More

    44 ಸಾವಿರ ದಾಟಿದ ಸೆನ್ಸೆಕ್ಸ್

    ಮುಂಬೈ: ಸೆನ್ಸೆಕ್ಸ್ 227.34 (ಶೇ. 52) ಅಂಶ ಏರಿಕೆ ಆಗಿದ್ದು, ಮುಂಬೈ ಷೇರುಪೇಟೆ ಸೂಚ್ಯಂಕ 44 ಸಾವಿರ ಗಡಿ ದಾಟಿ 44,180.05ಕ್ಕೆ ಬುಧವಾರದ ವಹಿವಾಟು ಅಂತ್ಯವಾಗಿದೆ. ನಿಫ್ಟಿ 64.05 (ಶೇ.50) ಅಂಕ ಹೆಚ್ಚಳವಾಗಿದ್ದು, 12,938.25ಕ್ಕೆ ವಹಿವಾಟು ಮುಗಿದಿದೆ.

    ಎಂಆಂಡ್​ಎಂ ಕಂಪನಿ ಷೇರು ಮೌಲ್ಯ ಶೇ. 10.76 ಏರಿಕೆ ಕಂಡಿದೆ. ಉಳಿದಂತೆ ಎಲ್​ಆಂಡ್​ಟಿ, ಇಂಡಸ್​ಇಂಡ್ ಬ್ಯಾಂಕ್, ಬಜಾಜ್ ಫಿನ್​ಸರ್ವ್, ಎಸ್​ಬಿಐ, ಬಜಾಜ್ ಫೈನಾನ್ಸ್, ಐಸಿಐಸಿಐ ಬ್ಯಾಂಕ್ ಕೊಟಕ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್​ಗಳು ಲಾಭಗಳಿಸಿವೆ. ಎಚ್​ಯುಎಲ್, ಐಟಿಸಿ, ಟೈಟಾನ್, ಟಿಸಿಎಸ್, ಭಾರ್ತಿ ಏರ್​ಟೆಲ್, ಇನ್ಪೋಸಿಸ್ ಕಂಪನಿ ಷೇರು ಮೌಲ್ಯ ಇಳಿಕೆಯಾಗಿದೆ.

    ಇದನ್ನೂ ಓದಿ: ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿಗೆ ನ.29ರಂದು ಲಿಖಿತ ಪರೀಕ್ಷೆ

    ಡಾಲರ್ ಎದುರು ರೂಪಾಯಿ ಮೌಲ್ಯ 27 ಪೈಸೆ ವೃದ್ಧಿಸಿದ್ದು, ಒಂದು ಡಾಲರ್​ಗೆ 74.19 ರೂಪಾಯಿಗೆ ವಿದೇಶಿ ವಿನಿಮಯ ವಹಿವಾಟು ಸ್ಥಿರವಾಗಿದೆ. ಬಂಗಾರದ ದರ 357 ರೂ. ತಗ್ಗಿದ್ದು, 10 ಗ್ರಾಂ ಬೆಲೆ 50,610 ರೂಪಾಯಿಗೆ ಇಳಿಕೆಯಾಗಿದೆ. ಬೆಳ್ಳಿ ಬೆಲೆ 532 ರೂಪಾಯಿ ಕಡಿಮೆಯಾಗಿದ್ದು, ಪ್ರತಿ ಕೆ.ಜಿ.ದರ 62,639 ರೂಪಾಯಿಗೆ ತಗ್ಗಿದೆ.

    ಇನ್ಮೇಲೆ ಪ್ರತಿ ತಿಂಗಳೂ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ ಅಮಿತ್​ ಷಾ, ಜೆ.ಪಿ.ನಡ್ಡಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts