More

    ಸತತ ನಾಲ್ಕನೇ ದಿನವೂ ಸೆನ್ಸೆಕ್ಸ್, ನಿಫ್ಟಿ ಕುಸಿತ: ಟೆಲಿಕಾಂ, ಹಣಕಾಸು ಷೇರುಗಳ ಮೌಲ್ಯದಲ್ಲಿ ನಷ್ಟ ಕಾರಣ

    ಮುಂಬೈ: ಭಾರತೀಯ ಷೇರುಪೇಟೆ ಸೂಚ್ಯಂಕಗಳು ಸತತ ನಾಲ್ಕನೇ ದಿನವೂ ನಷ್ಟದ ಹಾದಿಯಲ್ಲಿ ಸಾಗಿದ್ದು, ಟೆಲಿಕಾಂ ಮತ್ತು ಹಣಕಾಸು ಕಂಪನಿಗಳ ಷೇರುಗಳ ಮೌಲ್ಯ ಕುಸಿತ ಇದಕ್ಕೆ ಕಾರಣ. ಟೆಲಿಕಾಂ ಕಂಪನಿಗಳ ಅಡ್ಜೆಸ್ಟೆಡ್ ಗ್ರಾಸ್ ರೆವೆನ್ಯೂ ಬಾಕಿ ಪಾವತಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದ ಪರಿಣಾಮ ಈ ಕಂಪನಿಗಳ ಷೇರುಗಳ ಮೇಲಾಗಿದೆ.

    ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​(ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರದ ವಹಿವಾಟು ಕೊನೆಗೊಳಿಸಿದ ವೇಳೆ 161.31 ಅಂಶ ಕುಸಿತ ಕಂಡು 40,894.38 ಅಂಶ ತಲುಪಿತ್ತು. ಇದೇ ರೀತಿ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್ಇ) ಸೂಚ್ಯಂಕ ನಿಫ್ಟಿ 53.30 ಅಂಶ ಕುಸಿದು 11,992.50 ತಲುಪಿದೆ.

    ಸೆನ್ಸೆಕ್ಸ್​ ಪಟ್ಟಿಯಲ್ಲಿ ಭಾರ್ತಿ ಏರ್​ಟೆಲ್​ ಷೇರುಗಳ ಮೌಲ್ಯ ಗರಿಷ್ಠ ಶೇಕಡ 3 ಇಳಿಕೆ ಆಗಿದ್ದು, ಇಂಡಸ್​ಇಂಡ್ ಬ್ಯಾಂಕ್​, ಮಾರುತಿ ಸುಜುಕಿ, ಹೀರೋಮೋಟೋ ಕಾರ್ಪ್​, ಟಾಟಾ ಸ್ಟೀಲ್​ ಷೇರುಗಳು ನಷ್ಟ ಅನುಭವಿಸಿವೆ. ಇದೇ ವೇಳೆ, ಎಸ್​ಬಿಐ, ಇನ್​ಫೋಸಿಸ್​, ಪವರ್​ಗ್ರಿಡ್​, ಟೆಕ್ ಮಹೀಂದ್ರಾ, ಟಿಸಿಎಸ್ ಕಂಪನಿಗಳ ಷೇರುಗಳು ಲಾಭಗಳಿಸಿವೆ. ಇಂಟ್ರಾ ಡೇ ವಹಿವಾಟಿನಲ್ಲಿ ಸೆನ್ಸೆಕ್ಸ್​ ಗರಿಷ್ಠ 444 ಅಂಶ ಕುಸಿತ ಕಂಡಿತ್ತು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts