More

    ‘ಕಾಶ್ಮೀರಿ ಕಣಿವೆಯ ಯುವಕರನ್ನು ತರಬೇತಿಗಾಗಿ ಪಾಕ್​ಗೆ ಕಳಿಸುತ್ತಿದ್ದರು ಪ್ರತ್ಯೇಕತಾವಾದಿಗಳು’

    ಶ್ರೀನಗರ: ಕುಲ್​ಗಾಂವ್​ದ ಮೂವರ ವಿರುದ್ಧ ಇಂದು ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಜಮ್ಮುವಿನ ವಿಶೇಷ ಎನ್‌ಐಎ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದೆ.

    ಮುನೀಬ್ ಹಮೀದ್ ಭಟ್, ಜುನೈದ್ ಅಹ್ಮದ್ ಮಟ್ಟೂ ಮತ್ತು ಉಮರ್ ರಶೀದ್ ವಾನಿ ಈ ಮೂವರೂ ಲಷ್ಕರ್ ಎ ತೊಯ್ಬಾ ಸಂಘಟನೆಗೆ ಯುವಕರನ್ನು ಸೆಳೆದು, ತರಬೇತಿ ಕೊಡಿಸಲು ಸಹಾಯ ಮಾಡುತ್ತಿದ್ದರು ಎಂಬ ಆರೋಪದಡಿ ಈ ಚಾರ್ಜ್​ಶೀಟ್ ಸಲ್ಲಿಕೆಯಾಗಿದೆ.

    2017ರಲ್ಲಿ ಜಮ್ಮು-ಕಾಶ್ಮೀರದ ಪೊಲೀಸರು ಇವರ ವಿರುದ್ಧ ಮೊದಲು ಪ್ರಕರಣ ದಾಖಲಿಸಿದ್ದರು. ಕಾಶ್ಮೀರ ಕಣಿವೆಯ ಯುವಕರನ್ನು ಸೆಳೆದು ಉಗ್ರ ಸಂಘಟನೆಗೆ ಸೇರಿಸುವುದಲ್ಲದೆ, ಅವರನ್ನು ತರಬೇತಿಗಾಗಿ ಪಾಕಿಸ್ತಾನಕ್ಕೆ ಕಳಿಸುವ ವ್ಯವಸ್ಥೆಯನ್ನೂ ಇವರು ಮಾಡುತ್ತಿದ್ದರು ಎಂಬ ಆರೋಪದಡಿ ಅಂದು ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಹತ್ರಾಸ್​ನಲ್ಲಿ ಮಾಧ್ಯಮದವರಿಗೂ ತ್ರಾಸು.. ಪತ್ರಕರ್ತರಿಗೆ ಪ್ರವೇಶ ನಿಷೇಧ!

    2018ರಲ್ಲಿ ಕೇಸ್​ ದಾಖಲಿಸಿಕೊಂಡು, ತನಿಖೆ ಪ್ರಾರಂಭಿಸಿದ್ದ ಎನ್​ಐಎ ಇದೀಗ ಚಾರ್ಜ್​ಶೀಟ್ ಸಲ್ಲಿಸಿದೆ. ಜಮ್ಮುಕಾಶ್ಮೀರದಲ್ಲಿರುವ ಹಲವು ಪ್ರತ್ಯೇಕತಾವಾದಿಗಳೇ ಯುವಕರನ್ನು ಉಗ್ರಸಂಘಟನೆಗೆ ಸೇರಿಸಿ, ಅವರಿಗೆ ಅಧಿಕೃತ ದಾಖಲೆಗಳನ್ನು ನೀಡಿದ ಪಾಕಿಸ್ತಾನಕ್ಕೆ ಕಳಿಸುತ್ತಿದ್ದಾರೆ. ಹಾಗೇ ಉಗ್ರ ಸಂಘಟನೆಗೆ ಸೇರಲ್ಪಟ್ಟ ಯುವಕರು ಪಾಕಿಸ್ತಾನದಲ್ಲಿ 5-15ದಿನಗಳ ಕಾಲ ತರಬೇತಿ ಪಡೆದು ವಾಪಸ್​ ಬರುತ್ತಾರೆ. ನಂತರ ಅಂಥವರನ್ನು ಇಲ್ಲಿ ಸ್ಲೀಪರ್​ ಸೆಲ್​ಗಳಂತೆ ಬಳಸಿಕೊಳ್ಳಲಾಗುತ್ತಿದೆ ಎಂದು ಎನ್​ಐಎ ತಿಳಿಸಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ನಡೆದ ಮಹಿಳೆಯರ ಡಬಲ್ ಮರ್ಡರ್ ಹಿಂದಿದೆ ಡಬಲ್ ಪ್ರೇಮ್ ಕಹಾನಿ..!

    ಎನ್​ಐಎ ಚಾರ್ಜ್​ಶೀಟ್ ಸಲ್ಲಿಸಿದವರಲ್ಲಿ ಜುನೈದ್ ಅಹ್ಮದ್ ಮಟ್ಟೂ ಮತ್ತು ಉಮರ್ ರಶೀದ್ ವಾನಿ ಈಗಾಗಲೇ ಪ್ರತ್ಯೇಕ ಎನ್​ಕೌಂಟರ್​​ನಲ್ಲಿ ಬಲಿಯಾಗಿದ್ದಾರೆ.  ಸದ್ಯ ಕಾಶ್ಮೀರಿ ಕಣಿವೆಯಲ್ಲಿ ಉಗ್ರರ ಮಟ್ಟ ಕಡಿಮೆ ಮಾಡಲು ತನಿಖಾ ದಳ, ರಕ್ಷಣಾ ಪಡೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿವೆ. (ಏಜೆನ್ಸೀಸ್​)

    ‘ಯುಪಿ ಪೊಲೀಸರು ನಮ್ಮ ರವಿಕೆಯನ್ನು ಎಳೆದು, ಅನುಚಿತವಾಗಿ ಮುಟ್ಟಿದರು’-ಟಿಎಂಸಿ ನಾಯಕಿಯರ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts