More

    ಸ್ಟೇಡಿಯಂ ಬಳಸದಿದ್ದರೆ ಏಳು ಕೋಟಿ ನಷ್ಟ … ಅಜಯ್ ದೇವಗನ್ ಅಭಿನಯದ ‘ಮೈದಾನ್’ಗೆ ಇದೆಂಥಾ ಸಂಕಷ್ಟ

    ಅಜಯ್ ದೇವಗನ್ ಅಭಿನಯದ ಈ ವರ್ಷದ ಅತ್ಯಂತ ಮಹಾತ್ವಾಕಾಂಕ್ಷೆಯ ಚಿತ್ರ ಎಂದರೆ ಅದು ‘ಮೈದಾನ್’. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಚಿತ್ರದ ಬಹುತೇಕ ಚಿತ್ರೀಕರಣ ಇಷ್ಟರಲ್ಲಿ ಮುಗಿದು, ಈ ವರ್ಷದ ಕೊನೆಗೆ ಬಿಡುಗಡೆಯಾಗಬೇಕಿತ್ತು. ಈಗ ಚಿತ್ರತಂಡದ ಪ್ಲಾನ್ ಎಲ್ಲಾ ತಲೆ ಕೆಳಗಾಗಿರುವುದಷ್ಟೇ ಅಲ್ಲ, ಏಳು ಕೋಟಿ ನಷ್ಟವಾಗುವ ಸಾಧ್ಯತೆ ಇದೆ.

    ‘ಮೈದಾನ್’ ಚಿತ್ರವು ಭಾರತದಲ್ಲಿ ಫುಟ್ಬಾಲ್‌ನ ಸುವರ್ಣ ಯುಗದ ಕಥೆ ಹೊಂದಿದ್ದು, ಅಜಯ್ ದೇವಗನ್ ಈ ಚಿತ್ರದಲ್ಲಿ ಸೈಯ್ಯದ್ ಅಬ್ದುಲ್ ರಹೀಮ್ ಎನ್ನುವ ಕೋಚ್ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರಕ್ಕಾಗಿಯೇ ಏಳು ಕೋಟಿ ವೆಚ್ಚದಲ್ಲಿ ಸ್ಟೇಡಿಯೊಂವೊಂದರ ಬೃಹತ್ ಸೆಟ್ ನಿರ್ಮಿಸಲಾಗಿತ್ತು. ಅಷ್ಟೇ ಅಲ್ಲ, ಚಿತ್ರದ ಬಹುತೇಕ ಚಿತ್ರೀಕರಣವನ್ನು ಅಲ್ಲೇ ಮಾಡಬೇಕಿತ್ತು. ಆದರೆ, ಈಗಿನ ಪರಿಸ್ಥಿತಿ ನೋಡಿದರೆ, ಆ ಸೆಟ್‌ನಲ್ಲಿ ಚಿತ್ರೀಕರಣ ಮಾಡುವುದೇ ಸಂಶಯ ಎನ್ನುವಂತಾಗಿದೆ. ಅಷ್ಟೇ ಅಲ್ಲ, ಆ ಸೆಟ್‌ಗೆ ಖರ್ಚು ಮಾಡಿರುವ ಏಳು ಕೋಟಿ ರೂಪಾಯಿಗಳು ನಷ್ಟವಾಗುವ ಸಾಧ್ಯತೆ ಇದೆ.

    ಈ ಸ್ಟೇಡಿಯಂ ಸೆಟ್ ಕಳೆದ ತಿಂಗಳೇ ಸಿದ್ಧವಾಗಿತ್ತು. ಮಾರ್ಚ್ 21ರ ನಂತರ ಅಲ್ಲಿ ಚಿತ್ರೀಕರಣ ನಡೆಯಬೇಕಿತ್ತು. ಆದರೆ, ಅಷ್ಟರಲ್ಲಿ ಲಾಕ್‌ಡೌನ್ ಶುರುವಾಯಿತು. ಇನ್ನು ಮೇ 3ರವರೆಗಂತೂ ಸದ್ಯಕ್ಕೆ ಚಿತ್ರೀಕರಣ ಮಾಡುವಂತಿಲ್ಲ. ಈ ಲಾಕ್‌ಡೌನ್ ಏನಾದರೂ ಜೂನ್‌ವರೆಗೂ ಮುಂದೂಡಲ್ಪಟ್ಟರೆ ಅಷ್ಟರಲ್ಲಿ ಮಳೆಗಾಲ ಪ್ರಾರಂಭವಾಗುತ್ತದೆ. ಅಷ್ಟರಲ್ಲಿ ಸ್ಟೇಡಿಯಂ ಸೆಟ್‌ನಲ್ಲಿ ಚಿತ್ರೀಕರಣ ಮಾಡಲಾಗದಿದ್ದರೆ, ಏಳು ಕೋಟಿ ನಷ್ಟವಾಗುತ್ತದೆ ಎಂಬ ಚಿಂತೆ ಚಿತ್ರತಂಡವನ್ನು ಕಾಡುತ್ತಿದೆ. ಹಾಗಾಗಿ ಮೇ 3ಕ್ಕೆ ಲಾಕ್‌ಡೌನ್ ಮುಗಿದರೆ, ಮಳೆ ಶುರುವಾಗುವಷ್ಟರಲ್ಲಿ ಒಂದಿಷ್ಟು ಚಿತ್ರೀಕರಣ ಮಾಡಿಕೊಳ್ಳಬೇಕು ಎನ್ನುವುದು ಚಿತ್ರತಂಡದ ಕನಸು. ಈ ಕನಸು, ನನಸಾಗುತ್ತಾ ಎನ್ನುವುದನ್ನು ಕಾದು ನೋಡಬೇಕು.

    ರಾಮನಗರದಲ್ಲಿ ನಿಖಿಲ್-ರೇವತಿ ಮದುವೆ … ತೋಟದ ಮನೆಯಲ್ಲಿ ನಡೆಯಲಿದೆ ಸರಳ ವಿವಾಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts