More

    ಆಟೋ, ಮೆಟಲ್ ಷೇರುಗಳ ಕಾರಣ 162 ಅಂಶ ಕುಸಿತದೊಂದಿಗೆ ದಿನದ ವಹಿವಾಟು ಮುಗಿಸಿದ ಸೆನ್ಸೆಕ್ಸ್

    ಮುಂಬೈ: ಕೊರೊನಾ ವೈರಸ್​ ಸೋಂಕಿನ ಗಂಭೀರತೆ ಮತ್ತು ಅದರ ಪರಿಣಾಮ ಆರ್ಥಿಕತೆ ಮೇಲೆ ಹೇಗಾಗುತ್ತಿದೆ ಎಂಬುದನ್ನು ಗಮನಿಸುತ್ತಿರುವ ಹೂಡಿಕೆದಾರರು ಮತ್ತು ಆಟೋ, ಮೆಟಲ್ ಸಂಬಂಧಿತ ಷೇರುಗಳು ಕುಸಿತ ಕಂಡ ಕಾರಣ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​(ಬಿಎಸ್​ಇ)ನ ಸೂಚ್ಯಂಕ ಸೆನ್ಸೆಕ್ಸ್ 162 ಅಂಶ ಕುಸಿತದೊಂದಿಗೆ ದಿನದ ವಹಿವಾಟು ಮುಗಿಸಿದೆ.

    ಸೋಮವಾರ ಬೆಳಗ್ಗೆ ದಿನದ ವಹಿವಾಟನ್ನು ಕುಸಿತದೊಂದಿಗೇ ಆರಂಭಿಸಿದ್ದ ಸೆನ್ಸೆಕ್ಸ್​ ದಿನದ ಅಂತ್ಯಕ್ಕೆ 162.23 ಅಂಶ (0.39%) ಕುಸಿತ ದಾಖಲಿಸಿದ್ದು, 40,979.62ರಲ್ಲಿ ವಹಿವಾಟು ಮುಗಿಸಿದೆ. ಇಂಟ್ರಾ ಡೇ ವಹಿವಾಟಿನಲ್ಲಿ ಕನಿಷ್ಠ ಮಟ್ಟ 40,798.98ರಲ್ಲೂ ವಹಿವಾಟು ನಡೆಸಿತ್ತು. ಇದೇ ರೀತಿ, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ ದಿನದ ವಹಿವಾಟಿನ ಅಂತ್ಯಕ್ಕೆ 66.85 ಅಂಶ ಕುಸಿತದೊಂದಿಗೆ 12,031.50ರಲ್ಲಿ ವಹಿವಾಟು ಮುಗಿಸಿದೆ.

    ಸೆನ್ಸೆಕ್ಸ್ ಪಟ್ಟಿಯಲ್ಲಿ ಮಹೀಂದ್ರಾ ಆ್ಯಂಡ್ ಮಹಿಂದ್ರಾ ಷೇರು ಮೌಲ್ಯ ಶೇಕಡ 7 ಕುಸಿತ ಕಂಡು ಭಾರಿ ನಷ್ಟ ಅನುಭವಿಸಿತು. ಇದರ ಬೆನ್ನಿಗೆ ಟಾಟಾ ಸ್ಟೀಲ್​, ಒಎನ್​ಜಿಸಿ, ಸನ್​ಫಾರ್ಮಾ, ಹೀರೋ ಮೋಟೋಕಾರ್ಪ್​, ಪವರ್​ಗ್ರಿಡ್​, ಎನ್​ಟಿಪಿಸಿ ಷೇರುಗಳು ಕೂಡ ನಷ್ಟ ಅನುಭವಿಸಿವೆ. ಇನ್ನೊಂದಡೆ, ಬಜಾಜ್ ಫೈನಾನಸ್​, ಕೊಟಾಕ್ ಬ್ಯಾಂಕ್, ಟಿಸಿಎಸ್​, ಏಷ್ಯನ್ ಪೇಂಟ್ಸ್​, ಎಚ್​ಡಿಎಫ್​ಸಿ, ಎಚ್​ಯುಎಲ್​, ಆರ್​ಐಎಲ್​ ಲಾಭದೊಂದಿಗೆ ವಹಿವಾಟು ಮುಗಿಸಿವೆ.

    ಕರೆನ್ಸಿ ಮಾರುಕಟ್ಟೆಯಲ್ಲಿ ಇಂಟ್ರಾ ಡೇ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಅಮೆರಿಕದ ಡಾಲರ್ ಎದುರು 8 ಪೈಸೆ ಏರಿಕೆಯೊಂದಿಗೆ 71.35ರಲ್ಲಿ ವಹಿವಾಟು ನಡೆಸಿತ್ತು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts