More

    ಕಬ್ಬು ಬೆಳೆಗಾರರ ಅಹವಾಲು ಇತ್ಯರ್ಥಕ್ಕೆ ಸಚಿವ ಲಾಡ್ ಸೂಚನೆ

    ಧಾರವಾಡ: ಕಲಘಟಗಿ, ಅಳ್ನಾವರ, ಧಾರವಾಡ ತಾಲೂಕುಗಳ ಕಬ್ಬು ಬೆಳೆಗಾರರಿಗೆ ಹಳಿಯಾಳದ ಪ್ಯಾರಿ ಶುಗರ್ಸ್ ಕಾರ್ಖಾನೆ ಕಬ್ಬು ಕಟಾವು ಹಾಗೂ ಸಾಗಾಟ ದರವನ್ನು ಹೆಚ್ಚಿಗೆ ನಿಗದಿಪಡಿಸಿದೆ. ಅದನ್ನು ಪರಿಶೀಲಿಸಿ ಕಡಿಮೆಗೊಳಿಸಬೇಕು ಎಂದು ಕಾರ್ಖಾನೆ ಅಽಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೂಚಿಸಿದರು.
    ನಗರದ ಜಿಲ್ಲಾಽಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
    ಕಬ್ಬು ಬೆಳೆಗಾರರ ಅಹವಾಲು ನ್ಯಾಯಸಮ್ಮತವಾಗಿದೆ. ಆದರೆ, ಕಾರ್ಖಾನೆಯು ಕಬ್ಬು ಕಟಾವು ಹಾಗೂ ಸಾಗಾಟಕ್ಕೆ ೮೯೩ ರೂ. ದರ ನಿಗದಿಪಡಿಸಿದೆ. ಈ ದರ ಸಮಂಜಸವಲ್ಲ. ರೈತರ ಅಹವಾಲು ಮೇಲ್ನೋಟಕ್ಕೆ ನ್ಯಾಯಸಮ್ಮತವಾಗಿದ್ದು ಕಾರ್ಖಾನೆಯು ಈ ದರವನ್ನು ಕಡಿಮೆಗೊಳಿಸಬೇಕು ಎಂದು ಸೂಚಿಸಿದರು.
    ಕಾರ್ಖಾನೆ ಅಽಕಾರಿಗಳು ಆಡಳಿತ ಮಂಡಳಿಯೊAದಿಗೆ ಚರ್ಚಿಸಿ ಇನ್ನೆರಡು ದಿನಗಳಲ್ಲಿ ದರ ನಿಗದಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಇದನ್ನು ಸಕ್ಕರೆ ಆಯುಕ್ತರು ಹಾಗೂ ಸಕ್ಕರೆ ಸಚಿವರ ಗಮನಕ್ಕೆ ತರುತ್ತೇನೆ ಎಂದು ಲಾಡ್ ಭರವಸೆ ನೀಡಿದರು.
    ಜಿಲ್ಲಾಽಕಾರಿ ಗುರುದತ್ತ ಹೆಗಡೆ, ಪೊಲೀಸ್ ವರಿಷ್ಠಾಽಕಾರಿ ಡಾ. ಗೊಪಾಲ ಬ್ಯಾಕೋಡ ಹಾಗೂ ಕಬ್ಬು ಬೆಳೆಗಾರರ ಮುಖಂಡರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts