More

    ಹುಟ್ಟು ಹಬ್ಬದ ಸಂಭ್ರಮದಲ್ಲಿ ಬಾಲಿವುಡ್​​ ಬಾದ್​​​ಷಾ ಶಾರುಖ್​​ ಖಾನ್​​

    ಬಾಲಿವುಡ್ ನಟ ಶಾರುಖ್ ಖಾನ್ ಇಂದು (ನ.2) ತಮ್ಮ 58ನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದಾರೆ. ಶಾರುಖ್ ಖಾನ್ ಮನೆ ಮುಂದೆ ಅಭಿಮಾನಿಗಳ ದಂಡು ನೆರೆದಿದೆ. ಮಧ್ಯರಾತ್ರಿ ಅವರು ಅಭಿಮಾನಿಗಳಿಗೆ ದರ್ಶನ ಕೊಟ್ಟಿದ್ದಾರೆ . ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


    ಈ ಬಾರಿಯೂ ಶಾರುಖ್ ಖಾನ್ ಮನೆ ಎದುರು ಇರುವ ಬಾಲ್ಕನಿಗೆ ಬಂದು ಅಭಿಮಾನಿಗಳತ್ತ ಕೈ ಬೀಸಿದ್ದಾರೆ.


    ಶಾರುಖ್​​​​​​ ಖಾನ್​ ತಮ್ಮ ಸಾಲು ಸಾಲು ಸಿನಿಮಾಗಳ ಯಶಸ್ಸಿನ ನಿಮಿತ್ತ ಇಂದು ಸೆಲೆಬ್ರಿಟಿಗಳಿಗೆ ದೊಡ್ಡ ಮಟ್ಟಿನ ಪಾರ್ಟಿಯನ್ನೂ ಆಯೋಜಿಸಿದ್ದು, ಪಾರ್ಟಿ ನಡೆಯುವ ಸ್ಥಳದಲ್ಲಿ ಈಗಾಗಲೇ ಪಾಪರಾಜಿಗಳು ತಯಾರಾಗಿದ್ದಾರೆ.


    ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ದರ್ಶನ ನೀಡಿದ್ದರು. ಕಪ್ಪು ಟಿ ಶರ್ಟ್, ಟೋಪಿ, ಸನ್‌ಗ್ಲಾಸ್‌ಗಳಲ್ಲಿ ಕಾಣಿಸಿಕೊಂಡರು. ಅಭಿಮಾನಿಗಳಿಗೆ ಕೈ ಮುಗಿದು ಅವರತ್ತ ಕೈ ಬೀಸಿ, ಪ್ಲೈಯಿಂಗ್ ಕಿಸ್‌ ಕೊಟ್ಟರು. ಇದರ ಜೊತೆಗೆ ತಮ್ಮ ಸಿಗ್ನೇಚರ್ ಫೋಸ್ ನೀಡಿದರು. ಫ್ಯಾನ್ಸ್​ ಹರ್ಷೋದ್ಗಾರ ವಿಡಿಯೋದಲ್ಲಿ ಕೇಳಬಹುದು.


    ಇನ್ನು ಈವರೆಗಿನ ಜವಾನ್​ ಕಲೆಕ್ಷನ್​ ಕುರಿತಂತೆ ರೆಡ್​​ ಚಿಲ್ಲೀಸ್​​​ ನೀಡಿರುವ ಮಾಹಿತಿ ಪ್ರಕಾರ 1103.27 ಕೋಟಿ ರೂಪಾಯಿ ಗಳಿಕೆ ಮಾಡಿದೆ.
    ಶಾರುಖ್​​ ಇದೀಗ ತಮ್ಮ ಮುಂದಿನ ಡಂಕಿ ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಶಾರುಖ್ ಖಾನ್ ವಿಶ್ವದ 5ನೇ ಶ್ರೀಮಂತ ನಟರಾಗಿದ್ದಾರೆ. ಬಾಲಿವುಡ್ ಕಿಂಗ್ ಈ ಸ್ಥಾನ ಪಡೆಯಲು ಟಾಮ್ ಕ್ರೂಸ್ ಅವರನ್ನು ಸೋಲಿಸಿದ್ದಾರೆ. ಶಾರುಖ್ ಖಾನ್ ಅವರ ನಿವ್ವಳ ಮೌಲ್ಯವು $ 700 ಮಿಲಿಯನ್ ಡಾಲರ್​ಗಳಿಗಿಂತ ಹೆಚ್ಚು ಅಂದರೆ 6,289 ಕೋಟಿ ರೂ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts