More

    ಸೇವಾದಳದಿಂದ ದೇಶಪ್ರೇಮ, ಭಾರತ ಸೇವಾದಳದ ತಾಲೂಕು ಅಧ್ಯಕ್ಷ ಕೆ.ನಾಗೇಶ್ ಅಭಿಮತ

    ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ಶಿಸ್ತು, ರಾಷ್ಟ್ರೀಯ ಭಾವನೆ ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತಿರುವ ಭಾರತ ಸೇವಾದಳದ ಭಾವೈಕ್ಯತೆ ಮಕ್ಕಳ ಮೇಳವನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ತಾಲೂಕಿನ ಕೀರ್ತಿ ಹೆಚ್ಚಿಸಿದೆ ಎಂದು ಭಾರತ ಸೇವಾದಳದ ತಾಲೂಕು ಅಧ್ಯಕ್ಷ ಕೆ.ನಾಗೇಶ್ ತಿಳಿಸಿದರು.

    ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಭಾರತ ಸೇವಾದಳ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಗುರುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ರಾಷ್ಟ್ರೀಯ ಭಾವೈಕ್ಯತೆ ಮಕ್ಕಳ ಮೇಳದ ಸಮಾರೋಪದಲ್ಲಿ ಮಾತನಾಡಿದರು.

    ರಾಷ್ಟ್ರಪಿತ ಮಹತ್ಮಾ ಗಾಂಧಿ ಅವರ ಆದೇಶದಂತೆ ಸ್ಥಾಪಿಸಲಾದ ಭಾರತ ಸೇವಾದಳವು ಗಾಂಧಿ ಅವರ ತತ್ವ ಮತ್ತು ಸಿದ್ಧಾಂತವನ್ನು ಮೈಗೂಡಿಸಿಕೊಂಡು, ಮಕ್ಕಳಲ್ಲಿ ಶಿಸ್ತು, ರಾಷ್ಟ್ರ ಧ್ವಜದ ಗೌರವ ಹಾಗೂ ದೇಶಪ್ರೇಮ ಬೆಳೆಸುವಲ್ಲಿ ಸೇವಾದಳದ ಪಾತ್ರ ವಹಿಸುತ್ತಿದೆ ಎಂದರು.

    ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹನುಮಂತೇಗೌಡ ಮಾತನಾಡಿ, ಸೇವಾದಳದಲ್ಲಿನ ಮಕ್ಕಳು ಜಾತಿ, ಧರ್ಮ, ಮತ, ಮತ್ಸರದಿಂದ ದೂರಾಗಿ ಎಲ್ಲರೂ ಒಂದೇ ಎಂಬ ಸಹಬಾಳ್ವೆ ಕಲಿಯುವಂತಾಗಬೇಕು ಎಂದರು.

    ಭಾರತ ಸೇವಾ ದಳದ ರಾಜ್ಯ ಅಧ್ಯಕ್ಷ ಎಚ್.ಎಂ.ಗುರುಸ್ವಾಮಿ ಮಾತನಾಡಿ, ಮಕ್ಕಳನ್ನು ದೇಶದ ಸತ್ ಪ್ರಜೆಗಳನ್ನಾಗಿಸುವಲ್ಲಿ ಸೇವಾದಳ ಪಾತ್ರ ಅನನ್ಯವಾಗಿದೆ. ರಾಜ್ಯದ 30 ಜಿಲ್ಲೆಗಳಿಂದ ಕಾರ್ಯಕ್ರಮಕ್ಕೆ ಬಂದು ಶಿಸ್ತು ಬದ್ಧವಾಗಿ ಕಾರ್ಯಕ್ರಮವನ್ನು ಯಶಸ್ವಿಯನ್ನಾಗಿಸುವಲ್ಲಿ ಕಾರಣಕರ್ತರಾದ ಮಕ್ಕಳು ಮೇಳದಲ್ಲಿನ ಭಾವೈಕ್ಯತೆ ಸಂದೇಶ ಹೊತ್ತು ತೆರಳುತ್ತಿದ್ದು, ಸಾಂಸ್ಕೃತಿಕ ನಡೆನುಡಿ, ಹಿರಿಯ ಮಾರ್ಗದರ್ಶನದಲ್ಲಿ ದೇಶದ ಭವಿಷ್ಯದ ಬುನಾದಿಯಾಗಲಿದ್ದು, ಮಕ್ಕಳು ಕ್ಷೇಮವಾಗಿ ಮನೆಗಳಿಗೆ ತೆರಳಲು ಶಿಕ್ಷಕರು ಎಚ್ಚರಿಕೆ ವಹಿಸಬೇಕೆಂದರು.

    ಸಮಾರೋಪದ ಅಂಗವಾಗಿ ಭಾರತ ಸೇವಾದಳದ ರಾಜ್ಯ ಘಟಕದ ಅಧ್ಯಕ್ಷ ಎಚ್.ಎಂ.ಗುರುಸ್ವಾಮಿ ಮಕ್ಕಳಿಂದ ಗೌರವ ವಂಧನೆ ಸ್ವೀಕರಿಸಿದರು. ಸಾಮೂಹಿಕ ಪಥಸಂಚಲನ, ಪದಕವಾಯತು, ಗಣ್ಯರಿಗೆ ಸನ್ಮಾನ ನಡೆಸಲಾಯಿತು.

    ರಾಜ್ಯ ಉಪಾಧ್ಯಕ್ಷರಾದ ಬಿ.ಸಿ.ವೆಂಕಟೇಶ್, ಶಿವಶರಣಪ್ಪ ಎಂ.ಗೌಡ ಜಂಬೇರಾಳ, ಪ್ರಧಾನ ಕಾರ್ಯದರ್ಶಿ ಎಂ.ವಿ.ದೇವಿಪ್ರಸಾದ್, ಮಹಿಳಾ ವಿಭಾಗದ ಸಂಘಟನಾ ಕಾರ್ಯದರ್ಶಿ ಎಚ್.ಎಸ್.ಪೂರ್ಣಿಮಾ, ಜಿಲ್ಲಾ ಅಧ್ಯಕ್ಷ ಕೆ.ಎನ್.ಪ್ರಕಾಶ್, ಕೇಂದ್ರ ಸಮಿತಿ ಸದಸ್ಯ ಬಿ.ಸಿ.ನಾರಾಯಣಸ್ವಾಮಿ, ತಾಲೂಕು ಉಪಾಧ್ಯಕ್ಷ ಚನ್ನಕೃಷ್ಣ, ಕಾರ್ಯದರ್ಶಿ ಗಂಗಾಧರ್, ಬಿಇಒ ಬೈಯಪ್ಪರೆಡ್ಡಿ, ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ಕಲ್ಪನಾಶಿವಣ್ಣ, ಎಸ್.ಬಿ.ರೆಡ್ಡಿ, ಸಿ.ರಾಮಣ್ಣ, ಎನ್.ನಾರಾಯಣಸ್ವಾಮಿ, ಬಿ.ಕೆ.ವೆಂಕಟನಾರಾಯಣ್, ಶಶಿಧರ್, ಗೀತಾ ಮರಲಿಂಗಣ್ಣನವರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts