More

    ಗುಜರಾತ್​ ಸೇತುವೆ ದುರಂತ: ಅಷ್ಟೊಂದು ಸಾವು ಸಂಭವಿಸಲು ಕಾರಣ ತಿಳಿಸಿದ NDRF ಮುಖ್ಯಸ್ಥ

    ಅಹಮದಾಬಾದ್​: ಗುಜರಾತಿನ ಮೊರ್ಬಿಯಲ್ಲಿ ಭಾನುವಾರ ರಾತ್ರಿ ನಡೆದ ತೂಗು ಸೇತುವೆ ದುರಂತದಲ್ಲಿ 135 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಯ ಕುರಿತು ಇಡೀ ದೇಶವೇ ಕಂಬನಿ ಮಿಡಿದಿದೆ. ಸೇತುವೆ ಕುಸಿದ ಪರಿಣಾಮ ನದಿಗೆ ಬಿದ್ದು ಅಷ್ಟೊಂದು ಪ್ರಮಾಣದಲ್ಲಿ ಸಾವು ಸಂಭವಿಸಲು ಕಾರಣವಾದ ಅಂಶವನ್ನು ಭಾರತದ ವಿಪತ್ತು ನಿರ್ವಹಣಾ ಪಡೆಯ ಮುಖ್ಯಸ್ಥರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಮೊರ್ಬಿಯಲ್ಲಿರುವ ಮಚು ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಶತಮಾನ ಹಳೆಯದಾದ ಕೇಬಲ್​ ಬ್ರಿಡ್ಜ್​ನ ಎರಡು ತುದಿಯ ಕೆಳಗಿರುವ ನೀರಿನ ಮಟ್ಟ ತುಂಬಾ ಕಡಿಮೆ ಇದೆ. ಸುಮಾರು 10 ಅಡಿ ಅಥವಾ ಒಂದು ಸಣ್ಣ ಕಾರಿನ ಉದ್ದ ಅಷ್ಟೇ ಇದೆ. ಸೇತುವೆ ಕುಸಿದಾಗ, ಜನರು ದಿಢೀರನೇ ಕೆಳಗೆ ಬಿದ್ದ ರಭಸಕ್ಕೆ ತಳದಲ್ಲಿರುವ ಕಲ್ಲುಗಳಿಗೆ ಬಡಿದು ದುರಂತ ಸಂಭವಿಸಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್​ಡಿಆರ್​ಎಫ್​) ಕಮಾಂಡೆಂಡ್​ ವಿವಿಎನ್​ ಪ್ರಸನ್ನ ಕುಮಾರ್​ ಅವರು ತಿಳಿಸಿದ್ದಾರೆ.

    ನದಿಯ ಮಧ್ಯದ ಭಾಗದಲ್ಲಿ ಬಹುತೇಕ ನೀರಿನ ಹರಿವು ಇಲ್ಲದೆ ನೀರು ತಟಸ್ಥವಾಗಿದೆ. ಆ ಸ್ಥಳದಲ್ಲಿ ಸುಮಾರು 20 ಅಡಿ ಆಳವಿದೆ. ಮೃತದೇಹಗಳನ್ನು ಹುಡುಕುತ್ತಿದ್ದ ನೌಕಾಪಡೆಯ ಡೈವರ್‌ಗಳು ಸಲೀಸಾಗಿ ನದಿಯ ತಳವನ್ನು ತಲುಪಿದರು. ಆದರೆ, ನೀರು ತುಂಬಾ ಕೆಸರುಮಯವಾಗಿದ್ದರಿಂದ ಸ್ಪಷ್ಟವಾಗಿ ಗೋಚರಿಸುತ್ತಿರಲಿಲ್ಲ. ಹೀಗಾಗಿ ಮೃತದೇಹಗಳನ್ನು ಪತ್ತೆ ಮಾಡಲು ನಾವು ಕ್ಯಾಮೆರಾ ಮತ್ತು ಸೋನಾರ್ ಸಾಧನವನ್ನು ಅಳವಡಿಸಲಾಗಿರುವ ಅಲ್ಟ್ರಾಮೋಡರ್ನ್ ರಿಮೋಟ್ ಅಂಡರ್ ವಾಟರ್ ವೆಹಿಕಲ್ ಅನ್ನು ಬಳಸುತ್ತಿದ್ದೇವೆ. ನದಿಯ ತಳಪಾಯದಲ್ಲಿ ಸಾಕಷ್ಟು ಕಲ್ಲುಗಳಿವೆ. ಈ ಕಾರಣದಿಂದಲೇ ಅನೇಕ ಜನರು ಸಾವಿಗೀಡಾಗಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ಕುಮಾರ್​ ಮಾಹಿತಿ ನೀಡಿದರು.

    ನದಿಯಲ್ಲಿ ನೀರಿನ ಹರಿವು ಇಲ್ಲದೆ, ತಟಸ್ಥವಾಗಿದ್ದ ಕಾರಣ ಮುರಿದ ಸೇತುವೆಯ ಅಡಿಯಲ್ಲಿ ಬಹುತೇಕ ಮೃತದೇಹಗಳು ಪತ್ತೆಯಾಗಿವೆ. ಡೇಟಾ ಪ್ರಕಾರ ಒಂದು ಅಥವಾ ಎರಡು ಮೃತದೇಹ ಮಾತ್ರ ಬಾಕಿ ಉಳಿದಿದೆ ಎಂದು ಕುಮಾರ್ ತಿಳಿಸಿದರು.

    ನಿನ್ನೆ (ನ.1)ಯಷ್ಟೇ ಪ್ರಧಾನಿ ಮೋದಿ ಅವರು ಮೊರ್ಬಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಆರೋಗ್ಯ ವಿಚಾರಿಸಿದರು ಮತ್ತು ಅಗತ್ಯ ನೆರವು ನೀಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರ ಓಡಾಟದಿಂದಾಗಿ ಕಿರಿದಾದ ಕೇಬಲ್ ಸೇತುವೆ ಕುಸಿದಿದೆ ಎಂದು ಗುಜರಾತ್ ವಿಧಿವಿಜ್ಞಾನ ಪ್ರಯೋಗಾಲಯದ ಮೂಲಗಳು ತಿಳಿಸಿವೆ. ಈ ವರ್ಷದ ಮಾರ್ಚ್‌ನಲ್ಲಿ ಪ್ರಾರಂಭವಾದ ಏಳು ತಿಂಗಳ ನವೀಕರಣದ ಸಮಯದಲ್ಲಿ ಸೇತುವೆಯನ್ನು ಹಿಡಿದಿರುವ ಕೆಲವು ಹಳೆಯ ಕೇಬಲ್‌ಗಳನ್ನು ಬದಲಾಯಿಸದಿರುವುದು ಸಹ ದುರಂತಕ್ಕೆ ಕಾರಣ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    ನಿಮ್ಮ ಕಣ್ಣಿಗೊಂದು ಸವಾಲು: ಈ ಫೋಟೋದಲ್ಲಿ ಕುರಿಗಳ ಹಿಂಡಿನ ಮಧ್ಯೆ ಇರುವ ತೋಳವನ್ನು ಪತ್ತೆ ಹಚ್ಚುವಿರಾ?

    ಲವ್​ ಬ್ರೇಕಪ್​ಗೆ ಒಪ್ಪದ ಪ್ರಿಯಕರನಿಗೆ ವಿಷವುಣಿಸಿದ ಪ್ರೇಯಸಿ! ಸಾಯೋ ಮುನ್ನ ಯುವಕ ಆಡಿದ ಮಾತು ಮನಕಲಕುವಂತಿದೆ

    ಲವ್​ ಬ್ರೇಕಪ್​ಗೆ ಒಪ್ಪದ ಪ್ರಿಯಕರನ ಹತ್ಯೆ​ ಪ್ರಕರಣ: ಪೊಲೀಸ್​ ಠಾಣೆಯ ಬಾತ್​ರೂಮ್​ನಲ್ಲಿ ಪ್ರೇಯಸಿಯ ಹೈಡ್ರಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts