More

    ಪಾಳುಬಿದ್ದ ವಾಣಿಜ್ಯ ಮಳಿಗೆಗಳು

    ಹಟ್ಟಿಚಿನ್ನದಗಣಿ: ಸ್ಥಳೀಯ ಕ್ಯಾಂಪ್ ಪ್ರದೇಶದ ಅಧಿಸೂಚಿತ ಪ್ರದೇಶ ಸಮಿತಿ ಎಸ್‌ಎಫ್‌ಸಿ ನಿಧಿಯ 40 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲಾದ 19 ವಾಣಿಜ್ಯ ಮಳಿಗೆಗಳ ಬಾಡಿಗೆ ಹರಾಜು ಪ್ರಕ್ರಿಯೆ ವಿಳಂಬವಾಗಿದ್ದರಿಂದ ಇವು ಆರಂಭಗೊಳ್ಳದೆ ಕಿಡಿಗೇಡಿಗಳ ಹಾವಳಿಗೆ ತುತ್ತಾಗಿ ಹಾಳಾಗುತ್ತಿವೆ.


    ಮಳಿಗೆಗಳು ಸಿದ್ಧಗೊಂಡು 7ವರ್ಷಗತಿಸಿದರೂ ಅವುಗಳನ್ನು ಸಾರ್ವಜನಿಕ ಬಳಕೆಗೆ ನೀಡಲಾಗಿಲ್ಲ. ಸ್ವರ್ಣಭವನ ಕಲ್ಯಾಣದ ಎದುರಿಗೆ 5, ದಾರುವಾಲಾ ಕ್ರೀಡಾಂಗಣದ ಹಿಂದಿನ ರಸ್ತೆಯಲ್ಲಿ 14 ಮಳಿಗೆಗಳಿದ್ದು, ಇವುಗಳನ್ನು ಬಾಡಿಗೆಗೆ ನೀಡುವ ಉದ್ದೇಶದಿಂದ ಅಧಿಸೂಚಿತ ಪ್ರದೇಶ ಸಮಿತಿ ನಿರ್ಮಿಸಲಾಗಿದೆ.

    5ವರ್ಷಗಳ ಹಿಂದೆಯೆ ಬಾಡಿಗೆ ಹರಾಜು ಪ್ರಕ್ರಿಯೆ ನಡೆದಿತ್ತು:

    ಮಳಿಗೆ ನಿರ್ಮಿಸಲಾಗಿದ್ದರೂ ಸಹ ಅವುಗಳಿಗೆ ವಿದ್ಯುತ್ ಸಂಪರ್ಕ ಸೇರಿ ಮೂಲ ಸೌಲಭ್ಯ ಒದಗಿಸಿಲ್ಲ. ಹೀಗಾಗಿ ಎರಡು ವರ್ಷದಿಂದ ಖಾಲಿ ಬಿದ್ದಿದ್ದವು. ಮುಖ್ಯಾಧಿಕಾರಿಯಾಗಿದ್ದ ಮಲ್ಲೇಶ.ಜೆ ಅಕ್ಕರಕ್ಕಿ, ಜಿಲ್ಲಾಧಿಕಾರಿಗಳ ಅನುಮತಿ ಪಡೆದು, ಮಳಿಗೆಗಳನ್ನು ಯಾರು ಹರಾಜಿನಲ್ಲಿ ಬಾಡಿಗೆ ಪಡೆಯುವರೋ ಅವರೇ ವಿದ್ಯುತ್ ಸಂಪರ್ಕ, ಇತರ ಕೆಲಸಗಳನ್ನು ಮಾಡಿಸಿಕೊಳ್ಳಬೇಕಾಗಿದೆ.

    ಇದನ್ನೂ ಓದಿ: ನಕಲಿ ಇಮ್ಮಿಗ್ರೇಷನ್​ ಕನ್ಸಲ್​ಟೆನ್ಸಿ ಭೇದಿಸಿದ ಪೊಲೀಸರು; ನಾಲ್ವರು ಅರೆಸ್ಟ್​:

    ಜನವಸತಿ ಇಲ್ಲ

    ಕ್ರೀಡಾಂಗಣದ ಹಿಂದಿನ ರಸ್ತೆಯ ಮಳಿಗೆಗಳು ಜನವಸತಿಯಿಂದ ದೂರವಾಗುವುದರಿಂದ ಅಲ್ಲಿ ವ್ಯವಹಾರ ಕೈಗೊಂಡರೂ ವ್ಯಾಪಾರ ನಡೆಯುವುದಿಲ್ಲ ಹೀಗಾಗಿ ಬಾಡಿಗೆ, ಇತರ ಖರ್ಚು ವೆಚ್ಚಗಳನ್ನು ಗಣನೆಗೆ ತೆಗೆದುಕೊಂಡರೆ ಸರ್ಕಾರ ನಿಗದಿ ಮಾಡಿದ 3 ಸಾವಿರ ರೂ. ಬಾಡಿಗೆ ಕೊಟ್ಟು ಮಳಿಗೆ ಪಡೆಯುವುದು ಯಾರಿಂದಲೂ ಸಾಧ್ಯವಿಲ್ಲವೆಂದು ಹರಾಜುದಾರರು ಸಾವಿರ ರೂ. ಒಳಗೆ ಹರಾಜು ಕೂಗಿದ್ದಾರೆ. ಆದರೆ ಅಧಿಸೂಚಿತ ಪ್ರದೇಶ ಸಮಿತಿಯವರು ಇದು ಸಾಧ್ಯವಿಲ್ಲ ಎಂದು ಮರು ಹರಾಜು ಕರೆಯುವುದಾಗಿ ಹೇಳಿ ಠೇವಣಿ ಹಿಂತಿರಿಗಿಸಿದ್ದಾರೆ. ಜಿಲ್ಲಾಧಿಕಾರಿಗಳು ಮತ್ಯಾವಾಗ ಆದೇಶ ಮಾಡುತ್ತಾರೋ ಏನೋ, ಮಳಿಗೆಗಳು ಮಾತ್ರ ಆರಂಭಗೊಳ್ಳದೆ ಕಿಡಿಗೇಡಿಗಳ ಹಾವಳಿಗೆ ತುತ್ತಾಗಿ ಹಾಳಾಗುವ ಮೂಲಕ ಸರ್ಕಾರದ ಹಣ ಪೋಲಾಗುವುದರಲ್ಲಿ ಅನುಮಾನವಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts