿ ವಿಧಿವಶರಾಗಿದ್ದರು. ಅವರ ಸ್ಮರಣಾರ್ಥ ವಾರ್ಷಿಕ ರೋಟರಾಕ್ಟ್ ರಸಪ್ರಶ್ನಾ ಕೂಟ ನಡೆಯುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts