More

    ಮೊಹಮದ್ ಶಮಿ ಕಾರ್ಯಕ್ಕೆ ಬಿಸಿಸಿಐ ಮೆಚ್ಚುಗೆ

    ಬೆಂಗಳೂರು: ಭಾರತದ ವೇಗದ ಬೌಲರ್ ಮೊಹಮದ್ ಶಮಿ ಕೋವಿಡ್-19ರ ವಿರುದ್ಧದ ತಮ್ಮ ಹೋರಾಟ ಮುಂದುವರಿಸಿದ್ದಾರೆ. ತವರಿನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರಿಗೆ ಆಹಾರ ವಿತರಿಸುವ ಮೂಲಕ ಸಾಮಾಜಿಕ ಚಟುವಟಿಕೆಗಳಿಂದ ಗಮನಸೆಳೆಯುತ್ತಿದ್ದಾರೆ. ಶಮಿಯಿಂದ ದೂರವಿದ್ದರೂ ಪತ್ನಿ ಹಸೀನ್ ಜರಾನ್, ಜತೆಗಿದ್ದಾಗ ತೆಗೆದಿದ್ದ ಬೆತ್ತಲೆ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಮಾನಸಿಕ ಯಾತನೆ ನೀಡಲು ಯತ್ನಿಸುತ್ತಿದ್ದರೂ ಭಾರತ ತಂಡದ ವೇಗ ಬೌಲರ್ ಶಮಿ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಸಾಮಾಜಿಕ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಶಮಿ ಕಾರ್ಯಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೆಚ್ಚುಗೆ ಸೂಚಿಸಿದೆ.

    ಇದನ್ನೂ ಓದಿ: ಸತ್ತ ತಾಯಿಯ ಎಬ್ಬಿಸುತ್ತಿದ್ದ ಮಗುವಿಗೆ ಶಾರೂಖ್​ ಸಹಾಯ …

    ಉತ್ತರ ಪ್ರದೇಶದ ಸಹಾಸ್ಪುರ್‌ದವರಾದ ಶಮಿ ತವರಿನಲ್ಲಿ ವಲಸೆ ಕಾರ್ಮಿಕರು ಅನುಭವಿಸುತ್ತಿರುವ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಬಸ್‌ಗಳಲ್ಲಿ ತವರಿನತ್ತ ಪ್ರಯಾಣಿಸುತ್ತಿರುವ ವಲಸೆ ಕಾರ್ಮಿಕರಿಗೆ ದಿನಂಪ್ರತಿ ಶಮಿ ಆಹಾರ ಪೊಟ್ಟಣ ವಿತರಿಸುತ್ತಿದ್ದಾರೆ. ಉತ್ತರ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 24ರಲ್ಲಿ ಶಮಿ ಈ ಸಾಮಾಜಿಕ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಬಿಸಿಸಿಐ ವಿಡಿಯೋ ಸಹಿತ ಟ್ವೀಟ್ ಮಾಡಿದೆ. ಕರೊನಾ ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೋಟ್ಯಂತರ ವಲಸೆ ಕಾರ್ಮಿಕರು ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ.

    ಇದನ್ನೂ ಓದಿ: ಮಹಾಭಾರತದ ಭೀಮಾ, ಏಷ್ಯಾಡ್ ಚಾಂಪಿಯನ್ !

    ಶಮಿ ಪತ್ನಿ, ಮಾಜಿ ರೂಪದರ್ಶಿ ಹಸೀನ್ ಜಹಾನ್ ಭಾನುವಾರವಷ್ಟೇ ಇಬ್ಬರು ಬೆತ್ತಲಾಗಿರುವ ೆಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು. ಶಮಿ-ಹಸೀನ್ ಜೋಡಿ ಪ್ರೀತಿಸಿ 2014ರಲ್ಲಿ ಮದುವೆಯಾಗಿದ್ದರು. 2015ರಲ್ಲಿ ಹೆಣ್ಣುಮಗು ಹುಟ್ಟಿದೆ. 2018ರಲ್ಲಿ ಶಮಿ ವಿರುದ್ಧ ಕೌಟುಂಬಿಕ ದೌರ್ಜನ್ಯದ ಆರೋ ಮಾಡಿರುವ ಹಸಿನ್ ಶಮಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಜತೆ ಶಮಿ ವಿರುದ್ಧ ಕೊಲೆ ಯತ್ನ, ಮ್ಯಾಚ್ ಫಿಕ್ಸಿಂಗ್, ಇತರ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ದೂರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts