More

    ಮೂರು ದಿನ ಮನೆಯೊಳಗೇ ಇತ್ತು ಕಾಳಿಂಗ ಸರ್ಪ!; ಬರೋಬ್ಬರಿ 7 ಅಡಿ ಉದ್ದದ ಉರಗ..

    ಚಿಕ್ಕಮಗಳೂರು: ಈ ಮನೆಯೊಳಗೆ ಮೂರು ದಿನಗಳಿಂದ ಹೆಚ್ಚೂಕಡಿಮೆ ಏಳು ಅಡಿ ಉದ್ದದ ಕಾಳಿಂಗ ಸರ್ಪ ಅಡಗಿ ಕುಳಿತುಕೊಂಡಿತ್ತು. ಕೇರೆಹಾವು ಇರಬಹುದು, ವಿಷವಿರಲ್ಲ, ಅದಾಗೇ ಹೋಗಿಬಿಡುತ್ತದೆ ಎಂದುಕೊಂಡ ಮನೆಯವರಿಗೆ ಇಂದು ಅದು ಕಾಳಿಂಗ ಸರ್ಪ ಎಂಬುದು ಗೊತ್ತಾಗಿದೆ.

    ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ರಾಜನಗರದ ಮನೆಯೊಂದರಲ್ಲಿ ಇಂಥದ್ದೊಂದು ಭಾರಿ ಕಾಳಿಂಗ ಸರ್ಪ ಕಂಡುಬಂದಿದೆ. ಇಲ್ಲಿನ ಸುಬ್ರಹ್ಮಣ್ಯ ಆಚಾರ್ ಎಂಬವರ ಮನೆಯಲ್ಲಿ ಈ ಕಾಳಿಂಗ ಸರ್ಪವಿತ್ತು.

    ಇದನ್ನೂ ಓದಿ: ಕ್ಲಬ್​ನಲ್ಲಿ ಜೂಜುದಂಧೆ ನಡೆಯುತ್ತಿದ್ದರೂ ನಿರ್ಲಕ್ಷಿಸಿದ ಇನ್​ಸ್ಪೆಕ್ಟರ್ ಅಮಾನತು; ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಕ್ರಮ

    ಮನೆಯವರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಸ್ನೇಕ್ ಅರ್ಜುನ್​, ವಿಷಕಾರಿ ಕಾಳಿಂಗ ಸರ್ಪವನ್ನು ಹುಷಾರಾಗಿ ಹಿಡಿದು ಅರಣ್ಯಕ್ಕೆ ಕೊಂಡೊಯ್ದು ಬಿಟ್ಟುಬಂದಿದ್ದಾರೆ. ಹಾವು ಹಿಡಿಯುವುದರಲ್ಲಿ ಪರಿಣತರಾಗಿರುವ ಸ್ನೇಕ್ ಅರ್ಜುನ್​ ಇದುವರೆಗೂ ನೂರಾರು ಕಾಳಿಂಗ ಸರ್ಪವನ್ನು ಹಿಡಿದಿದ್ದು, ಬಹಳಷ್ಟು ಮನೆಯವರನ್ನು ಅಪಾಯದಿಂದ ಪಾರು ಮಾಡಿರುತ್ತಾರೆ.

    ಸ್ನಾನಕ್ಕೆಂದು ಹೋಗಿದ್ದ ಎಂಬಿಬಿಎಸ್​ ವಿದ್ಯಾರ್ಥಿನಿ ಸಾವು; 2 ಗಂಟೆ ಬಳಿಕ ಬಾತ್​ರೂಮ್​ ಬಾಗಿಲು ಮುರಿದು ನೋಡಿದ ಮನೆಯವರಿಗೆ ಶಾಕ್​!

    ಲಸಿಕೆ ಹಾಕಿಸಿಕೊಂಡಿರದಿದ್ದರೆ ಸಾರ್ವಜನಿಕರಿಗಿಲ್ಲ ಈ ಸರ್ಕಾರಿ ಕಚೇರಿಗೆ ಪ್ರವೇಶ; ಸರ್ಕಾರದ ಸೂಚನೆಯನ್ನೇ ಧಿಕ್ಕರಿಸಿದ್ರಾ ಜಿಲ್ಲಾಧಿಕಾರಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts