More

    ಮತ್ತೆ ಸಾರ್ವಕಾಲಿಕ ಎತ್ತರಕ್ಕೆ ಸೆನ್ಸೆಕ್ಸ್, ನಿಫ್ಟಿ

    ಮುಂಬೈ: ಜಾಗತಿಕ ಷೇರುಪೇಟೆಯಲ್ಲಿ ಧನಾತ್ಮಕ ಬೆಳವಣಿಗೆ ಮತ್ತು ಸ್ಥಿರವಾಗಿ ವಿದೇಶಿ ಹಣದ ಒಳಹರಿವಿನ ಕಾರಣಕ್ಕೆ ಭಾರತೀಯ ಷೇರುಪೇಟೆಯಲ್ಲೂ ಏರಿಕೆ ದಾಖಲಾಗಿದೆ. ಬುಧವಾರ ಆರಂಭಿಕ ವಹಿವಾಟಿನ ವೇಳೆ ಬಿಎಸ್​ಇ ಸೆನ್ಸೆಕ್ಸ್ 300ಕ್ಕೂ ಹೆಚ್ಚು ಅಂಶ ಏರಿಕೆ ದಾಖಲಾದರೆ, ನಿಫ್ಟಿ 13,100ರ ಗಡಿ ದಾಟಿ ಮತ್ತೆ ಸಾರ್ವಕಾಲಿಕ ಎತ್ತರಕ್ಕೆ ಮುನ್ನಡೆದಿದೆ.

    ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠ 44,825.37 ಅಂಶ ತಲುಪಿದ್ದು, ಬಳಿಕ 44,765.78 ಅಂಶದಲ್ಲಿ ವಹಿವಾಟು ಮುಂದುವರಿಸಿತ್ತು. ಇದೇ ರೀತಿ ಎನ್ಎಸ್​ಇ ನಿಫ್ಟಿ ಇಂಟ್ರಾ ಡೇ ವಹಿವಾಟಿನಲ್ಲಿ 13,145.85 ಅಂಶ ತಲುಪಿ, ಬಳಿಕ 13, 131.40 ಅಂಶದಲ್ಲಿ ವಹಿವಾಟು ಮುಂದುವರಿಸಿದೆ. ಎಚ್​ಡಿಎಫ್​ಸಿ, ರಿಯಲನ್ಸ್​ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್​ ಷೇರುಗಳು ಲಾಭಾಂಶದಲ್ಲಿ ವಹಿವಾಟು ನಡೆಸುತ್ತಿರುವ ಕಾರಣ ಸೆನ್ಸೆಕ್ಸ್ ಮೇಲೇರಿದೆ.

    ಇದನ್ನೂ ಓದಿ: ನೋವನ್ನೂ ಸಕಾರಾತ್ಮಕ ಪರಿವರ್ತನೆಯ ಪಥವಾಗಿಸಿದರೆ…

    ಸೆನ್ಸೆಕ್ಸ್ ಪಟ್ಟಿಯಲ್ಲಿ ಒಎನ್​ಜಿಸಿ ಗರಿಷ್ಠ ಶೇಕಡ 5 ಏರಿಕೆ ದಾಖಲಿಸಿದರೆ, ಎಸ್​ಬಿಐ, ಐಸಿಐಸಿಐ ಬ್ಯಾಂಕ್​, ಬಜಾಜ್ ಆಟೋ, ಎಚ್​ಡಿಎಫ್​ಸಿ, ರಿಲಯನ್ಸ್ ಇಂಡಸ್ಟ್ರೀಸ್, ಏಕ್ಸಿಸ್ ಬ್ಯಾಂಕ್ ಷೇರುಗಳು ಲಾಭದಲ್ಲಿ ವಹಿವಾಟು ನಡೆಸಿವೆ. ನಿನ್ನೆ ಸೆನ್ಸೆಕ್ಸ್​ 44,523.02ರಲ್ಲೂ ನಿಫ್ಟಿ 13,055.15 ರಲ್ಲೂ ವಹಿವಾಟು ಮುಗಿಸಿದ್ದವು. (ಏಜೆನ್ಸೀಸ್)

    ಅಧಿಕಾರ ಇಲ್ದೇ ಇದ್ರೂ ಪಕ್ಷದ ಮೇಲೆ ಹಿಡಿತ ಇಟ್ಟುಕೊಂಡಿದ್ರು ಪಟೇಲ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts