More

    ಗುಜರಾತ್​ನಲ್ಲಿ ವರುಣನ ಆರ್ಭಟ, ಒಂದೇ ದಿನದಲ್ಲಿ 7ಮಂದಿ ಸಾವು,ಇನ್ನೂ 5 ದಿನ ಭಾರೀ ಮಳೆ ಮುನ್ಸೂಚನೆ

    ಅಹಮದಾಬಾದ್: ಭಾರೀ ಮಳೆಯಿಂದಾಗಿ ಗುಜರಾತ್​ನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಸೋಮವಾರ ಒಂದೇ ದಿನ 7 ಮಂದಿ ಮೃತಪಟ್ಟಿರುವುದು ವರದಿಯಾಗಿದೆ. ಅಹಮದಾಬಾದ್​, ಗಾಂಧಿನಗರ ಸೇರಿದಂತೆ ಬಹುತೇಕ ನಗರಗಳು ನೀರಿನಿಂದ ಜಲಾವೃತಗೊಂಡಿದ್ದು, ಇನ್ನೂ ಐದು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಜುಲೈ 1 ರಿಂದ ಸುರಿದ ಭಾರೀ ಮಳೆಯಿಂದಾದ ಅನಾಹುತದಿಂದ ಈವರೆಗೆ 63ಮಂದಿ ಮೃತಪಟ್ಟಿದ್ದಾರೆ ಎಂದು ವಿಪತ್ತು ನಿರ್ವಹಣಾ ಸಚಿವ ರಾಜೇಂದ್ರ ತ್ರಿವೇದಿ ತಿಳಿಸಿದ್ದಾರೆ.ನೀರಿನಿಂದ ಆವೃತವಾಗಿರುವ ಪ್ರದೇಶದಿಂದ 9000 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಅಹಮದಾಬಾದ್​ ನಗರದಲ್ಲೇ ಬರೋಬ್ಬರಿ 219 ಮಿಮೀ ದಾಖಲೆಯ ಮಳೆಯಾಗಿದೆ. ಸದ್ಯ ಪ್ರವಾಹ ಪರಿಸ್ಥಿತಿ ಎದುರಾಗಿರುವುದರಿಂದ ಬಹುತೇಕ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ಸೋಮವಾರದಿಂದಲೇ ರಜೆ ಘೋಷಿಸಲಾಗಿದೆ.

    ದಕ್ಷಿಣ ಗುಜರಾತ್​ನ ದಂಗ್​, ನವಸರಿ, ತಪಿ ಮತ್ತು ವಲ್ಸಾದ್​ ಜಿಲ್ಲೆಗಳಲ್ಲಿ ಪ್ರವಾಹ ಮತ್ತಷ್ಟು ಹೆಚ್ಚಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಅಮಿತ್​ ಶಾ ರಾಜ್ಯಕ್ಕೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ನಡುವೆ ಎನ್​ಡಿಆರ್​ಎಫ್​ ತಂಡವನ್ನು ಕೇಂದ್ರ ಕಳುಹಿಸಿಕೊಟ್ಟಿದೆ.ಅಂಬಿಕಾ ನದಿಯಲ್ಲಿ ಸಿಲುಕಿಕೊಂಡಿದ್ದ 16 ಮಂದಿಯನ್ನು ಏರ್​ಲಿಫ್ಟ್ ಮಾಡಲಾಗಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗುತ್ತಿದೆ. (ಏಜೆನ್ಸೀಸ್​)

    ಶ್ರೀಲಂಕಾ ಬಿಕ್ಕಟ್ಟು: ದುಬೈಗೆ ಪರಾರಿಯಾದ್ರಾ ಅಧ್ಯಕ್ಷ ಗೋತಬಯ ರಾಜಪಕ್ಸ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts