More

    ಎರಡನೇ ದಿನವೂ ಬ್ಯಾಂಕಿಂಗ್, ಆಟೋ ಕಂಪನಿ ಷೇರುಗಳ ಮೌಲ್ಯ ಕುಸಿತದ ಪರಿಣಾಮ ಸೆನ್ಸೆಕ್ಸ್, ನಿಫ್ಟಿ ಕುಸಿತ

    ಮುಂಬೈ: ಶಾಸನಾನುಸಾರ ಬಾಕಿ ಇರುವ 1.47 ಲಕ್ಷ ಕೋಟಿ ರೂಪಾಯಿ ಪಾವತಿಸುವಂತೆ ಟೆಲಿಕಾಂ ಕಂಪನಿಗಳಿಗೆ ಸುಪ್ರೀಂ ಕೋರ್ಟ್​ ನಿರ್ದೇಶನ ನೀಡಿದ ಪರಿಣಾಮ ಭಾರತೀಯ ಷೇರುಪೇಟೆಯ ಮೇಲಾಗಿದೆ. ಹೀಗಾಗಿ, ಬ್ಯಾಂಕಿಂಗ್ ಷೇರುಗಳು ಭಾರಿ ನಷ್ಟಕ್ಕೆ ಒಳಗಾಗಿದ್ದು, ಸೆನ್ಸೆಕ್ಸ್​, ನಿಫ್ಟಿ ಕೂಡ ಸತತ ಎರಡನೇ ದಿನವೂ ಕುಸಿತಕ್ಕೆ ಒಳಗಾಗುವಂತೆ ಮಾಡಿವೆ.

    ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರದ ವಹಿವಾಟಿನಲ್ಲಿ 202.05 ಅಂಶ ಕುಸಿತ ಕಂಡು 41,257.74ರಲ್ಲಿ ಕೊನೆಗೊಂಡಿದೆ. ಸೆನ್ಸೆಕ್ಸ್ ಪಟ್ಟಿಯಲ್ಲಿನ ಮೂವತ್ತು ಕಂಪನಿಗಳ ಷೇರುಗಳ ಪೈಕಿ 22 ಕಂಪನಿಗಳ ಷೇರುಗಳು ನಷ್ಟಕ್ಕೀಡಾಗಿವೆ. ಇದೇ ವೇಳೆ, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ ಕೂಡ ಬ್ಯಾಂಕಿಂಗ್, ಆಟೋ, ಎಫ್​ಎಂಸಿಜಿ, ಎನರ್ಜಿ ಕಂಪನಿಗಳ ಷೇರುಗಳ ಕುಸಿತದ ಪರಿಣಾಮ 61.20 ಅಂಶ ಕುಸಿದು 12,113.50ರಲ್ಲಿ ವಹಿವಾಟು ಮುಗಿಸಿದೆ.

    ಸೆನ್ಸೆಕ್ಸ್ ಪಟ್ಟಿಯಲ್ಲಿ ಇಂಡಸ್​ಇಂಡ್​ ಬ್ಯಾಂಕ್​ ಶೇಕಡ 4.38 ಅಂಶ ನಷ್ಟ ಅನುಭವಿಸಿ ಟಾಪ್ ಲೂಸರ್ ಅನಿಸಿಕೊಂಡಿತು. ಇದರ ಬೆನ್ನಿಗೆ, ಎಸ್​ಬಿಐ ಷೇರು ಶೇಕಡ 2.41, ಎಚ್​ಡಿಎಫ್​ಸಿ ಬ್ಯಾಂಕು ಷೇರು ಶೇಕಡ 1.77, ಏಕ್ಸಿಸ್ ಬ್ಯಾಂಕ್​ ಷೇರು ಶೇಕಡ 1.5 ನಷ್ಟ ಅನುಭವಿಸಿವೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts