More

    ಸೇವಾ ಭದ್ರತೆ ಒದಗಿಸಲು ಪಟ್ಟು: ಹಡಗಲಿಯಲ್ಲಿ ತಹಸೀಲ್ದಾರ್ ವಿಶ್ವಜಿತ್ ಮೆಹತಾಗೆ ಅತಿಥಿ ಉಪನ್ಯಾಸಕರ ಮನವಿ

    ಹೂವಿನಹಡಗಲಿ: ಸೇವಾ ಭದ್ರತೆ ಒದಗಿಸುವ ಜತೆಗೆ ಯಾವುದೇ ಕಾರಣಕ್ಕೂ ಸೇವೆಯಿಂದ ಕೈ ಬಿಡದಂತೆ ಒತ್ತಾಯಿಸಿ ತಾಲೂಕು ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ಬುಧವಾರ ತಹಸೀಲ್ದಾರ್ ವಿಶ್ವಜಿತ್ ಮೆಹತಾಗೆ ಮನವಿ ಸಲ್ಲಿಸಿತು.

    ರಾಜ್ಯದ 413 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾಸಕರು, ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಈವರೆಗೂ ಸರ್ಕಾರದಿಂದ ಸೇವಾ ಭದ್ರತೆ ಸಿಕ್ಕಿಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ಸ್ವಂತ ಹಣದಲ್ಲೇ ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ನಡೆಸಿದ್ದೇವೆ. ಯುಜಿಸಿಯು ಮಾ.24 ರಿಂದ ಜು.31ರವರೆಗೆ ಸೇವಾ ಅವಧಿ ಎಂದು ಪರಿಗಣಿಸಿ ವೇತನ ನೀಡಬೇಕೆಂದು ನಿರ್ದೇಶನ ನೀಡಿದೆ. ಆದರೆ, ಸರ್ಕಾರ ನಿರ್ಲಕ್ಷ್ಯವಹಿಸಿದೆ ಎಂದು ಆರೋಪಿಸಿದರು.

    ಎಐಡಿವೈಒ ಸಂಘಟನೆ ತಾಲೂಕ ಸಂಚಾಲಕ ಉಮೇಶ ಸೊಪ್ಪಿನ, ಸಮಿತಿ ಸದಸ್ಯರಾದ ಬಡಿಗೇರ ಶಿವಾನಂದಾಚಾರ್, ಡಿ.ಕೃಷ್ಣ, ಮಹೇಶ ಭಟ್, ರಾಕೇಶ, ಪಿ.ಸಂಪತ್, ಕೆ.ಪ್ರಕಾಶ, ಮೆಹಬೂಬ್ ಸಾಬ್, ಡಾ.ಶೈಲಜಾ ಪವಾಡ ಶೆಟ್ರು, ಪ್ರಕಾಶ ಗುರುವಿನ, ಎ.ಕೆ.ನಾಗರಾಜ, ಪ್ರಿಯಾಂಕಾ, ಸಿದ್ದೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts