More

    ಜಾಗತಿಕ ಮಟ್ಟದಲ್ಲಿನ ಸೆಲ್​ಆಫ್​ ಪ್ರಭಾವ ಭಾರತೀಯ ಪೇಟೆ ಮೇಲೂ ಆಗಿದ್ದು, ವೊಲಟೈಲ್ ಆಗಿ ವಹಿವಾಟು ಶುರು

    ಮುಂಬೈ: ಕೊರೊನಾ ವೈರಸ್ ಆತಂಕ ಜಾಗತಿಕ ಅರ್ಥವ್ಯವಸ್ಥೆಯನ್ನು ಕಾಡಿದ್ದು, ಹೆಚ್ಚಿನ ಪ್ರಮಾಣದ ಸೆಲ್​ಆಫ್ ನಡೆಯುತ್ತಿದ್ದು, ಭಾರತೀಯ ಷೇರುಪೇಟೆ ವಹಿವಾಟು ಕೂಡ ವೊಲಟೈಲ್ ಆಗಿಯೇ ಮಂಗಳವಾರ ಶುರುವಾಗಿದೆ.

    ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​(ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ ವಹಿವಾಟು ಶುರುವಾದಾಗ 150 ಅಂಶ ಏರಿಕೆ ದಾಖಲಿಸಿದ್ದು, ನಂತರದಲ್ಲಿ ಒಟ್ಟಾರೆ ಇಳಿಕೆಯಾಗಿದ್ದು, 34.62 ಅಂಶ (0.09%) ಕುಸಿತದೊಂದಿಗೆ 40,328.61ರಲ್ಲಿ ವಹಿವಾಟು ಶುರುಮಾಡಿಕೊಂಡಿದೆ. ಇದೇ ರೀತಿ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ50 ಕೂಡ 17.15 ಅಂಶ (0.14%) ಇಳಿದು 11,812.25ರಲ್ಲಿ ವಹಿವಾಟು ಆರಂಭಿಸಿದೆ.

    ಸೆನ್ಸೆಕ್ಸ್​ ಪಟ್ಟಿಯಲ್ಲಿ ಎಚ್​ಸಿಎಲ್​ ಟೆಕ್​, ಸನ್​ ಫಾರ್ಮಾ, ಟೈಟಾನ್​, ಟೆಕ್​ ಮಹೀಂದ್ರಾ ಮತ್ತು ಬಜಾಜ್​ ಆಟೋ ಷೇರುಗಳು ನಷ್ಟವನ್ನು ಹೊಂದಿವೆ. ಇದೇ ವೇಳೆ, ಎನ್​ಟಿಪಿಸಿ, ಒಎನ್​ಜಿಸಿ, ಎಚ್​ಯುಎಲ್​, ಏಷ್ಯನ್ ಪೇಂಟ್ಸ್​, ಟಾಟಾ ಸ್ಟೀಲ್​ ಷೇರುಗಳು ಲಾಭ ಗಳಿಕೆಯ ಹಾದಿಯಲ್ಲಿವೆ. ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್​ 806.89 ಅಂಶ ಕುಸಿದು 40,363.23ರಲ್ಲಿ ವಹಿವಾಟು ಮುಗಿಸಿದೆ. ನಿಫ್ಟಿ 251.45 ಅಂಶ ಕುಸಿದು 11,829.40ಯಲ್ಲಿ ವಹಿವಾಟು ಕೊನೆಗೊಳಿಸಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts