More

    ಬ್ಯಾಂಕ್​ ಖಾತೆಗೆ ತಪ್ಪಾಗಿ ಬಂದ ಲಕ್ಷಗಟ್ಟಲೇ ಹಣ… ಪ್ರಧಾನಿ ಮೋದಿ ಕಳ್ಸಿರೋದು ಎಂದ ಖಾತೆದಾರ!

    ಪಟ್ನಾ: ಬಿಹಾರದ ನಿವಾಸಿಯೊಬ್ಬ ತನ್ನ ಖಾತೆಗೆ ತಪ್ಪಾಗಿ ಜಮಾ ಆದ ಐದೂವರೆ ಲಕ್ಷ ರೂಪಾಯಿಗಳನ್ನು ಬ್ಯಾಂಕಿಗೆ ಹಿಂದುರುಗಿಸಲು ನಿರಾಕರಿಸಿದ್ದಾನೆ. ಆ ಹಣವನ್ನು ಪ್ರಧಾನಿ ಮೋದಿ ತನಗೆ ಕಳುಹಿಸಿದ್ದಾರೆಂದು ಭಾವಿಸಿ, ಪೂರ್ಣವಾಗಿ ಖರ್ಚು ಮಾಡಿಬಿಟ್ಟಿರುವುದಾಗಿ ಹೇಳುತ್ತಿದ್ದಾನೆ.

    ಕಳೆದ ಮಾರ್ಚ್​ನಲ್ಲಿ, ಬಿಹಾರದ ಖಾಗರಿಯ ಜಿಲ್ಲೆಯ ಗ್ರಾಮೀಣ ಬ್ಯಾಂಕು, ಭಕ್ತಿಯಾರ್​ಪುರ ಗ್ರಾಮದ ನಿವಾಸಿ ರಂಜಿತ್​ ದಾಸ್​​ ಖಾತೆಗೆ ತಪ್ಪಾಗಿ 5.5 ಲಕ್ಷ ರೂ.ಗಳನ್ನು ಜಮಾ ಮಾಡಿತ್ತು. ಆದರೆ ಈ ಬಗ್ಗೆ ಹಲವು ನೋಟೀಸುಗಳನ್ನು ನೀಡಿ ಹಣ ಹಿಂತಿರುಗಿಸುವಂತೆ ಕೇಳಿದರೂ, ಹಣವನ್ನೆಲ್ಲಾ ವ್ಯಯಿಸಿರುವುದಾಗಿ ದಾಸ್​ ಹೇಳಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಬ್ಯಾಂಕ್​ ಮ್ಯಾನೇಜರ್​ ಮಾನಸಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದರು.

    ಇದನ್ನೂ ಓದಿ: ಇದು ವಿಧಾನಸಭೆಯೋ.. ಪಾರ್ಲಿಮೆಂಟೋ..? ಸದನದಲ್ಲಿ ಸಿದ್ದರಾಮಯ್ಯಗೆ ಮಾಧುಸ್ವಾಮಿ ಪ್ರಶ್ನೆ!

    ರಂಜಿತ್​ ದಾಸ್​ನನ್ನು ಬಂಧಿಸಿ ವಿಚಾರಣೆ ನಡೆಸಿದ ಪೊಲೀಸರು ಆತ ನೀಡಿದ ಸ್ಪಷ್ಟನೆ ಕೇಳಿ ದಂಗಾಗಿದ್ದಾರೆ. “ನನಗೆ ಹಣ ಬಂದಾಗ ನನಗೆ ತುಂಬಾ ಖುಷಿಯಾಯಿತು. ಪಿಎಂ ನರೇಂದ್ರ ಮೋದಿ ಪ್ರತಿಯೊಬ್ಬರ ಬ್ಯಾಂಕ್​ ಖಾತೆಯಲ್ಲೂ 15 ಲಕ್ಷ ರೂ. ಗಳನ್ನು ಜಮಾ ಮಾಡುವುದಾಗಿ ಹೇಳಿದ್ದರಲ್ಲ.. ಈ ಹಣ ಅದರ ಮೊದಲ ಕಂತು ಎಂದು ನಾನು ಭಾವಿಸಿದೆ. ಎಲ್ಲಾ ಹಣವನ್ನೂ ಖರ್ಚುಮಾಡಿಬಿಟ್ಟಿದ್ದೇನೆ. ಅದಕ್ಕಾಗೇ ಈಗ ನನ್ನ ಖಾತೆಯಲ್ಲಿ ಹಣವಿಲ್ಲ” ಎಂದಿದ್ದಾನೆ, ದಾಸ್​.

    ಆತ ಹಣವನ್ನು ನಿಜವಾಗಲೂ ಖರ್ಚು ಮಾಡಿದ್ದಾನೆಯೇ, ಇಲ್ಲವೇ ತನ್ನ ಬೇರೆ ಯಾವುದಾದರೂ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)

    ಜೆಇಇ ಮೇಯ್ನ್ ಫಲಿತಾಂಶ ಬಿಡುಗಡೆ: ಕರ್ನಾಟಕದ ವಿದ್ಯಾರ್ಥಿ ಸೇರಿದಂತೆ 18 ಮಂದಿಗೆ ಪ್ರಥಮ ರಾಂಕ್​

    ಚುನಾವಣೆ ನಂತರ ಪಕ್ಷ ಬದಲಿಸಿದ ಶಾಸಕನನ್ನು ಅನರ್ಹಗೊಳಿಸಲು ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts