More

    ಹಲ್ಲಿನ ಆರೋಗ್ಯದ ಕಾಳಜಿ ಅತ್ಯಗತ್ಯ

    ಹೊನ್ನಾವರ: ಮುಖದ ಸೌಂದರ್ಯ ಮತ್ತು ಆಹಾರವನ್ನು ಸರಿಯಾಗಿ ಸೇವಿಸಲು ಹಲ್ಲುಗಳು ಪ್ರಮುಖ ಪಾತ್ರ ವಹಿಸುತ್ತವೆ. ಹಲ್ಲಿನ ಆರೋಗ್ಯದ ಕುರಿತು ಎಲ್ಲರೂ ಕಾಳಜಿ ವಹಿಸಬೇಕು ಎಂದು ದಂತ ವೈದ್ಯ ಡಾ. ನಾಗರಾಜ ಭೋಸ್ಕಿ ಹೇಳಿದರು.

    ಪಟ್ಟಣದ ಪ್ರಭಾತ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊನ್ನಾವರದ ಲಯನ್ಸ್ ಕ್ಲಬ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಉಚಿತ ದಂತ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿದಿನ ಎರಡು ಬಾರಿ ಅಂದರೆ ಬೆಳಗ್ಗೆ ತಿಂಡಿಯ ಮೊದಲು ಮತ್ತು ರಾತ್ರಿ ಊಟದ ನಂತರ ಹಲ್ಲುಗಳಿಗೆ ಬ್ರಷ್ ಮಾಡಬೇಕು. ಹಲ್ಲಿನ ಆರೋಗ್ಯಕ್ಕೆ ಸಂಬಂಧಿಸಿದ ಆಹಾರ ಸೇವಿಸಬೇಕು. ಹಲ್ಲಿನ ಆರೋಗ್ಯದಲ್ಲಿ ಸಮಸ್ಯೆ ಉಂಟಾದಾಗ ಸುಧಾರಿತ ತಂತ್ರಜ್ಞಾನದ ಮೂಲಕ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

    ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಜಿ. ನಾಯ್ಕ ಮಾತನಾಡಿದರು. ದಂತ ವೈದ್ಯ ಡಾ. ನಾಗರಾಜ ಭೋಸ್ಕಿ ಮತ್ತು ಡಾ. ಸಹನಾ ವಿದ್ಯಾರ್ಥಿಗಳ ದಂತ ತಪಾಸಣೆ ನಡೆಸಿದರು. ವಿದ್ಯಾರ್ಥಿಗಳಿಗೆ ಉಚಿತವಾಗಿ ಟೂತ್ ಪೇಸ್ಟ್ ಮತ್ತು ಟೂತ್ ಬ್ರಷ್​ಗಳನ್ನು ವಿತರಿಸಿ ಹಲ್ಲಿನ ಆರೋಗ್ಯದ ಕುರಿತು ಜಾಗೃತಿ ಮೂಡಿಸಿದರು.

    ಎಸ್​ಡಿಎಂಸಿ ಅಧ್ಯಕ್ಷ ಮಾರುತಿ ನಾಯ್ಕ, ಉಪಾಧ್ಯಕ್ಷೆ ಅಂಬಿಕಾ ಭಟ್ಟ, ಲಯನ್ ಕಾರ್ಯದರ್ಶಿ ಮಹೇಶ ನಾಯ್ಕ, ಖಜಾಂಚಿ ಶಿವಾನಂದ ಭಂಡಾರಿ, ಸದಸ್ಯರಾದ ಎನ್.ಜಿ.ಭಟ್ ಇತರರಿದ್ದರು. ಮುಖ್ಯಾಧ್ಯಾಪಕಿ ವಿಜಯಾ ಶೇಟ್ ಸ್ವಾಗತಿಸಿದರು. ಶಿಕ್ಷಕಿ ಗಿರಿಜಾ ಗೌಡ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕರಾದ ಮುಕ್ತಾ ನಾಯ್ಕ, ನಯನಾ ಗೌಡ, ಕವಿತಾ ನಾಯ್ಕ ಹಾಗೂ ಅಡುಗೆ ಸಿಬ್ಬಂದಿ ದಾಕ್ಷಾಯಿಣಿ ಸಹಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts