More

    ಸೇವೆ ಸಮಾಜಮುಖಿಯಾಗಿರಲಿ

    ಬೈಲಹೊಂಗಲ: ಭೂಮಿಯ ಮೇಲೆ ಬದುಕಿರುವ ಪ್ರತಿ ಜೀವಿ ಭಗವಂತನ ಕೃಪೆಗೆ ಪಾತ್ರವಾಗಿರುತ್ತದೆ. ಆ ಶಕ್ತಿಯನ್ನು ಮೈಗೂಡಿಸಿಕೊಂಡು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವುದು ಅತ್ಯವಶ್ಯವಾಗಿದೆ ಎಂದು ಗೌರಿಗದ್ದೆ ಅವಧೂತ ವಿನಯ ಗುರೂಜಿ ಹೇಳಿದ್ದಾರೆ.

    ತಾಲೂಕಿನ ಬೇವಿನಕೊಪ್ಪ ಗ್ರಾಮದ ನಿತ್ಯಾನಂದ ಜ್ಞಾನಮಂದಿರ ಆನಂದಾಶ್ರಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಿತ್ಯಾನಂದ ನಿಶ್ಚಿಂತ ನಿಲಯದ ಉದ್ಘಾಟನೆ, ಶಕ್ತಿಪಾತ ಯೋಗ ವಿಜ್ಞಾನ ಕೇಂದ್ರದ ಸಭಾಂಗಣ, ಕಟ್ಟಡ ನಿರ್ಮಾಣ ಕಾರ್ಯದ ಭೂಮಿಪೂಜೆ ನೆರವೇರಿಸಿ ಅಜಾತವಾದ ತತ್ತ್ವದ ಕುರಿತು ಪ್ರವಚನದಲ್ಲಿ ಮಾತನಾಡಿ, ಭಗವಾನ ನಿತ್ಯಾನಂದರ ಅವಧೂತ ಪರಂಪರೆಗೆ ಅಗಾಧ ಶಕ್ತಿಯಿದೆ. ಆ ಶಕ್ತಿ ನಂಬಿ ನಡೆದರೆ ಬದುಕು ಪಾವನವಾಗುತ್ತದೆ. ಶಾಂತಿ, ನೆಮ್ಮದಿ, ಆರೋಗ್ಯಭಾಗ್ಯ ದೊರೆಯುತ್ತದೆ. ಉಕ ಭಾಗ ಶರಣರ ನಾಡಾಗಿದ್ದರಿಂದ ಇದೊಂದು ಅನುಭವ ಮಂಟಪವಾಗಿದೆ. ನಿತ್ಯಾನಂದ ಗುರುಗಳು ಹಾಕಿಕೊಟ್ಟ ಪರಂಪರೆಯಲ್ಲಿ ಬೇವಿನಕೊಪ್ಪ ಆನಂದಾಶ್ರಮದ ವಿಜಯಾನಂದ ಸ್ವಾಮೀಜಿ ಮುನ್ನಡೆಯುತ್ತಿದ್ದಾರೆ ಎಂದರು.

    ಬೇವಿನಕೊಪ್ಪ ಆನಂದಾಶ್ರಮದ ವಿಜಯಾನಂದ ಶ್ರೀ ಸಾನ್ನಿಧ್ಯ ವಹಿಸಿ ಮಾತನಾಡಿ, ವಿನಯ ಗುರೂಜಿ ಅಜಾತವಾದ ತತ್ತ್ವಗಳನ್ನು ವಿಶ್ವದಾದ್ಯಂತ ಪಸರಿಸುತ್ತ ಮನುಷ್ಯನ ಪರಿವರ್ತನೆಗೆ ಪ್ರಯತ್ನಿಸುತ್ತಿದ್ದಾರೆ. ನಾವೆಲ್ಲರೂ ಜ್ಞಾನ ಸಂಪಾದನೆಗೆ ಹೆಚ್ಚಿನ ಒತ್ತು ನಿಡಬೇಕು ಎಂದ ಅವರು ಆಶ್ರಮದ ಪ್ರಗತಿಗೆ ನೆರವಾದ ಭಕ್ತರು, ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು.

    ಕರುಣಾಸಿಂಧು ಅಧ್ಯಾತ್ಮಿಕ ಗ್ರಂಥ ಬಿಡುಗಡೆ, ಉಡುಪಿಯ ನರಸಿಂಹದೇವ ಉಪಾಸಕ ನಿತ್ಯಾನಂದ ಭಂಡಾರಕರ ಹಾಗೂ ವೈದಿಕರ ನೇತೃತ್ವದಲ್ಲಿ ವಾಸ್ತು ಪೂಜೆ, ದತ್ತ ಮಹಾಯಾಗ ಪೂಜಾ ಕಾರ್ಯಕ್ರಮ ಜರುಗಿದವು. ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಶಿವದಾಸ, ಗೌತಮ ನೇತ್ರೇಕರ, ನಾಗಣ್ಣ, ಮಂಜುನಾಥ ಅಡಿಗ, ಸುಭಾಷ ಅಮೀನ, ಸುನೀಲ ಪೂಜೇರಿ, ಸರೋಜಮ್ಮ, ರಮೇಶ ಜಂಗಲ, ದಿನೇಶ ಅಮೀನ, ಕೃಷ್ಣಮೂರ್ತಿ ಪೂಜಾರಿ ಇದ್ದರು. ಗೋರೇಸಾಬ ನದಾಫ್ ನಿರೂಪಿಸಿದರು. ಮಲ್ಲಿಕಾರ್ಜುನ ಪೂಜೇರ ವಂದಿಸಿದರು. ಜೆಕಬ್ ಶಿವಾನಂದ, ಮನೋರಮಾ ಪ್ರಾರ್ಥಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts