More

    ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಿ

    ರಾಯಚೂರು: ಪೊಲೀಸ್ ಇಲಾಖೆ ಅಕಾರಿಗಳು ಸೇರಿದಂತೆ ಇನ್ನಿತರ ಇಲಾಖೆ ಅಕಾರಿಗಳು ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಿದಾಗ ಸೇವೆಗೆ ಸಾರ್ಥಕತೆ ಬರುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಕಾರದ ಅಧ್ಯಕ್ಷ ಮಾರುತಿ ಬಗಾಡೆ ಹೇಳಿದರು.
    ಸ್ಥಳಿಯ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಸೇವೆಯನ್ನು ಇತರರು ಸ್ಮರಿಸಿಕೊಂಡಾಗ ಮಾತ್ರ ಸೇವೆಗೆ ಅರ್ಥ ಮತ್ತು ಸಾರ್ಥಕತೆ ದೊರೆಯುತ್ತದೆ ಎಂದರು.
    ಬದುಕಿರುವಾಗ ಮಾಡಿದ ಕಾರ್ಯಗಳು ಮರಣದ ನಂತರ ನಮ್ಮ ಹೆಸರು ಉಳಿಯುವಂತೆ ಮಾಡುತ್ತವೆ. ಜತೆಗೆ ಮತ್ತೊಬ್ಬರಿಗೆ ಪ್ರೇರಣೆ ನೀಡುತ್ತವೆ. ಹುತಾತ್ಮರಾದ ಪೊಲೀಸರ ಕುಟುಂಬಗಳು ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದು, ಇಲಾಖೆಯಿಂದ ಹುತಾತ್ಮರ ಕುಟುಂಬದ ಸದಸ್ಯರೊಂದಿಗೆ ಸಭೆ ನಡೆಸಿ ಅವರ ಕುಂದುಕೊರತೆ ಆಗಲಿಸಿ ಪರಿಹಾರ ಕಲ್ಪಿಸುವ ಕೆಲಸವಾಗಬೇಕು.
    ಪೊಲೀಸ್ ಹುತಾತ್ಮ ದಿನಾಚರಣೆಗೆ ಶಾಲಾ ಮಕ್ಕಳನ್ನು ಕರೆಸುವುದರಿಂದ ಮಕ್ಕಳಿಗೆ ಪ್ರೇರಣೆ ಸಿಗಲಿದೆ. ಕಾರಣ ಇಂತಹ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಆಹ್ವಾನಿಸಬೇಕು ಎಂದು ಮಾರುತಿ ಬಗಾಡೆ ಹೇಳಿದರು.
    ಈ ಸಂದರ್ಭದಲ್ಲಿ ಹುತಾತ್ಮರ ಚಿರಸ್ಮರಣೆ ಸ್ಥಂಭಕ್ಕೆ ಪೊಲೀಸ್ ಅಕಾರಿಗಳು ಹಾಗೂ ವಿವಿಧ ಕ್ಷೇತ್ರದ ಗಣ್ಯರಿಂದ ಪುಷ್ಪ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲಲಿ ಎಸ್ಪಿ ಬಿ.ನಿಖಿಲ್, ಸಹಾಯಕ ಆಯುಕ್ತೆ ಮಹೆಬೂಬಿ ಹಾಗೂ ಇಲಾಖೆ ಅಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts