More

    ಚರಂಡಿ ನೀರು ರಸ್ತೆಗೆ ನುಗ್ಗಿ ಸಂಚಾರ ಅಸ್ತವ್ಯಸ್ತ

    ಹೊನ್ನಾವರ: ತಾಲೂಕಿನಾದ್ಯಂತ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಶನಿವಾರ ಬೆಳಗ್ಗೆಯಿಂದ ನಿರಂತರ ಮಳೆ ಸುರಿದ ಪರಿಣಾಮ ಪಟ್ಟಣದ ಕೆಲವು ಭಾಗಗಳಲ್ಲಿ ಚರಂಡಿ ನೀರು ರಸ್ತೆಗೆ ನುಗ್ಗಿ ಸಂಚಾರ ಅಸ್ತವ್ಯಸ್ತವಾಗಿದೆ.

    ಪಟ್ಟಣದ ಕೋರ್ಟ್ ರಸ್ತೆ ಮತ್ತು ಮಾಥೋಮಾ ಸ್ಕೂಲ್ ಕಡೆಯಿಂದ ರಸ್ತೆಯಲ್ಲಿ ನೀರು ಹರಿದು ಬಂದು ಬಸ್ ನಿಲ್ದಾಣದ ಸುತ್ತಮುತ್ತ ನುಗ್ಗಿದೆ. ಬಸ್ ನಿಲ್ದಾಣ ಎದುರು ಇರುವ ರಸ್ತೆ ಬದಿಯ ಚರಂಡಿಯಲ್ಲಿ ತಡೆ ಉಂಟಾಗಿರುವುದರಿಂದ ಕೆಂಪು ನೀರು ರಸ್ತೆಯ ಮೇಲೆ ತುಂಬಿದ ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು.

    ಪಟ್ಟಣದ ಬೆಂಗಳೂರು ಸರ್ಕಲ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿ ಹರಿಯಿತು. ಸುತ್ತಮುತ್ತಲಿನಿಂದ ಬರುವ ನೀರು ರಸ್ತೆಗೆ ಬಂದು ವಾಹನ ಓಡಾಟ ಮಾಡಲು ಪರದಾಡುವಂತೆ ಮಾಡಿತು. ಹೆದ್ದಾರಿ ಕೆಲಸ ನಡೆಯುತ್ತಿದ್ದು, ಸಂಬಂಧಪಟ್ಟ ಐಆರ್​ಬಿ ಕಂಪನಿ ಮಳೆಗೂ ಮುನ್ನ ಮುಂಜಾಗ್ರತೆ ಕ್ರಮ ಕೈಗೊಳ್ಳದ ಪರಿಣಾಮ ನೀರು ಹೆದ್ದಾರಿಯ ಮೇಲೆ ಹರಿಯಿತು. ರಸ್ತೆ ಪಕ್ಕದ ಗೂಡಂಗಡಿಗಳ ಜಾಗದಲ್ಲಿ ನೀರು ತುಂಬಿತು. ಗ್ರಾಮೀಣ ಭಾಗದಲ್ಲಿಯೂ ಕೂಡ ಅಲ್ಲಲ್ಲಿ ಚರಂಡಿ ವ್ಯವಸ್ಥೆ ಸರಿಯಿಲ್ಲದ ಕಡೆ ನೀರು ತುಂಬಿ ಸಂಚಾರ ಅಸ್ತವ್ಯಸ್ತವಾಗಿದೆ. ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ತಾಲೂಕಿನಲ್ಲಿ ಹರಿಯುವ ಶರಾವತಿ, ಗುಂಡಬಾಳ ಮತ್ತು ಬಡಗಣಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts