More

    ಸಂವೇದನಾಶೀಲ ಸಾಹಿತ್ಯಕ್ಕೆ ಬೇಕು ಕಸಾಪ ಪ್ರೋತ್ಸಾಹ

    ಚಳ್ಳಕೆರೆ: ಮಹಿಳೆಯರ ಸಂವೇದನಾಶೀಲ ಸಾಹಿತ್ಯವನ್ನು ಪ್ರೋತ್ಸಾಹಿಸುವ ಕೆಲಸ ಕನ್ನಡ ಸಾಹಿತ್ಯ ಪರಿಷತ್ ನಿರ್ವಹಿಸಬೇಕಿದೆ ಎಂದು ಕವಯಿತ್ರಿ ಶಿವಗಂಗಮ್ಮ ಚಿತ್ತಯ್ಯ ಹೇಳಿದರು.

    ನಗರದ ಸರ್ಕಾರಿ ನೌಕರರ ಭವನದಲ್ಲಿ ಕನ್ನಡ ರಕ್ಷಣಾ ವೇದಿಕೆ, ಸಾಂಸ್ಕೃತಿಕ ವೇದಿಕೆ, ಜಿಲ್ಲಾ ಚಿನ್ಮುಲಾದ್ರಿ ಸಾಹಿತ್ಯ, ಸಾಂಸ್ಕೃತಿಕ ವೇದಿಕೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಸ್ತ್ರೀಯರ ಸ್ಥಾನಮಾನ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಸಾಹಿತ್ಯ ಪರಿಷತ್ತಿನಲ್ಲಿ ಮುಕ್ತವಾಗಿ ಸದಸ್ಯತ್ವ ಪಡೆದುಕೊಳ್ಳಲು ಅವಕಾಶ ಕಲ್ಪಿಸಬೇಕು. ಸಮಾನತೆಯ ದೃಷ್ಟಿಯಿಂದ ಸ್ಥಳೀಯ ಮಹಿಳಾ ಬರಹಗಾರರನ್ನು ಮುಖ್ಯವಾಹಿನಿಗೆ ತರುವ ಕೆಲಸ ಕನ್ನಡ ಸಾಹಿತ್ಯ ಪರಿಷತ್ತು ನಿರ್ವಹಿಸಬೇಕು ಎಂದರು.

    ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲೂಕು ಅಧ್ಯಕ್ಷೆ ಶಬ್ರಿನಾ ಮಹಮ್ಮದ್‌ಅಲಿ ಮಾತನಾಡಿ, ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯದಲ್ಲಿ ಮಹಿಳೆಯರ ಸಾಹಿತ್ಯ ಸೇವೆ ಕಾಣುತ್ತೇವೆ. ಆದರೆ, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಸಾಹಿತ್ಯ ಅಭಿರುಚಿಗೆ ಅವಕಾಶಗಳು ದಕ್ಕುತ್ತಿಲ್ಲ. ಭಾಷಾ ಸೇವೆ ಮಾಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ಮಹಿಳೆಯ ಸಾಹಿತ್ಯ ಅಭಿರುಚಿಗೆ ವೇದಿಕೆ ಆಗಬೇಕು ಎಂದು ಹೇಳಿದರು.

    ಚಿನ್ಮ್ಮೂಲಾದ್ರಿ ವೇದಿಕೆ ಜಿಲ್ಲಾಧ್ಯಕ್ಷೆ ದಯಾವತಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಹಿತ್ಯ ಅಭಿರುಚಿ ಉಳ್ಳವರು ಬರಬೇಕು. ಗ್ರಾಮೀಣ ಸಾಹಿತ್ಯಾಸಕ್ತರನ್ನು ಗುರುತಿಸುವ ಕೆಲಸ ಆಗಬೇಕು. ಈ ಬಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಯಲ್ಲಿ ಗಡಿ ಭಾಗದ ಕನ್ನಡ ಪರ ಹೋರಾಟಗಾರರಿಗೆ ಅವಕಾಶವಾಗಬೇಕೆಂದು ಅಭಿಪ್ರಾಯಪಟ್ಟರು.

    ಕವಿ ಕೊರ‌್ಲಕುಂಟೆ ತಿಪ್ಪೇಸ್ವಾಮಿ, ಸಾಮಾಜಿಕ ಹೋರಾಟಗಾರ ಯಾದಲಗಟ್ಟೆ ಜಗನ್ನಾಥ, ಕೆ.ಪಿ.ಮಂಜುಳಾ, ಪರಿಸರಪ್ರೇಮಿ ಎಚ್.ಕೆ.ಸ್ವಾಮಿ, ಕಲಾವಿದ ಗೊಂದಾಳಪ್ಪ, ಹಾಸ್ಯಕವಿ ಜಗನ್ನಾಥ, ಪಗಡಲಬಂಡೆ ನಾಗೇಂದ್ರಪ್ಪ, ಎ.ಚನ್ನಕೇಶವ, ಎಚ್.ಲಂಕಪ್ಪ, ವಿ.ಬೆಟ್ಟಪ್ಪ, ಎಸ್.ಜೆ.ಹಿಮಂತರಾಜ, ವಿನಯ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts