More

    ದೇಶೀಯ ಷೇರು ಮಾರುಕಟ್ಟೆ ಆರಂಭಿಕ ವಹಿವಾಟಿನ ಮೊದಲ ಒಂದು ತಾಸಿನಲ್ಲಿಯೇ ಸೆನ್ಸೆಕ್ಸ್​ ಶೇ.10ರಷ್ಟು ಕುಸಿತ; ಮುಂದುವರಿದ ಕರಡಿ ಕುಣಿತ

    ಮುಂಬೈ: ದೇಶೀಯ ಷೇರು ಮಾರುಕಟ್ಟೆ ವ್ಯಾಪಾರ ಸೋಮವಾರ ಬೆಳಗ್ಗೆ 45 ನಿಮಿಷಗಳ ಕಾಲ ಸ್ಥಗಿತಗೊಂಡು ಬಳಿಕ ಮತ್ತೆ ಪ್ರಾರಂಭವಾಯಿತು. ಈ ವೇಳೆ ಇಕ್ವಿಟಿ ಸೂಚ್ಯಂಕದಲ್ಲಿ ಸೆನ್ಸೆಕ್ಸ್​ 3186 ಅಂಶಗಳಿಗೆ ಕುಸಿದರೆ, ನಿಫ್ಟಿ 7,900ರ ಮಟ್ಟಕ್ಕಿಂತಲೂ ಕೆಳಕ್ಕೆ ಹೋಯಿತು.

    ವಹಿವಾಟು ಆರಂಭವಾದ ಮೊದಲ ಒಂದು ಗಂಟೆಯೊಳಗೇ ಸೆನ್ಸೆಕ್ಸ್​ ಶೇ.10 ಅಂಶಗಳಷ್ಟು ಕುಸಿದು ಕನಿಷ್ಠ ಪರಿಧಿಯ ಮಿತಿಯನ್ನು ದಾಟಿತು. ಈ ವೇಳೆ ವಹಿವಾಟನ್ನು 45 ನಿಮಿಷಗಳ ಕಾಲ ಸ್ಥಗಿತಗೊಳಿಸಲಾಗಿತ್ತು.

    ಷೇರುಮಾರುಕಟ್ಟೆಯಲ್ಲಿ ಸೆನ್ಸೆಕ್ಸ್​ ಮಧ್ಯಾಹ್ನ 1ಗಂಟೆಯೊಳಗೇ ಶೇ.10ರಷ್ಟು ಕುಸಿತವಾದಾಗ, ಅದನ್ನು ನಿಯಂತ್ರಣ ಮಾಡುವ ದೃಷ್ಟಿಯಿಂದ ಹೀಗೆ 45 ನಿಮಿಷಗಳ ಕಾಲ ಸ್ಥಗಿತಗೊಳಿಸಲಾಗುತ್ತದೆ.

    ವಹಿವಾಟು ಮರು ಆರಂಭವಾದಾಗಲೂ ಸಹ ಬಾಂಬೆ ಸ್ಟಾಕ್​ ಎಕ್ಸ್​​ಚೇಂಜ್​​ನಲ್ಲಿ 3,185.84 ಅಂಶಗಳ ವಹಿವಾಟು ನಡೆಸುತ್ತಿದ್ದ ಸೆನ್ಸೆಕ್ಸ್​ ಶೇ.10.65ಕ್ಕೆ ಇಳಿಕೆಯಾಗಿ 26,730.12 ಕ್ಕೆ ತಲುಪಿತು. ಹಾಗೇ ನ್ಯಾಷನಲ್ ಸ್ಟಾಕ್​ ಎಕ್ಸ್​ಚೇಂಜ್​ನಲ್ಲಿ ನಿಫ್ಟಿ 923.95 ಅಂಶಗಳು(ಶೇ10.65) ಕುಸಿತವಾಗಿ 7,821.50 ಕ್ಕೆ ತಲುಪಿದೆ.

    ಸೆನ್ಸೆಕ್ಸ್‌ನಲ್ಲಿ ಆಕ್ಸಿಸ್ ಬ್ಯಾಂಕ್ ಶೇ.21 ರಷ್ಟು ಕುಸಿತ ಕಂಡಿದ್ದು ತೀವ್ರ ನಷ್ಟದಲ್ಲಿದೆ. ಅದಾದ ಬಳಿಕ ಐಸಿಐಸಿಐ ಬ್ಯಾಂಕ್​, ಬಜಾಜ್​ ಫೈನಾನ್ಸ್​, ಅಲ್ಟ್ರಾ ಟೆಕ್​ ಸಿಮೆಂಟ್​ ಸಂಸ್ಥೆಗಳು ನಷ್ಟದಲ್ಲಿವೆ. (ಏಜೆನ್ಸೀಸ್​)

    ಹೋಟೆಲ್, ಶಾಮಿಯಾನ ಉದ್ಯಮಕ್ಕೆ ಪೆಟ್ಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts