More

  ಶಾಂಭವಿಗೆ ನೂರರ ಸಡಗರ ; ಅನಾಥಾಶ್ರಮದ ಮಕ್ಕಳ ಜತೆ ಧಾರಾವಾಹಿ ತಂಡದ ಆಚರಣೆ

  ವಿಜಯವಾಣಿ ಸುದ್ದಿಜಾಲ ಬೆಂಗಳೂರು

  ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಶಾಂಭವಿ’ ಧಾರಾವಾಹಿಯ ಮೂಲಕ ‘ಸಿಂಪಲ್ಲಾಗ್ ಒಂದು ಲವ್‌ಸ್ಟೋರಿ’ ಸಿನಿಮಾ ನಿರ್ದೇಶಕ ಸಿಂಪಲ್ ಸುನಿ ಕಿರುತೆರೆಗೆ ನಿರ್ಮಾಪಕರಾಗಿ ಪದಾರ್ಪಣೆ ಮಾಡಿರುವುದು ಗೊತ್ತಿದೆ. ಸುನಿ ಸಿನಿಮಾಸ್ ಬ್ಯಾನರ್‌ನಲ್ಲಿ, ರವಿತೇಜ ನಿರ್ದೇಶನದಲ್ಲಿ ಈ ಧಾರಾವಾಹಿ ಮೂಡಿಬರುತ್ತಿದೆ. ಇದೀಗ ‘ಶಾಂಭವಿ’ ಸೀರಿಯಲ್ ತಂಡ ನೂರು ಕಂತುಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಹೆಸರುಘಟ್ಟದ ಕಾವೇರಿ ವನಿತಾ ಸೇವಾಶ್ರಮದ ಅನಾಥ ಮಕ್ಕಳೊಂದಿಗೆ ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸಿದೆ.

  ಇದನ್ನೂ ಓದಿ : ಶ್ರೀ ವಿಜಯ ದಾಸರ ಜೀವನಗಾಥೆ ; ಧ್ವನಿ ಸುರುಳಿ ಬಿಡುಗಡೆ ಮಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

  ಶಾಂಭವಿಗೆ ನೂರರ ಸಡಗರ ; ಅನಾಥಾಶ್ರಮದ ಮಕ್ಕಳ ಜತೆ ಧಾರಾವಾಹಿ ತಂಡದ ಆಚರಣೆ

  ವಿಶೇಷ ಅಂದರೆ ಕನ್ನಡದ ‘ಶಾಂಭವಿ’ ತೆಲುಗಿನಲ್ಲಿ ‘ಭೈರವಿ’ ಎಂದು ಹಾಗೂ ಮೊದಲ ಬಾರಿಗೆ ಮರಾಠಿ ಭಾಷೆಯಲ್ಲೂ ರಿಮೇಕ್ ಆಗುತ್ತಿದೆ. ಶಿವಗಾಮಿ, ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಆಗರ್ಭ ಶ್ರೀಮಂತೆ. ಆಕೆಯ ಸಂಸ್ಥೆಗೆ ಶಿಕ್ಷಕನಾಗಿ ಸೇರುವ ನಾಯಕ ಅಶೋಕನನ್ನು ಪ್ರೀತಿಸಿ ಮದುವೆಯಾಗುತ್ತಾಳೆ. ಅವರಿಗೆ ಜನಿಸುವ ಮಗುವೇ ಶಾಂಭವಿ. ಕಥೆ ಸಾಗಿದಂತೆ ಮಗಳು ಶಾಂಭವಿ ಕಾಣೆಯಾಗಿ, ತಾಯಿ ಶಿವಗಾಮಿ ಹುಚ್ಚಿಯಾಗುತ್ತಾಳೆ. ಮುಂದೆ ಅನೇಕ ತಿರುವುಗಳನ್ನು ಪಡೆಯುತ್ತಾ ಸಾಗುವ ಕಥೆ ‘ಶಾಂಭವಿ’.

  ಇದನ್ನೂ ಓದಿ : ಪರಭಾಷೆಗೆ ಹೊರಟ ಮತ್ತೊಬ್ಬ ಕನ್ನಡದ ಹುಡುಗಿ ! ಕಾಲಿವುಡ್​ನಲ್ಲಿ ಮಿಂಚಲು ರೆಡಿಯಾದ ರಾಬರ್ಟ್​ ನಟಿ ಶುಭ ರಕ್ಷಾ

  ಶಾಂಭವಿಗೆ ನೂರರ ಸಡಗರ ; ಅನಾಥಾಶ್ರಮದ ಮಕ್ಕಳ ಜತೆ ಧಾರಾವಾಹಿ ತಂಡದ ಆಚರಣೆ

  ಶಾಂಭವಿ ಮತ್ತು ಭೈರವಿ ಎಂಬ ಎರಡು ಪಾತ್ರಗಳಲ್ಲಿ ಬೇಬಿ ರಚನಾ, ಅಮ್ಮನಾಗಿ ಐಶ್ವರ್ಯ ಸಿಂಧೋಗಿ, ಖಳನಟನಾಗಿ ಚೇತನ್ ಗಂಧರ್ವ ಜತೆ ಸೋನಂ ರೈ, ಅಂಬುಜಾಕ್ಷಿ, ಪೂಜಿತಾ, ಡಾಲಿ ರಾಜೇಶ್, ಸೂರ್ಯ, ರೋಹಿತ್, ಶ್ಯಾಮಲಮ್ಮ ತಾರಾಗಣದಲ್ಲಿದ್ದಾರೆ. ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7.30ಕ್ಕೆ ‘ಶಾಂಭವಿ’ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts