More

    ಮೂರು ಎಕ್ಸ್​ಪ್ರೆಸ್ ರೈಲು ನಿಲುಗಡೆಗೆ ಕ್ರಮ

    ಶಹಾಬಾದ್: ಸ್ಥಳೀಯರ ಬಹುದಿನಗಳ ಕನಸಾದ ಎಲ್ಲ ಎಕ್ಸ್​ಪ್ರೆಸ್ ರೈಲುಗಳ ನಿಲುಗಡೆಗೆ ಕೇಂದ್ರ ಸರ್ಕಾರ ಸ್ಪಂದಿಸಿದ್ದು, ಮೊದಲ ಹಂತವಾಗಿ ಒಂದಿಷ್ಟು ರೈಲುಗಳ ಸಂಚಾರಕ್ಕೆ ಚಾಲನೆ ನೀಡಲಾಗಿದೆ ಎಂದು ಸಂಸದ ಡಾ.ಉಮೇಶ ಜಾಧವ್ ಹೇಳಿದರು.

    ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ ಮುಂಬೈ-ಚನ್ನೈ ಎಕ್ಸ್​ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸಿದ ಅವರು, ಶಹಾಬಾದ್ ಅಭಿವೃದ್ಧಿ ಹೋರಾಟ ಸಮಿತಿಯಿಂದ ನಿರಂತರ ಹೋರಾಟ ಮಾಡಲಾಗಿದೆ. ಅಲ್ಲದೆ ಸ್ಥಳೀಯರ ನಿಯೋಗದೊಂದಿಗೆ ಕೇಂದ್ರ ರೈಲ್ವೆ ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಹೀಗಾಗಿ ಮುಂಬೈ-ಚನ್ನೈ ಎಕ್ಸ್​ಪ್ರೆಸ್, ವಿಜಯಪುರ- ಹೈದರಾಬಾದ್ ಎಕ್ಸ್​ಪ್ರೆಸ್, ಕೋನಾರ್ಕ್ ಎಕ್ಸ್​ಪ್ರೆಸ್ ರೈಲುಗಳನ್ನು ನಿಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

    ಶಹಾಬಾದ್ ಹೋರಾಟ ಸಮಿತಿ ಗೌರವ ಅಧ್ಯಕ್ಷ ಶಿವರಾಜ ಇಂಗಿನಶೆಟ್ಟಿ, ಪ್ರಮುಖರಾದ ಮಹ್ಮದ್ ಉಬೇದುಲ್ಲಾ, ಬಾಬುರಾವ ಪಂಚಾಳ, ಕನಕಪ್ಪ ದಂಡಗುಲಕರ, ಶರಣು ವಸ್ತçದ, ಶಿವಕುಮಾರ ಇಂಗಿನಶೆಟ್ಟಿ, ಡಾ.ಅಹ್ಮದ್ ಪಟೇಲ್, ಕಿಶನ್ ನಾಯಕ, ಅರುಣ ಪಟ್ಟಣಕರ್, ಬಿ.ಬಿ.ನಾಯಕ, ಹಾಶಮ್‌ಖಾನ್, ದಿಲೀಪ್ ನಾಯಕ, ನಿಂಗಣ್ಣ ಹೋಳಗೂಳ, ಶಂಕರ ಚವ್ಹಾಣ್ ಮುಗಳನಾಗಾವಿ, ಶ್ರೀಧರ ಜೋಶಿ, ಅನೀಲ ಹಿಬಾರೆ, ದತ್ತಾ ಫಂಡ್, ದಿನೇಶ ಗೌಳಿ, ಸಿದ್ರಾಮ ಕುಸಾಳೆ, ದೇವದಾಸ ಜಾಧವ್, ಮಹಾದೇವ ಗೊಬ್ಬುರಕರ್, ಅಮರ ಕೋರೆ, ಕುಮಾರ ಚವ್ಹಾಣ್, ಬಸವರಾಜ ಸಾತ್ಯಾಳ, ಮೀರಜ್ ಸಾಹೇಬ್, ಶರಣು ಪಗಲಾಪುರ, ದೇವರಾಜ ರಾಠೋಡ್, ವಿಜಯ ರಾಠೋಡ್, ಶಂಕರ ಪವಾರ್, ದಿನೇಶ ನಾಯಕ, ಸಂಜಯ ರಾಠೋಡ್ ಇತರರಿದ್ದರು.

    ೨೭ ಕೋಟಿ ರೂ. ವೆಚ್ಚದಲ್ಲಿ ಶಹಾಬಾದ್ ರೈಲು ನಿಲ್ದಾಣವನ್ನು ನವೀಕರಣ ಮಾಡಲಾಗುತ್ತಿದೆ. ರೈಲ್ವೆ ಹಳಿಯಾಚೆ ಇರುವ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಳ ಸೇತುವೆ ನಿರ್ಮಾಣಕ್ಕೆ ಇಲಾಖೆ ತಾತ್ವಿಕ ಒಪ್ಪಿಗೆ ನೀಡಿದೆ. ಶಹಾಬಾದ್ ಸಮೀಪ ೨೦ ಸಾವಿರ ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಜವಳಿ ಪಾರ್ಕ್ ನಿರ್ಮಾಣವಾಗಲಿದ್ದು, ಆರು ತಿಂಗಳಲ್ಲಿಯೇ ಕೆಲಸ ಪ್ರಾರಂಭವಾಗಲಿದೆ. ೬೭ ಕೋಟಿ ರೂ. ವೆಚ್ಚದಲ್ಲಿ ಕಾಗಿಣಾ ಸೇತುವೆ, ರಸ್ತೆ ಮೇಲ್ದರ್ಜೆಗೆ ಏರಿಸಲಾಗುತ್ತಿದೆ.
    | ಡಾ.ಉಮೇಶ ಜಾಧವ್, ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts