More

    ಥಾಯ್ಲೆಂಡ್​ನ ಶ್ರೀಮಂತ ವ್ಯಕ್ತಿಯ ಮನೆಯಲ್ಲಿ ಯುವತಿಯರ ಮೂಳೆಗಳು ಪತ್ತೆ: ತನಿಖೆ ವೇಳೆ ಪೊಲೀಸರಿಗೆ ಕಾದಿತ್ತು ಶಾಕ್​

    ಬ್ಯಾಂಕಾಕ್​: ಕೊಲೆ ಆರೋಪಿಯ ಮಗ ಹಾಗೂ ಸರಣಿ ಹಂತಕನ ಮನೆಯ ಹೊಂಡದಲ್ಲಿ ಯುವತಿಯರದ್ದು ಎನ್ನಲಾದ ನೂರಕ್ಕೂ ಹೆಚ್ಚು ಮೂಳೆಗಳು ಪತ್ತೆಯಾದ ಪ್ರಕರಣದಡಿಯಲ್ಲಿ ಹಂತಕನನ್ನು ಥಾಯ್ಲೆಂಡ್​ ಪೊಲೀಸರು ಬಂಧಿಸಿದ್ದಾರೆ.

    ಸಂಪತ್ಭರಿತ ಆಸ್ತಿಯ ಉತ್ತರಾಧಿಕಾರಿಯಾಗಿರುವ ಅಪಿಚೈ ಒಂಗ್ವಿಸ್ಟ್​(40) ಎಂಬ ಆರೋಪಿಯನ್ನು ಬ್ಯಾಂಕಾಕ್​ನಲ್ಲಿ ಬಂಧಿಸಲಾಗಿದೆ. ಹಂತಕನ ಮಾಜಿ ಗೆಳತಿ ವಾರಿಂಥ್ರೋನ್​ ಚೈಯಾಚೆಟ್​(22) ನಾಪತ್ತೆಯಾದ ಆರು ತಿಂಗಳ ಬಳಿಕ ಆಕೆಯ ಮೃತದೇಹವು ಆರೋಪಿ ಮನೆಯ ಹೊಂಡದಲ್ಲಿ ಪತ್ತೆಯಾಗಿದೆ. ಆಕೆ ದೇಹ ಸಂಪೂರ್ಣವಾಗಿ ಕೊಳೆತಿದ್ದರೂ ಬೆನ್ನಹಿಂದೆ ಉಳಿದುಕೊಂಡಿರುವ ಟ್ಯಾಟೋ ಗುರುತನ್ನು ಪತ್ತೆಹಚ್ಚಲಾಗಿದೆ.

    ಇದರ ಸುಳಿವು ಪಡೆದ ಪೊಲೀಸರು ಕೊಳವನ್ನು ಹುಡುಕಾಡಿದಾಗ ಇತರೆ 298 ಮೂಳೆಗಳು ಪತ್ತೆಯಾಗಿವೆ. ಅವುಗಳು ಇನ್ನಿಬ್ಬರು ಸಂತ್ರಸ್ತೆಯರದ್ದು ಎಂದು ಪೊಲೀಸರು ನಂಬಿದ್ದಾರೆ.

    ಒಂಗ್ವಿಸ್ಟ್ ತಂದೆ ಚೆಲೆರ್ಮಚೈ ಒಂಕ್ವಿಸ್ಟ್​ ಒಬ್ಬ ಶ್ರೀಮಂತ ವ್ಯಕ್ತಿಯಾಗಿದ್ದ. ಬ್ಯಾಂಕಾಕ್​ನಲ್ಲಿ ಸ್ವಂತ ಮಾರುಕಟ್ಟೆಯನ್ನು ಹೊಂದಿದ್ದ. 15 ವರ್ಷದ ಹುಡುಗಿನ್ನು ಕೊಲೆ ಮಾಡಿದ ಆರೋಪದಲ್ಲಿ 1983ರಲ್ಲಿ ಜೈಲು ಸೇರಿದ್ದ. ಇದೀಗ ತಂದೆಗಿಂತಲೂ ಕ್ರೂರಿಯಾಗಿರುವ ಒಂಗ್ವಿಸ್ಟ್​, ಯುವತಿಯರನ್ನು ಕೊಂದು ಅವರ ದೇಹಗಳನ್ನು ತನ್ನ ಮನೆಯ ಕೊಳದಲ್ಲಿ ಎಸೆದಿರುವ ಆರೋಪ ಕೇಳಿಬಂದಿದೆ.

    ಕೊಳದ ಅಡಿಯಲ್ಲಿ ಮೃತದೇಹ ಉಳಿದುಕೊಳ್ಳಲು ದೊಡ್ಡ ಗಾತ್ರದ ಕಬ್ಬಿಣದ ವಸ್ತು ಮತ್ತು ಡಂಬಲ್ಸ್ ಅನ್ನು ಸರಪಳಿ ಸಹಾಯದಿಂದ ಕಟ್ಟಿ ಕೊಳದೊಳಕ್ಕೆ ಎಸೆಯಲಾಗಿತ್ತು ಎಂದು ಬ್ಯಾಂಕಾಕ್​ ಪೋಸ್ಟ್​ ವರದಿ ಮಾಡಿದೆ.​

    ಗೆಳತಿ ವಾರಿಂಥ್ರೋನ್​ ಚೈಯಾಚೆಟ್​ ಬಿಟ್ಟು ಹೋಗುತ್ತಾಳೆ ಎಂಬ ಚಿಂತೆಯಲ್ಲಿ ಆಕೆಯನ್ನು ಉಸಿಗಟ್ಟಿಸಿ ಕೊಂದು ಬಳಿಕ ಭಾರದ ವಸ್ತುವನ್ನು ಕಟ್ಟಿ ಕೊಳಕ್ಕೆ ಎಸೆದಿದ್ದಾನೆ. ಆಕೆಯ ಮೃತದೇಹ ಜನವರಿ 9ರಂದು ಪತ್ತೆಯಾಗಿದೆ. ಬಳಿಕ ಅನುಮಾನಗೊಂಡು ಜನವರಿ 17ರಂದು ಕೊಳವನ್ನು ಹುಡುಕಾಡಿದಾಗ 298 ಮೂಳೆಗಳನ್ನು ಪತ್ತೆಯಾಗಿವೆ. ಈ ಪ್ರಕರಣದಲ್ಲಿ ಸಾಕಷ್ಟು ಮಂದಿ ತೊಡಗಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಪೊಲೀಸ್​ ತನಿಖೆ ನಡೆಯುತ್ತಿದೆ.

    ಪತ್ತೆಯಾಗಿರುವ 298 ಮೂಳೆಗಳು ಎಷ್ಟು ವ್ಯಕ್ತಿಗಳದ್ದು ಎಂಬುದು ಇನ್ನು ನಿಖರವಾಗಿಲ್ಲ ಎಂದು ಬ್ಯಾಂಕಾಕ್​ ಪೊಲೀಸರು ತಿಳಿಸಿದ್ದು, ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts