More

    ಸಾರ್ವಕಾಲಿಕ ಎತ್ತರಕ್ಕೇರಿದ ಸೆನ್ಸೆಕ್ಸ್, ನಿಫ್ಟಿ

    ಮುಂಬೈ: ಭಾರತದ ಷೇರುಪೇಟೆಯಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ ಸೋಮವಾರ ಆರಂಭಿಕ ವಹಿವಾಟಿನಲ್ಲಿ ಸಾರ್ವಕಾಲಿಕ ಎತ್ತರಕ್ಕೇರಿ ಹೊಸ ದಾಖಲೆ ಬರೆದವು. ಸೆನ್ಸೆಕ್ಸ್ 150ಕ್ಕೂ ಹೆಚ್ಚು ಅಂಶ ಏರಿದರೆ, ನಿಫ್ಟಿ 13,300ರ ಮಟ್ಟ ದಾಟಿತು.

    ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಗರಿಷ್ಠ 45, 245.30 ಅಂಶಕ್ಕೇರಿದ್ದು, ಬಳಿಕ 45,230.33 ಅಂಶದಲ್ಲಿ ವಹಿವಾಟು ಮುಂದುವರಿಸಿದೆ. ಇದೇ ರೀತಿ ನಿಫ್ಟಿ 48.35 ಅಂಶ ಏರಿಕೆಯಾಗಿ 13,306.90 ಅಂಶ ತಲುಪಿ ಬಳಿಕ 13,310.85 ಅಂಶದಲ್ಲಿ ವಹಿವಾಟು ಮುಂದುವರಿಸಿದೆ. ಸೆನ್ಸೆಕ್ಸ್ ಪಟ್ಟಿಯಲ್ಲಿ ಒಎನ್​ಜಿಸಿ ಟಾಪ್​ ಗೇನರ್ ಆಗಿದ್ದು ಶೇಕಡ 2 ಏರಿಕೆ ದಾಖಲಿಸಿತ್ತು. ಐಟಿಸಿ, ಐಸಿಐಸಿಐ ಬ್ಯಾಂಕ್, ಭಾರ್ತಿ ಏರ್​​ಟೆಲ್​, ಎಚ್​ಯುಎಲ್​, ಅಲ್ಟ್ರಾಟೆಕ್​ ಸಿಮೆಂಟ್ ಮತ್ತು ಏಷ್ಯನ್ ಪೇಂಟ್ಸ್ ಷೇರುಗಳು ಲಾಭಾಂಶದಲ್ಲಿ ವಹಿವಾಟು ಮುಂದುವರಿಸಿವೆ. ಎಚ್​ಡಿಎಫ್​ಸಿ ಬ್ಯಾಂಕ್​, ಟೈಟಾನ್, ಕೊಟಾಕ್ ಬ್ಯಾಂಕ್, ಎಚ್​ಸಿಎಲ್ ಟೆಕ್​ ಮತ್ತು ಟಿಸಿಎಸ್ ಷೇರುಗಳು ನಷ್ಟದೊಂದಿಗೆ ವಹಿವಾಟು ನಡೆಸಿವೆ.

    ಇದನ್ನೂ ಓದಿ: ಈ ರಾಶಿಯವರು ‘ಅವರ’ ಜತೆ ಮಾತ್ರ ಮಾತಿನ ಚಕಮಕಿಯಲ್ಲಿ ಮಾತ್ರ ತೊಡಗಬೇಡಿ..

    ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 446.90 ಅಂಶ ಏರಿಕೆಯೊಂದಿಗೆ 45,079.55 ಅಂಶದಲ್ಲಿ ದಿನದ ವಹಿವಾಟು ಮುಗಿಸಿತ್ತು. ನಿಫ್ಟಿ 124.65 ಅಂಶ ಏರಿಕೆಯೊಂದಿಗೆ 13,258.55 ಅಂಶದಲ್ಲಿ ದಿನದ ವಹಿವಾಟು ಕೊನೆಗೊಳಿಸಿತ್ತು. (ಏಜೆನ್ಸೀಸ್)

    ಇಂದಿನಿಂದ ಸದನ ಕದನ; ಸರ್ಕಾರದ ವಿರುದ್ಧ ಸಮರಕ್ಕೆ ಪ್ರತಿಪಕ್ಷ ಸಜ್ಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts