More

    ಭಾರತದ ಅತೀ ದೊಡ್ಡ ಪ್ಯಾನ್​ ಇಂಡಿಯಾ ಚಿತ್ರವನ್ನು ನಿರ್ದೇಶಿಸುತ್ತಾರಂತೆ ಶಂಕರ್​!

    ಚೆನ್ನೈ: ಕೆಲವು ವರ್ಷಗಳಿಂದ ಪ್ಯಾನ್​ ಇಂಡಿಯಾ ಚಿತ್ರಗಳು ಟ್ರೆಂಡ್​ ನಡೆಯುತ್ತಿದೆ. ಇದುವರೆಗೂ ಎಸ್​.ಎಸ್​. ರಾಹಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಚಿತ್ರವೇ ಭಾರತದ ಅತೀ ದೊಡ್ಡ ಮತ್ತು ಅತೀ ಹೆಚ್ಚು ಬಜೆಟ್​ನ ಪ್ಯಾನ್​ ಇಂಡಿಯಾ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈಗ ಆ ದಾಖಲೆಯನ್ನು ತಮಿಳು ನಿರ್ದೇಶಕ ಶಂಕರ್​ ಮುರಿಯುವುದಕ್ಕೆ ಹೊರಟಿದ್ದಾರೆ.

    ಇದನ್ನೂ ಓದಿ: ನಾನಿನ್ನೂ ಸತ್ತಿಲ್ಲ; ತಮ್ಮ ಅನಾರೋಗ್ಯದ ಬಗ್ಗೆ ಗಾಳಿಸುದ್ದಿ ಹಬ್ಬಿಸಿದವರ ಬಗ್ಗೆ ಸಮಂತಾ ಬೇಸರ

    ಬಾಲಿವುಡ್​ ನಟ ರಣವೀರ್​ ಸಿಂಗ್​ ಅಭಿನಯದಲ್ಲಿ ‘ಅನ್ನಿಯನ್​’ ಚಿತ್ರವನ್ನು ಶಂಕರ್​, ಹಿಂದಿಗೆ ರೀಮೇಕ್​ ಮಾಡುವುದಕ್ಕೆ ಹೊರಟಿರುವುದು ಹಳೆಯ ವಿಷಯ. ಈಗ ಆ ಚಿತ್ರವನ್ನು ಪಕ್ಕಕ್ಕಿಟ್ಟಿರುವ ಶಂಕರ್​, ಅದಕ್ಕೂ ಮೊದಲು ಇನ್ನೊಂದು ಚಿತ್ರವನ್ನು ಕೈಗೆತ್ತಿಕೊಳ್ಳುತ್ತಿದ್ದಾರಂತೆ. ಈ ಚಿತ್ರದ ವಿಶೇಷ ಏನು ಗೊತ್ತಾ? ತಮಿಳು ಸಾಹಿತ್ಯದಲ್ಲೇ ದೊಡ್ಡ ಹೆಸರು ಮಾಡಿರುವ ವೆಲ್​ಪರಿ ಎಂಬ ಐತಿಹಾಸಿಕ ಕಾದಂಬರಿಯನ್ನು ಈ ಚಿತ್ರ ಆಧರಿಸಲಿದೆ.

    ಸು. ವೆಂಕಟೇಶನ್​ ಎನ್ನುವವರು ಬರೆದಿರುವ ‘ವೆಲ್​ಪರಿ’ ಕಾದಂಬರಿಯು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿದೆ. ಸುಮಾರು ಆರು ವರ್ಷಗಳ ಕಾಲ ವೆಂಕಟೇಶನ್​ ಅವರು ಸಾಕಷ್ಟು ರೀಸರ್ಚ್​ ಮಾಡಿ ಈ ಕಾದಂಬರಿಯನ್ನು ಬರೆದಿದ್ದು, ಇದು ತಮಿಳು ಸಾಹಿತ್ಯ ಬಹಳ ಪ್ರಮುಖವಾದ ಕಾದಂಬರಿ ಎಂದು ಹೇಳಲಾಗುತ್ತಿದೆ. ಈ ಕಾದಂಬರಿಯನ್ನು ಮೂಲವಾಗಿಟ್ಟುಕೊಂಡು ಶಂಕರ್​, ಮೂರು ಭಾಗಗಳ ಚಿತ್ರಗಳನ್ನು ತೆರೆಗೆ ತರುವ ಯೋಚನೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಈ ಕಾದಂಬರಿಯಲ್ಲಿ ಎಲ್ಲವೂ ಇದೆಯಂತೆ. ಒಂದು ಅದ್ಭುತವಾದ ಪ್ರೇಮಕಥೆಯ ಜತೆಗೆ ಆಕ್ಷನ್​, ಸೆಂಟಿಮೆಂಟ್​ ಎಲ್ಲವೂ ಇದೆಯಂತೆ. ಇನ್ನು, ಗ್ರಾಫಿಕ್ಸ್​ ಸಹ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದೆಯಂತೆ. ಇಷ್ಟೆಲ್ಲ ಗುಣಗಳಿರುವುದರಿಂದಲೇ ಈ ಚಿತ್ರವನ್ನು ಶಂಕರ್​ ಕೈಗೆತ್ತಿಕೊಳ್ಳುವುದಕ್ಕೆ ಮುಂದಾಗಿದ್ದು, ಈಗಾಗಲೇ ಚಿತ್ರದ ಕೆಲಸಗಳನ್ನು ಅವರು ಶುರು ಮಾಡಿದ್ದಾರೆ ಎಂದು ಹೇಳಲಾಗಿದೆ.

    ಇದನ್ನೂ ಓದಿ: ‘ಕಾಂತಾರ’ ಸಹ ನನ್ನ ಚಿತ್ರವೇ ಎಂದ ಯಶ್​

    ಅಂದಹಾಗೆ, ‘ವೆಲ್​ಪರಿ’ ಚಿತ್ರೀಕರಣ ಶುರುವಾಗುವುದಕ್ಕೆ ಒಂದಿಷ್ಟು ಸಮಯವಿದೆ. ಮೊದಲಿಗೆ ಶಂಕರ್​, ರಾಮ್​ಚರಣ್​ ತೇಜ ಅಭಿನಯದ ಚಿತ್ರ ಮುಗಿಸಬೇಕು. ಆ ನಂತರ ಕಮಲ್​ ಹಾಸನ್​ ಅಭಿನಯದ ‘ಇಂಡಿಯನ್​ 2’ ಬಿಡುಗಡೆ ಮಾಡಬೇಕು. ಆಮೇಲಷ್ಟೇ ಈ ಚಿತ್ರ ಪ್ರಾರಂಭವಾಗಲಿದೆ.

    ಹೊಸ ಮನೆ ಗೃಹಪ್ರವೇಶ ಮಾಡಿದ ಕೃಷ್ಣ-ಮಿಲನಾ … ಮನೆ ಹೆಸರೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts