More

    ಸೆನ್ಸೆಕ್ಸ್ 150ಕ್ಕೂ ಹೆಚ್ಚು ಅಂಶ ಕುಸಿತ, ನಿಫ್ಟಿ 51.45 ಅಂಶ ಏರಿಕೆಯೊಂದಿಗೆ ವಹಿವಾಟು ಶುರು

    ಮುಂಬೈ: ಭಾರತೀಯ ಷೇರುಪೇಟೆಯಲ್ಲಿ ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​(ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ 150ಕ್ಕೂ ಹೆಚ್ಚ ಅಂಶ ಕುಸಿತದೊಂದಿಗೆ ಸೋಮವಾರದ ವಹಿವಾಟು ಆರಂಭಿಸಿದೆ. ಕೊರೊನಾ ವೈರಸ್ ಆತಂಕ ಜಾಗತಿಕ ಮಟ್ಟದಲ್ಲಿ ಪೇಟೆಯನ್ನು ಆವರಿಸಿದ್ದು, ಎಲ್ಲ ಪೇಟೆಗಳಲ್ಲೂ ವಹಿವಾಟು ಕಳವಳದೊಂದಿಗೇ ನಡೆಯುತ್ತಿದೆ.

    ಸೆನ್ಸೆಕ್ಸ್​ ಸೋಮವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆ 171.90 ಅಂಶ (0.42%) ಕುಸಿತದೊಂದಿಗೆ 40,969.95ರಲ್ಲಿ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​(ಎನ್​ಎಸ್​ಇ)ನ ಸೂಚ್ಯಂಕ ನಿಫ್ಟಿ 12,046.90 ಅಂಶದಲ್ಲಿ ವಹಿವಾಟು ಶುರುಮಾಡಿಕೊಂಡಿವೆ.

    ಸೆನ್ಸೆಕ್ಸ್​ ಪಟ್ಟಿಯಲ್ಲಿ ಟಾಟಾ ಸ್ಟೀಲ್​ ಷೇರುಗಳು ಆರಂಭಿಕ ವಹಿವಾಟಿನಲ್ಲಿ ಶೇಕಡ 5 ನಷ್ಟ ಅನುಭವಿಸಿದೆ. ಡಿಸೆಂಬರ್ 2019ಕ್ಕೆ ಮುಕ್ತಾಯವಾದ ತ್ರೈಮಾಸಿಕದಲ್ಲಿ ಕಂಪನಿಗೆ 1,228.53 ಕೋಟಿ ರೂಪಾಯಿ ನಿವ್ವಳ ನಷ್ಟ ತೋರಿಸಿದ್ದರ ಪರಿಣಾಮ ಇದು. ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪನಿ ನಿವ್ವಳ ಲಾಭಾಂಶ 1,753.07 ಕೋಟಿ ರೂಪಾಯಿ ತೋರಿಸಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.

    ಈ ಹಿಂದಿನ ವಹಿವಾಟು ಕೊನೆಗೊಂಡಾಗ ಸೆನ್ಸೆಕ್ಸ್​ 164.18 ಅಂಶ ಕುಸಿತ ಕಂಡು 41,141.85ರಲ್ಲೂ, ನಿಫ್ಟಿ 39.60 ಅಂಶ ಕುಸಿತದೊಂದಿಗೆ 12,098.35ರಲ್ಲೂ ವಹಿವಾಟು ಕೊನೆಗೊಳಿಸಿದ್ದವು.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts