More

    ನಟ ಶಾಹಿದ್​ ಕಪೂರ್ 6ನೇ ವಿವಾಹ ವಾರ್ಷಿಕೋತ್ಸವ

    ಮುಂಬೈ : ಬಾಲಿವುಡ್​ ನಟ ಶಾಹಿದ್​ ಕಪೂರ್​ ಮತ್ತು ಪತ್ನಿ ಮೀರಾ ರಜಪೂತ್​ ಅವರಿಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ಸಂದರ್ಭಕ್ಕೆ ಪರಸ್ಪರ ತಬ್ಬಿ ನಿಂತಿರುವ ರೋಮ್ಯಾಂಟಿಕ್​ ಚಿತ್ರವೊಂದನ್ನು ಮೀರಾ ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

    “ನಾನು ಶಬ್ದಗಳು ಸಾಕಾಗದಷ್ಟು ನಿಮ್ಮನ್ನು ಪ್ರೀತಿಸುತ್ತೇನೆ. ಹ್ಯಾಪಿ 6, ಮೈ ಲವ್​, ಮೈ ಲೈಫ್​” ಎಂದು ತಮ್ಮ ಪೋಸ್ಟ್​ನೊಂದಿಗೆ ಭಾವುಕ ಸಂದೇಶವನ್ನೂ ಮೀರಾ ಹಾಕಿದ್ದಾರೆ. ಇದಕ್ಕೆ ಸಾವಿರಾರು ಅಭಿಮಾನಿಗಳು ಶುಭಾಶಯಗಳನ್ನು ಕೋರಿ ಪ್ರತಿಕ್ರಿಯಿಸಿದ್ದಾರೆ. ಶಾಹಿದ್​ರ ಒಬ್ಬ ಮಹಿಳಾ ಅಭಿಮಾನಿ, “ನಿಮ್ಮನ್ನು ನೋಡಿದರೆ ಈರ್ಷೆ ಉಂಟಾಗುತ್ತೆ, ಆದರೆ ಸಂತೋಷ ಕೂಡ ಆಗುತ್ತೆ” ಎಂದು ಬರೆದಿದ್ದಾರೆ!

     

    View this post on Instagram

     

    A post shared by Mira Rajput Kapoor (@mira.kapoor)


    ಶಾಹಿದ್​ ಮೀರಾರ ಕೈಹಿಡಿದಿದ್ದು 2015ರಲ್ಲಿ. ದಂಪತಿಗೆ ಇಬ್ಬರು ಮಕ್ಕಳು – 2016 ರಲ್ಲಿ ಹುಟ್ಟಿದ ಮೀಶಾ ಮತ್ತು 2018 ರಲ್ಲಿ ಹುಟ್ಟಿದ ಜಾಯಿನ್. ದೆಹಲಿ ಯೂನಿವರ್ಸಿಟಿ ಪದವೀಧರೆಯಾದ ಮೀರಾಗಿಂತ ಶಾಹಿದ್ 13 ವರ್ಷ ದೊಡ್ಡವರು. (ಏಜೆನ್ಸೀಸ್)

    ಆಗ ಲ್ಯಾಂಬೋರ್ಗಿನಿ ಈಗ ಮರ್ಸಿಡಿಸ್​! ನಟ ರಣವೀರ್​ ಸಿಂಗ್​ರ ಹೊಸ ಕಾರು ನೋಡಿ

    VIDEO | ಕ್ಯಾಪ್ಟನ್​ ಕೂಲ್​ ಧೋನಿ ಬರ್ತ್​​ಡೇಗೆ ಐಸಿಸಿ ವಿಶೇಷ ಕೊಡುಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts