More

    ಸ್ಟಾರ್ ಆಲ್ರೌಂಡರ್ ಕೈ ಬಿಟ್ಟು ಬೆಂಗಳೂರು ಮೂಲದ ರಚಿನ್ ರವೀಂದ್ರ ಮೇಲೆ ದೃಷ್ಟಿ ಹರಿಸಿದ ಸಿಎಸ್‌ಕೆ ತಂಡ

    ನವದೆಹಲಿ: ಏಕದಿನ ವಿಶ್ವಕಪ್‌ನಲ್ಲಿ ತಂಡದ ನೀರಸ ನಿರ್ವಹಣೆ ಬಳಿಕ ಮೊಣಕಾಲಿನ ಶಸ ಚಿಕಿತ್ಸೆಗೆ ಒಳಗಾಗಲಿರುವ ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸೃ್ 2024ರ ಐಪಿಎಲ್ ಆವೃತ್ತಿಯಿಂದ ಹೊರಗುಳಿಯಲಿದ್ದಾರೆ ಎನ್ನಲಾಗಿದೆ. ಕಳೆದ ಬಾರಿ ಮಿನಿ ಹರಾಜಿನಲ್ಲಿ 32 ವರ್ಷದ ಸ್ಟೋಕ್ಸ್ 16.25 ಕೋಟಿ ರೂ.ಗೆ ಸಿಎಸ್‌ಕೆ ತಂಡದ ಪಾಲಾಗಿದ್ದರು. 2023ರಲ್ಲಿ ಕಾಲಿನ ಬೆರಳು ಗಾಯದಿಂದಾಗಿ ಸ್ಟೋಕ್ಸ್ ಸಿಎಸ್‌ಕೆ ಪರ ಕೇವಲ 2 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು.

    ಶಸ ಚಿಕಿತ್ಸೆಯ ಬಳಿಕ ಸ್ಟೋಕ್ಸ್ ಸಂಪೂರ್ಣವಾಗಿ ಗುಣಮುಖರಾಗಲು 2 ತಿಂಗಳ ಕಾಲಾವಕಾಶದ ಅಗತ್ಯವಿದ್ದು, ಮುಂದಿನ ವರ್ಷ ಜನವರಿ 24ರಂದು ಆರಂಭವಾಗಲಿರುವ ಭಾರತ ವಿರುದ್ಧ 5ಪಂದ್ಯಗಳ ಟೆಸ್ಟ್ ಸರಣಿಗೆ ಫಿಟ್ ಆಗುವ ನಿರೀಕ್ಷೆಯಲ್ಲಿದ್ದಾರೆ . ಬಳಿಕ ಐಪಿಎಲ್ ಹಾಗೂ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಆಡಲು ಕಾರ್ಯದೊತ್ತಡ ಎದುರಿಸಲಿದ್ದಾರೆ ಎನ್ನಲಾಗಿದೆ.

    ಡಿಸೆಂಬರ್ 19 ರಂದು ದುಬೈನಲ್ಲಿ ಮಿನಿ ಹರಾಜು ನಿಗದಿಯಾಗಿದ್ದು, ಎಲ್ಲ 10 ತಂಡಗಳಿಗೆ ತಾವು ಉಳಿಸಿಕೊಂಡಿರುವ ಮತ್ತು ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಸಲ್ಲಿಸಲು ನ.26 ಅಂತಿಮ ಗಡುವು ನೀಡಲಾಗಿದೆ. ಒಂದು ವೇಳೆ ಸಿಎಸ್‌ಕೆ ತಂಡದಿಂದ ಬೆನ್ ಸ್ಟೋಕ್ಸೃ್ ಬಿಡುಗಡೆಯಾದರೆ ಅವರ ಬದಲಿಗೆ ಬೆಂಗಳೂರು ಮೂಲದ ರಚಿನ್ ರವೀಂದ್ರ ಅಥವಾ ಅಫ್ಘಾನಿಸ್ತಾನದ ಅಜ್ಮತ್ ಉಲ್ಲಾ ಒಮರ್ಜಾಯ್ ಅವರನ್ನು ಖರೀದಿಸುವ ಸಾಧ್ಯತೆಗಳಿವೆ. ಕೆಕೆಆರ್ ತಂಡದಿಂದ ಕಿವೀಸ್ ವೇಗಿ ಲಾಕಿ ರ್ಗ್ಯುಸನ್ ಅವರನ್ನು ಕೈಬಿಡಲಾಗಿದೆ. ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ತಂಡ ಸೇರಿದ್ದ ರ್ಗ್ಯಸನ್ ಬಳಿಕ ಕೆಕೆಆರ್ ತಂಡಕ್ಕೆ ವರ್ಗಾವಣೆ (ಟ್ರೇಡ್) ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts