More

    ಸಿಇಟಿ ಅಭ್ಯರ್ಥಿಗಳನ್ನು ಎಚ್ಚರಿಸಲು ಏಳು ಬಾರಿ ಮೊಳಗಲಿದೆ ಬೆಲ್ಲು!

    ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಲಿರುವ ಪಿಜಿಸಿಇಟಿ ಹಾಗೂ ಡಿಪ್ಲೊಮಾ ಸಿಇಟಿ ಪರೀಕ್ಷೆ ವೇಳೆ ಒಟ್ಟಾರೆ ಏಳು ಬಾರಿ ಬೆಲ್ ಬಾರಿಸುವ ಮೂಲಕ ಅಭ್ಯರ್ಥಿಗಳಿಗೆ ಆಗಿಂದಾಗ್ಗೆ ಎಚ್ಚರಿಕೆ ನೀಡಲಾಗುತ್ತದೆ.

    ಅ.13 ಮತ್ತು 14ರಂದು ಪಿಜಿಸಿಇಟಿ ಹಾಗೂ ಅ.14ರಂದು ಡಿಪ್ಲೊಮಾ ಸಿಇಟಿ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಆರಂಭಕ್ಕೂ 20 ನಿಮಿಷ ಮೊದಲು ಮೊದಲ ಬೆಲ್ ಹೊಡೆಯಲಿದೆ. ಆಗ ಅಭ್ಯರ್ಥಿಗಳು ಪರೀಕ್ಷಾ ಕೊಠಡಿ ಪ್ರವೇಶಿಸಿ, ತಮ್ಮ ತಮ್ಮ ಸೀಟುಗಳಲ್ಲಿ ಕುಳಿತುಕೊಳ್ಳಬೇಕು. ಪ್ರವೇಶ ಪತ್ರ ಹಾಗೂ ಗುರುತಿನ ಚೀಟಿ ತೋರಿಸಬೇಕು. ನಂತರ ಎರಡನೇ ಬೆಲ್ ಹೊಡೆದಾಗ ಕೊಠಡಿ ಮೇಲ್ವಿಚಾರಕರು ಪರೀಕ್ಷೆ ಹಾಗೂ ಒಎಂಆರ್ ಶೀಟ್‌ಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮೂರನೇ ಬೆಲ್ ಆದಾಗ ಅಭ್ಯರ್ಥಿಗಳು ಒಎಂಆರ್ ಶೀಟ್ ತೆರೆದು, ಉತ್ತರ ಬರೆಯಲು ಆರಂಭಿಸಬೇಕು.

    ಒಂದು ಗಂಟೆ ಮುಗಿದ ಬಳಿಕ, ಎರಡು ಗಂಟೆ ಮುಗಿದ ನಂತರ, 30 ನಿಮಿಷ ಉಳಿದಿರುವ ಸಮಯದಲ್ಲಿ ಪ್ರತ್ಯೇಕ ಬೆಲ್‌ಗಳು ಆಗಲಿದೆ. ಏಳನೇ ಬೆಲ್ ಆಗುತ್ತಿದ್ದಂತೆ ಪರೀಕ್ಷೆ ಬರೆಯುವುದನ್ನು ನಿಲ್ಲಿಸಬೇಕು. ನಂತರ ಕೊಠಡಿ ಮೇಲ್ವಿಚಾರಕರು ಒಎಂಆರ್ ಶೀಟ್‌ಗಳನ್ನು ಪಡೆದುಕೊಳ್ಳುತ್ತಾರೆ. ಪ್ರತಿ ಹಂತದಲ್ಲೂ ಬೆಲ್ ಹೊಡೆಯುವ ಮೂಲಕ ಅಭ್ಯರ್ಥಿಗಳಿಗೆ ಎಚ್ಚರಿಕೆ ಘಂಟೆ ಮೊಳಗಲಿವೆ.

    ಕೇಂದ್ರ ಸರ್ಕಾರಿ ನೌಕರರಿಗೆ ಹಬ್ಬದ ಗಿಫ್ಟ್​- ನಿರ್ಮಲಾ ಸೀತಾರಾಮನ್​ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts