More

    ಹಾವೇರಿ ಆಯುರ್ವೆದಿಕ್ ಮೆಡಿಕಲ್ ಕಾಲೇಜ್​ನಲ್ಲಿ 80 ಬೆಡ್​ಗಳ ವ್ಯವಸ್ಥೆಗೆ ಸಿದ್ಧತೆ

    ಹಾವೇರಿ: ನಗರದ ಸಿಂದಗಿ ಶಾಂತವೀರೇಶ್ವರ ಆಯುರ್ವೆದಿಕ್ ಮೆಡಿಕಲ್ ಕಾಲೇಜನ್ನು ನೂತನ ಕೋವಿಡ್ ಕೇರ್ ಸೆಂಟರ್ ಆಗಿ ಗುರುತಿಸಲಾಗಿದೆ. 80 ಬೆಡ್​ಗಳ ವ್ಯವಸ್ಥೆ ಮಾಡಿ ಕೋವಿಡ್ ಸೋಂಕಿತರ ದಾಖಲಾತಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು.
    ಹೆಚ್ಚುವರಿಯಾಗಿ ಹಾವೇರಿ ತಾಲೂಕಿನಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸುವ ಕುರಿತು ನಗರದ ಸಿಂದಗಿ ಶಾಂತವೀರೇಶ್ವರ ಆಯುರ್ವೆದಿಕ್ ಮೆಡಿಕಲ್ ಕಾಲೇಜ್​ಗೆ ಬುಧವಾರ ಭೇಟಿ ನೀಡಿ ಕೋವಿಡ್ ಕೇರ್ ಸೆಂಟರ್​ಗೆ ಅಗತ್ಯ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿ ಅವರು ಮಾತನಾಡಿದರು.
    ಕಾಲೇಜ್ ಪ್ರಾಚಾರ್ಯರು ಹಾಗೂ ವೈದ್ಯರೊಂದಿಗೆ ರ್ಚಚಿಸಿ, ಇಲ್ಲಿ 80 ಬೆಡ್​ಗಳಿಗೆ ಅವಕಾಶ ಮಾಡಲಾಗುವುದು. ಬೆಡ್​ಗಳ ವ್ಯವಸ್ಥೆ, ಇತರ ಸೌಲಭ್ಯಗಳನ್ನು ಹಾಗೂ ಅಗತ್ಯ ಮಾನವ ಸಂಪನ್ಮೂಲಗಳನ್ನು ಜಿಲ್ಲಾಡಳಿತದಿಂದ ಒದಗಿಸಲಾಗುವುದು. ನಗರದಲ್ಲಿ ಹೆಚ್ಚುವರಿಯಾಗಿ ಕೋವಿಡ್ ಕೇರ್ ಸೆಂಟರ್ ಆರಂಭಿಸುವುದರಿಂದ ಬಸಾಪುರ ಕೋವಿಡ್ ಕೇರ್ ಸೆಂಟರ್​ವೆುೕಲಿನ ಒತ್ತಡ ಕಡಿಮೆಯಾಗಲಿದೆ. ಸ್ಥಳೀಯವಾಗಿ ಈ ಸೆಂಟರ್​ಗೆ ದಾಖಲಿಸಲು ಅನುಕೂಲವಾಗುವುದು ಎಂದರು.
    ಜಿಲ್ಲೆಯಲ್ಲಿ ಲಕ್ಷಣ ರಹಿತ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಹೋಂ ಐಸೋಲೇಷನ್​ನಲ್ಲಿದ್ದಾರೆ. ಅವರಿಗೆ ಔಷಧೋಪಚಾರದೊಂದಿಗೆ ಮನೆಗಳಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿರುವುದರಿಂದ ಮನೆಯಲ್ಲಿರುವ ಇತರರಿಗೂ ರೋಗ ಹರಡುತ್ತಿದೆ. ಹಾಗಾಗಿ ಸೋಂಕಿತರನ್ನು ಹತ್ತಿರದ ಕೋವಿಡ್ ಕೇರ್ ಸೆಂಟರ್​ಗಳಿಗೆ ದಾಖಲಿಸಲು ಈ ಕೇಂದ್ರವನ್ನು ಗುರುತಿಸಲಾಗಿದೆ. ಕೋವಿಡ್ ಕೇರ್ ಸೆಂಟರ್​ಗೆ ಅವಶ್ಯಕ ಪರಿಕರಗಳನ್ನು ನಿಯಮಾನುಸಾರ ಒದಗಿಸಲು ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಈಗಾಗಲೇ ಸೂಚಿಸಲಾಗಿದೆ ಎಂದರು. ಎಡಿಸಿ ಎಂ. ಯೋಗೇಶ್ವರ, ಸಮಾಜಕಲ್ಯಾಣಾಧಿಕಾರಿ ಜಗದೀಶ ಹೆಬ್ಬಳ್ಳಿ ಇತರರಿದ್ದರು.
    ಗ್ರಾಮಗಳಲ್ಲಿ ಬಿಗಿ ಕ್ರಮ ಕೈಗೊಳ್ಳಿ: ಹಾವೇರಿ ತಾಲೂಕಿನ ಎಲ್ಲ ಗ್ರಾಮಗಳ ಪ್ರತಿ ಮನೆಗೆ ಭೇಟಿ ನೀಡಿ ಕೋವಿಡ್ ಸೋಂಕಿನ ಕುರಿತು ಸಮೀಕ್ಷೆ ನಡೆಸಲು ಪಿಡಿಒಗಳಿಗೆ ಶಾಸಕ ನೆಹರು ಓಲೇಕಾರ ಸೂಚಿಸಿದರು. ಗ್ರಾಮವಾರು ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಂಡಿರುವ ಕ್ರಮಗಳ ಕುರಿತು ನಗರದ ತಾಪಂ ಸಭಾಂಗಣದಲ್ಲಿ ಮಂಗಳವಾರ ಸಂಜೆ ಪಿಡಿಒಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು. ಸೌಮ್ಯ ರೋಗದ ಲಕ್ಷಣ ಕಂಡುಬಂದರೂ ಮನೆಯಲ್ಲಿರಿಸದೆ ಕಡ್ಡಾಯವಾಗಿ ಹತ್ತಿರದ ಕೋವಿಡ್ ಕೇರ್ ಸೆಂಟರ್​ಗೆ ದಾಖಲಿಸಬೇಕು. ಪಾಸಿಟಿವ್ ಪತ್ತೆಯಾದವರ ಪ್ರಥಮ ಮತ್ತು ದ್ವಿತೀಯ ಸಂರ್ಪತರನ್ನು ಪತ್ತೆ ಹಚ್ಚಿ ತ್ವರಿತ ಪರೀಕ್ಷೆ ಮಾಡಬೇಕು. ಸಂರ್ಪತರ ಬೀದಿಯಲ್ಲಿ ಪ್ರತಿ ಮನೆಯಲ್ಲೂ ತಪಾಸಣೆ ನಡೆಸಬೇಕು ಎಂದು ಹೇಳಿದರು. ಸೋಂಕಿತ ಮೃತಪಟ್ಟಲ್ಲಿ ಅಥವಾ ಸೋಂಕು ದೃಢವಾದಲ್ಲಿ ಸೋಂಕಿನ ಮೂಲವನ್ನು ಕಂಡುಹಿಡಿದು ಆ ಸೋಂಕಿನ ಸರಪಳಿಯನ್ನು ಕತ್ತರಿಸಬೇಕು. ಈ ನಿಟ್ಟಿನಲ್ಲಿ ಗ್ರಾಮಮಟ್ಟದ ಕೋವಿಡ್ ಟಾಸ್ಕ್​ಫೋರ್ಸ್ ಸಮಿತಿ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಕರು ಮನಬಂದಂತೆ ಓಡಾಡುತ್ತಿದ್ದಾರೆ. ಇದರಿಂದ ಸೋಂಕು ಹೆಚ್ಚಾಗಿ ಹರಡುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಅಗತ್ಯಬಿದ್ದರೆ ಪೊಲೀಸ್ ಅಧಿಕಾರಿಗಳಿಗೆ ನಿಯಮ ಉಲ್ಲಂಘಿಸಿದವರ ಹೆಸರು ನೀಡಿ. ಇಂತವರ ಮೇಲೆ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು. ಸಭೆಯಲ್ಲಿ ತಹಸೀಲ್ದಾರ್ ಗಿರೀಶ ಸ್ವಾದಿ, ಟಿಎಚ್​ಒ ಡಾ. ಪ್ರಭಾಕರ ಕುಂದೂರ, ಪೌರಾಯುಕ್ತ ಪಿ.ಎಂ. ಚಲವಾದಿ, ತಾಪಂ ಇಒ ಡಿ.ಸಿ. ಬಸವರಾಜಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ, ಪಿಡಿಒಗಳು ಉಪಸ್ಥಿತರಿದ್ದರು.
    330 ಜನರಿಗೆ ಸೋಂಕು, 7 ಸಾವು: ಹಾವೇರಿ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಬುಧವಾರ ಮತ್ತೆ ಏರಿಕೆ ಕಂಡಿದ್ದು, ಸಾವಿನ ಪ್ರಮಾಣವೂ ಹೆಚ್ಚಾಗಿದೆ. 330 ಜನರಿಗೆ ಸೋಂಕು ತಗಲಿದೆ. 114 ಜನ ಗುಣವಾಗಿದ್ದು, 7 ಜನ ಮೃತಪಟ್ಟಿದ್ದಾರೆ. ಹಾನಗಲ್ಲ-113, ರಾಣೆಬೆನ್ನೂರು-80, ಹಿರೇಕೆರೂರು-38, ಹಾವೇರಿ-37, ಬ್ಯಾಡಗಿ-23, ಸವಣೂರು-19, ಶಿಗ್ಗಾಂವಿ-18 ಹಾಗೂ ಇತರ ಇಬ್ಬರು ಸೇರಿ 330 ಜನರಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿನಿಂದ ಗುಣವಾಗಿ ರಾಣೆಬೆನ್ನೂರ ತಾಲೂಕಿನ 36, ಹಾವೇರಿ ತಾಲೂಕಿನ 19, ಹಿರೇಕೆರೂರ ತಾಲೂಕಿನ 17, ಹಾನಗಲ್ಲ ತಾಲೂಕಿನ 16, ಶಿಗ್ಗಾಂವಿ ತಾಲೂಕಿನ 14, ಸವಣೂರ ತಾಲೂಕಿನ 7, ಬ್ಯಾಡಗಿ ತಾಲೂಕಿನ 5 ಜನ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ 2,256 ಸಕ್ರಿಯ ಪ್ರಕರಣಗಳಿವೆ. ಹಿರೇಕೆರೂರ ತಾಲೂಕಿನ 68 ಹಾಗೂ 74 ವರ್ಷದ ವೃದ್ಧ, 65 ವರ್ಷದ ವೃದ್ಧೆ, ಹಾವೇರಿ ತಾಲೂಕಿನ 48 ವರ್ಷದ ಪುರುಷ, 60 ವರ್ಷದ ವೃದ್ಧೆ, ರಾಣೆಬೆನ್ನೂರ ತಾಲೂಕಿನ 64 ವರ್ಷದ ವೃದ್ಧ, ಸವಣೂರ ತಾಲೂಕಿನ 75ವರ್ಷದ ವೃದ್ಧ ಬುಧವಾರ ಮೃತಪಟ್ಟಿದ್ದಾರೆ ಎಂದು ಡಿಎಚ್​ಒ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ ತಿಳಿಸಿದ್ದಾರೆ.
    ಖಾಸಗಿ ಆಸ್ಪತ್ರೆ ವೈದ್ಯರಿಗೆ ಸೂಚನೆ: ಹಾವೇರಿ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆ, ಕ್ಲಿನಿಕ್​ಗಳ ವೈದ್ಯರು ತಮ್ಮ ಆಸ್ಪತ್ರೆಗೆ ಬರುವ ಐಎಲ್​ಆರ್ ಅಥವಾ ಕೋವಿಡ್ ಲಕ್ಷಣ ಹೊಂದಿದ ರೋಗಿಗಳನ್ನು ಪರೀಕ್ಷೆಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ಕಳುಹಿಸಬೇಕು. ತಪ್ಪಿದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಡಿಎಚ್​ಒ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ ಸೂಚಿಸಿದ್ದಾರೆ. ಕೋವಿಡ್ 2ನೇ ಅಲೆಯಿಂದ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದು, ಖಾಸಗಿ ಆಸ್ಪತ್ರೆ, ಕ್ಲಿನಿಕ್​ಗಳಿಗೆ ಬರುವ ಹೊರ ರೋಗಿಗಳಲ್ಲಿನ ಐಎಲ್​ಆರ್, ಕೋವಿಡ್ ಲಕ್ಷಣ ಹೊಂದಿರುವ ರೋಗಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸದೇ ಚಿಕಿತ್ಸೆ ನೀಡುತ್ತಿರುವುದು ಕಂಡುಬಂದಿದೆ. ಇದರಿಂದ ಕೋವಿಡ್ ಸೋಂಕು ಹರಡುವಿಕೆ ತಡೆಗಟ್ಟುವುದು ಕಷ್ಟ ಸಾಧ್ಯವಾಗಿರುತ್ತದೆ ಹಾಗೂ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ, ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್​ಗಳಿಗೆ ರೋಗಿಗಳು ಬಂದಾಗ ಕೋವಿಡ್ ಪರೀಕ್ಷೆಗಾಗಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕಾಸ್ಪತ್ರೆ ಅಥವಾ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಬೇಕು. ಕೋವಿಡ್ ರೋಗದ ಪರೀಕ್ಷೆ ಮಾಡಿಸದೇ ಚಿಕಿತ್ಸೆ ನೀಡುವುದು ಕಂಡುಬಂದಲ್ಲಿ ಕೆಪಿಎಂಇ ಕಾಯ್ದೆ ಅನ್ವಯ ವೈದ್ಯರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts