More

    ಮುಂದಿನ ಮೂರು ಚಿತ್ರಗಳು ಸೂಪರ್​ ಹಿಟ್​ ಆಗೋದು ಗ್ಯಾರಂಟಿ; ಶಾರೂಖ್​ ಭವಿಷ್ಯ

    ಶಾರ್ಜಾ: ಕಳೆದ ಮೂರು ವರ್ಷಗಳಿಂದ ಶಾರೂಖ್​ ಖಾನ್ ಹೀರೋ ಆಗಿ ಅಭಿನಯಿಸಿದ ಯಾವೊಂದು ಚಿತ್ರವೂ ಬಿಡುಗಡೆಯಾಗಿಲ್ಲ. ಅದಕ್ಕೂ ಮೊದಲು ಬಿಡುಗಡೆಯಾದ ಚಿತ್ರಗಳು ಫ್ಲಾಪ್​ ಆಗಿದ್ದವು. ಈಗ ಅವರು ಪಠಾಣ್​, ಡಂಕಿ ಮತ್ತು ಜವಾನ್​ ಚಿತ್ರಗಳಲ್ಲಿ ನಟಿಸುತ್ತಿದ್ದು, ಮೂರಕ್ಕೆ ಮೂರೂ ಚಿತ್ರಗಳು ಸೂಪರ್​ ಹಿಟ್​ ಆಗಲಿವೆ ಎಂದು ಭವಿಷ್ಯ ನುಡಿದಿದ್ದಾರೆ.

    ಇದನ್ನೂ ಓದಿ: ‘ಪುಷ್ಪ’ ಚಿತ್ರದ ಮೊದಲ ವಾರ್ಷಿಕೋತ್ಸವಕ್ಕೆ ಚಿತ್ರತಂಡದಿಂದ ಸ್ಪೆಷಲ್​ ಗಿಫ್ಟ್​​ … ಏನು ಗೊತ್ತಾ?

    ಇತ್ತೀಚೆಗೆ ಸಂದರ್ಶನದಲ್ಲಿ ಅವರನ್ನು ತಮ್ಮ ಮುಂದಿನ ಚಿತ್ರಗಳ ಬಗ್ಗೆ ಕೇಳಲಾಗಿದೆ. ಆ ಚಿತ್ರಗಳ ಬಗ್ಗೆ ನರ್ವಸ್​ ಆಗಿದ್ದೀರಾ ಎಂದರೆ, ಖಂಡಿತಾ ಇಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಕಾರಣ, ಚಿತ್ರ ಗೆಲ್ಲುತ್ತವೆ ಎಂಬ ಆತ್ಮವಿಶ್ವಾಸ.

    ಈ ಕುರಿತು ಮಾತನಾಡುವ ಅವರು, ನಾನು ದುರಹಂಕಾರದಿಂದ ಮಾತನಾಡುತ್ತಿಲ್ಲ. ಚಿತ್ರ ಗೆಲ್ಲುತ್ತದೆ ಎಂಬ ನಂಬಿಕೆಯಿಂದಲೇ ಮಲಗುತ್ತಿದ್ದೇನೆ, ಚಿತ್ರ ಗೆಲ್ಲುತ್ತದೆ ಎಂಬ ನಂಬಿಕೆಯಿಂದಲೇ ಏಳುತ್ತಿದ್ದೇನೆ. ಅದೇ ಧೈರ್ಯದಿಂದ ದಿನಕ್ಕೆ 18 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೇನೆ ಮತ್ತು 57ನೇ ವಯಸ್ಸಿನಲ್ಲೂ ರಿಸ್ಕಿ ಸ್ಟಂಟ್​ಗಳನ್ನು ಮಾಡುತ್ತಿದ್ದೇನೆ. ನನಗೆ ನಂಬಿಕೆ ಇಲ್ಲದಿದ್ದರೆ, ಈ ಚಿತ್ರಗಳನ್ನು ಒಪ್ಪಿಕೊಳ್ಳುತ್ತಲೇ ಇರಲಿಲ್ಲ ಎಂದು ಅವರು ಏಳಿದ್ದಾರೆ.

    ಇದನ್ನೂ ಓದಿ: ಝೈದ್​ ಖಾನ್​ ಅಭಿನಯದ ಹೊಸ ಚಿತ್ರ ಯಾವುದು? ಇಲ್ಲಿದೆ ಡೀಟೇಲ್ಸ್​ …

    ಶಾರೂಖ್​ ಖಾನ್​ ತಮಗೆ ಚಿಕ್ಕಂದಿನಿಂದಲೂ ಇಂಥದ್ದೊಂದು ಆತ್ಮವಿಶ್ವಾಸ ಇತ್ತು ಎಂದು ಹೇಳಿಕೊಂಡಿದ್ದಾರೆ. ಗಣಿತ ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಿದ್ದೆ ಅಂತಂದುಕೊಂಡಿದ್ದೆ. ಆದರೆ, 100ಕ್ಕೆ 3 ಅಂಕ ಬಂದಿತ್ತು. ಕೆಲವೊಮ್ಮೆ ಎಷ್ಟೇ ಆತ್ಮವಿಶ್ವಾಸವಿದ್ದರೂ ಅಂದುಕೊಂಡಿದ್ದು ಆಗುವುದಿಲ್ಲ. ನಾವು ಎಲ್ಲ ಚಿತ್ರಗಳಿಗೂ ಅದೇ ಶ್ರಮ ಹಾಕುತ್ತೇವೆ. ಕೆಲವೊಮ್ಮೆ ಅದು ದಿಲ್​ವಾಲೆ ದುಲ್ಹನಿಯಾ ಲೇ ಜಾಯೆಂಗೆ ಆಗುತ್ತದೆ. ಇನ್ನೂ ಕೆಲವೊಮ್ಮೆ ಜೀರೋ ಆಗುತ್ತದೆ ಎಂದಿದ್ದಾರೆ.

    ವರ್ಷಕ್ಕೆ ನಾಲ್ಕು ಚಿತ್ರಗಳಲ್ಲಿ ನಟಿಸುವುದರಲ್ಲಿ ತಪ್ಪೇನಿದೆ? ಅಕ್ಷಯ್​ ಕುಮಾರ್​ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts