More

    ಭಕ್ತರ ಜೈಘೋಷದ ಮಧ್ಯೆ ರಥೋತ್ಸವ ವೈಭವ

    ಶಹಾಬಾದ್: ಜೆಪಿ ಕಾಲನಿಯ ಆದಿಶಕ್ತಿ ಶ್ರೀ ಮರಗಮ್ಮ ದೇವಿಯ ಮೂರ್ತಿ ಪ್ರತಿಷ್ಠಾಪನೆಯ ೪೬ನೇ ವರ್ಧಂತೋತ್ಸವ ಹಾಗೂ ೬ನೇ ವರ್ಷದ ರಥೋತ್ಸವ ನಿಮಿತ್ತ ಶನಿವಾರ ಸಂಜೆ ಅಪಾರ ಭಕ್ತರ ಜೈಘೋಷದ ಮಧ್ಯೆ ಸಂಭ್ರಮದ ರಥೋತ್ಸವ ನಡೆಯಿತು.

    ಶುಕ್ರವಾರ ಬೆಳಗ್ಗೆ ನಾಗಪ್ಪ ಹುಲಿಯಾರ ಕುಟುಂಬದಿಂದ ದೇವಿಗೆ ಅರ್ಧ ಕೆಜಿ ಬೆಳ್ಳಿಯ ಪಾದುಕೆ ಅರ್ಪಣೆಯ ಸಂಕಲ್ಪ ವಿಧಿ ನೆರವೇರಿತು. ರಘುನಾಥ ಕಂಬಾನೂರ ಅವರಿಂದ ಶ್ರೀಸೂಕ್ತ, ಆಯುಷ್ಯ ಹೋಮ, ಪೂರ್ಣಾಹುತಿ ನಡೆಯಿತು. ೨೫೧ ಮುತ್ರೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ನಂತರ ಮಹಾ ಪ್ರಸಾದ ವಿತರಣೆ. ಸಂಜೆ ೧೦೦೮ ದೀಪೋತ್ಸವ ನಡೆಯಿತು.

    ಶನಿವಾರ ಬೆಳಗ್ಗೆ ತೊನಸನಳ್ಳಿ (ಎಸ್)ಯ ಶ್ರೀ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ದೇವಿಗೆ ಗಂಗಾಸ್ನಾನ, ಬಾಗಿಣ ಅರ್ಪಣೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು.

    ಶಹಾಬಾದ್‌ನ ರಾಚೋಟೇಶ್ವರ ಸಂಸ್ಥಾನದ ಶ್ರೀ ಶಂಕ್ರಯ್ಯ ಸ್ವಾಮಿ, ಮಾಲಗತ್ತಿಯ ಹಿರೋಡೇಶ್ವರ ಸಂಸ್ಥಾನದ ಶ್ರೀ ಚನ್ನಬಸವ ಶರಣರ ನೇತೃತ್ವದಲ್ಲಿ ಕುಂಭ ಪೂಜೆ ನಂತರ ಭವ್ಯ ರಥೋತ್ಸವ ಜರುಗಿತು. ಅಪಾರ ಭಕ್ತರಿಂದ ಜೈಘೋಷಗಳು ಮೊಳಗಿದವು. ಉತ್ತತ್ತಿ, ಹೂವು ಎಸೆದು ಹರಕೆ ತೀರಿಸಿದರು. ನಂತರ ಮಹಾ ಪ್ರಸಾದ ವಿತರಣೆ, ಅಹೋರಾತ್ರಿ ಭಜನೆ ನಡೆಯಿತು.

    ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ್, ಗ್ರಾಪಂ ಸದಸ್ಯ ಅಜೀತಕುಮಾರ ಪಾಟೀಲ್, ಕಸಾಪ ತಾಲೂಕು ಅಧ್ಯಕ್ಷ ಶರಣಬಸಪ್ಪ ಕೋಬಾಳ, ಉದ್ಯಮಿ ವಿಶ್ವರಾಧ್ಯ ಬಿರಾಳ, ಮೃತ್ಯುಂಜಯ ಸ್ವಾಮಿ ಹಿರೇಮಠ, ಕನಕಪ್ಪ ದಂಡಗುಲಕರ್, ಸಾಹೇಬಗೌಡ ಬೊಗುಂಡಿ, ಸುಭಾಷ ಜಾಪೂರ, ಶರಣು ವಸ್ತ್ರದ, ಸುರೇಂದ್ರ ಸಿಂಗ್ ಠಾಕೂರ, ದೇವಸ್ಥಾನ ಸಮಿತಿಯ ನಾಗಪ್ಪ ಹುಲಿಯಾರ, ರಘುನಾಥ ಕಂಬಾನೂರ, ಆನಂದ ಹುಲಿಯಾರ, ಮರಲಿಂಗ ಗಡೆಸೂರ, ಪ್ರೇಮ ನಾಟೀಕಾರ, ರಾಮು, ಅಶ್ವಿನ ಹುಲಿಯಾರ, ರಾಮು ಚಿತ್ತಾಪುರ, ಪವನ ನಾಟೀಕಾರ, ದೇವಸ್ಥಾನದ ಅರ್ಚಕರಾದ ಕೆ.ರಮೇಶ ಭಟ್ವ, ದಾಮೋಧರ ಭಟ್ಟ, ಶ್ರೀಪಾದ ಭಟ್ಟ ಸೇರಿ ಕರ್ನಾಟಕ, ಮಹಾರಾಷ್ಟ್ರದಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts