More

    ಮಡಿವಾಳ ಕಪ್ ಕ್ರಿಕೆಟ್​ನಲ್ಲಿ ವಾಲ್ಗಳ್ಳಿ ಇಲೆವೆನ್ ಫಸ್ಟ್

    ಹೊನ್ನಾವರ: ತಾಲೂಕಿನ ಸಂತೆಗುಳಿ ಮಹಾಮಾಯಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ ಹೊನ್ನಾವರ ಮತ್ತು ಕುಮಟಾ ತಾಲೂಕಿನ ಮಡಿವಾಳ ಸಮುದಾಯದ ಯುವಕರ ಮಡಿವಾಳ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಾಲ್ಗಳ್ಳಿ ಇಲೆವೆನ್ ಪ್ರಥಮ ಬಹುಮಾನ ತನ್ನದಾಗಿಸಿಕೊಂಡಿತು. ಯಂಗ್ ಸ್ಟಾರ್ ತಂಡ ರನ್ನರ್ ಅಪ್ ಟ್ರೋಫಿ ಪಡೆಯಿತು.

    ಪಂದ್ಯಾವಳಿಯಲ್ಲಿ 8 ತಂಡಗಳು ಪಾಲ್ಗೊಂಡಿದ್ದವು. ಮ್ಯಾನ್ ಒಫ್ ದಿ ಸಿರೀಸ್ ವಾಲ್ಗಳ್ಳಿ ತಂಡದ ನಿತ್ಯಾನಂದ ಮಡಿವಾಳ, ಬೆಸ್ಟ್ ಬ್ಯಾಟ್ಸ್​ಮನ್ ಮತ್ತು ಬೆಸ್ಟ್ ಬೌಲರ್ ಯಂಗ್ ಸ್ಟಾರ್ ತಂಡದ ರಾಜೇಶ ಮಡಿವಾಳ ಮತ್ತು ರಾಘವೇಂದ್ರ ಮಡಿವಾಳ ಪಡೆದರು.

    ಸೈನಿಕ ಶಹನ ಮಡಿವಾಳ ಮತ್ತು ಮಾಜಿ ಸೈನಿಕ ರಾಘು ಮಡಿವಾಳ ಕಡ್ಲೆ ಅವರನ್ನು ಸನ್ಮಾನಿಸಲಾಯಿತು. ಡಿ.ಡಿ. ಮಡಿವಾಳ, ಸುದರ್ಶನ ಹೊನ್ನಾವರ, ಸುಬ್ರಮಣ್ಯ ಭಟ್, ಅನಂತ್ ಮಡಿವಾಳ, ಉದಯ ಮಡಿವಾಳ, ರಾಘವೇಂದ್ರ ಮಡಿವಾಳ, ಗಜಾನನ ಮಡಿವಾಳ, ರಾಮಚಂದ್ರ ಮಡಿವಾಳ ಮಾತನಾಡಿದರು. ಮಹಾಬಲೇಶ್ವರ ಮಡಿವಾಳ, ರಾಮಾ ಮಡಿವಾಳ, ರಮೇಶ ಮಡಿವಾಳ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts