More

    ಗುರುಬಕ್ಕೇಶ್ವರ ಸ್ವಾಮಿಗೆ 281 ಗ್ರಾಂ ತೂಕದ ಬಂಗಾರದ ಚೌಕ ಸಮರ್ಪಿಸಿದ ಶಾಮನೂರು ಶಿವಶಂಕರಪ್ಪ

    ದಾವಣಗೆರೆ: ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ, ದಾವಣಗೆರೆಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು ತಮ್ಮ ಆರಾಧ್ಯದೈವ ಶ್ರೀ ಗುರುಬಕ್ಕೇಶ್ವರ ಸ್ವಾಮಿಗೆ ಮಕರ ಸಂಕ್ರಾಂತಿಯ ಶುಕ್ರವಾರದಂದು 281 ಗ್ರಾಂ ತೂಕದ ಬಂಗಾರದ ಚೌಕ ಅರ್ಪಿಸಿದರು.

    ಕುಟುಂಬ ಸದಸ್ಯರೊಂದಿಗೆ ಬೆಳಗ್ಗೆ ನಗರದ ಚೌಕಿಪೇಟೆಯಲ್ಲಿರುವ ಗುರುಬಕ್ಕೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಸಂಕ್ರಾಂತಿಯ ಪೂಜೆ ಸಲ್ಲಿಸಿ ಚಿನ್ನದ ಚೌಕವನ್ನು ಸಮರ್ಪಿಸಿದರು. ಚೌಕದ ಜತೆಗೆ ಅದಕ್ಕೆ ಬಳಸುವ ಶಿವದಾರವನ್ನು ಕೂಡ ಚಿನ್ನದಿಂದಲೇ ತಯಾರಿಸಲಾಗಿದ್ದು ಎರಡೂ ಸೇರಿ 281 ಗ್ರಾಂ ತೂಕವಿದೆ.

    ದಾವಣಗೆರೆಯ ವಿಜಯಲಕ್ಷ್ಮಿ ರಸ್ತೆಯಲ್ಲಿರುವ ಆರ್.ಎಚ್.ರಾಧಾಕೃಷ್ಣ ಗುಪ್ತಾ ಜುವೆಲರ್ಸ್ ಇದನ್ನು ತಯಾರಿಸಿದೆ. ಕಳೆದ ಎರಡು ವರ್ಷಗಳ ಹಿಂದೆ ಆರಾಧ್ಯದೈವಕ್ಕೆ ಚಿನ್ನದ ಚೌಕ ನೀಡಲು ಮನಸ್ಸಿನಲ್ಲಿ ಅಂದುಕೊಂಡಿದ್ದೆ. ಅದು ಇಂದು ಈಡೇರಿದೆ ಎಂದು ಶಾಮನೂರು ಶಿವಶಂಕರಪ್ಪ ತಿಳಿಸಿದರು. ದಾವಣಗೆರೆಯಿಂದ ಹೊರಗೆ ಹೋಗುವಾಗ ಕಡ್ಡಾಯವಾಗಿ ಬಕ್ಕೇಶ್ವರನ ಗುಡಿಗೆ ಹೋಗಿ ನಮಸ್ಕರಿಸಿ ಮುಂದೆ ಪ್ರಯಾಣ ಬೆಳೆಸುವುದು ಶಾಮನೂರು ಪಾಲಿಸಿಕೊಂಡು ಬಂದ ಪದ್ಧತಿ.

    ಚೌಕ ಹಾಗೂ ಕಾಣಿಕೆ ಸಮರ್ಪಣೆ ವೇಳೆ ಶಾಮನೂರು ಪುತ್ರ, ಉದ್ಯಮಿ ಎಸ್.ಎಸ್. ಗಣೇಶ್, ಡಾ.ಎಸ್.ಬಿ. ಮುರುಗೇಶ್, ಸೊಸೆಯಂದಿರಾದ ಪ್ರೀತಿ ಬಕ್ಕೇಶ್, ರೇಖಾ ಗಣೇಶ್, ಪ್ರಭಾ ಮಲ್ಲಿಕಾರ್ಜುನ, ಅಭಿಷೇಕ್ ಹಾಗೂ ಅಥಣಿ ವೀರಣ್ಣ ದಂಪತಿ ಉಪಸ್ಥಿತರಿದ್ದರು. ಮಾಜಿ ಶಾಸಕ ಯಜಮಾನ್ ಮೋತಿ ವೀರಣ್ಣ, ಬಕ್ಕೇಶ್ವರ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಮಾಗಾನಹಳ್ಳಿ ಶಿವಾನಂದಪ್ಪ, ಉಪಾಧ್ಯಕ್ಷ ಮಾಗಾನಹಳ್ಳಿ ಜಯಣ್ಣ, ಖಜಾಂಚಿ ಮಾಗಾನಹಳ್ಳಿ ವಿನಯ್ ಇತರರಿದ್ದರು.

    ಹುಷಾರು.. ಕರೊನಾ ಮೂರನೇ ಅಲೆ ಮೊದಲೆರಡು ಅಲೆಗಳಿಂತಲೂ ವೇಗವಾಗಿ ದುಪ್ಪಟ್ಟಾಗುತ್ತಿದೆ..!

    ವಿವಾಹಿತೆಯೊಂದಿಗೆ ಅನೈತಿಕ ಸಂಬಂಧ; ಕೊಲೆಯಾಗಿ ಹೋದ ತಾಲೂಕು ಪಂಚಾಯತ್ ಉಪಾಧ್ಯಕ್ಷನ ಸಹೋದರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts