More

    38ನೇ ವರ್ಷಕ್ಕೆ ಕಾಲಿಟ್ಟ ಮಿಥಾಲಿ ರಾಜ್‌ಗೆ ದಿಗ್ಗಜರಿಂದ ಶುಭಾಶಯಗಳ ಮಹಾಪೂರ..!

    ಬೆಂಗಳೂರು: ಭಾರತ ಮಹಿಳಾ ತಂಡ ಮಾಜಿ ನಾಯಕಿ ಮಿಥಾಲಿ ರಾಜ್ ಗುರುವಾರ 38ನೇ ವರ್ಷಕ್ಕೆ ಕಾಲಿಟ್ಟರು. ಭಾರತ ಅಲ್ಲದೆ, ವಿಶ್ವದೆಲ್ಲೆಡೆಯಿಂದ ಹಿರಿಯ ಆಟಗಾರ್ತಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್‌ಗಳಿಸಿರುವ ಭಾರತೀಯ ಬ್ಯಾಟ್ಸ್‌ವುಮೆನ್ ಎನಿಸಿಕೊಂಡಿರುವ ಮಿಥಾಲಿ ರಾಜ್ ಹುಟ್ಟುಹಬ್ಬಕ್ಕೆ ದಿಗ್ಗಜ ಸಚಿನ್ ತೆಂಡುಲ್ಕರ್, ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸೇರಿದಂತೆ ಭಾರತದ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಶುಭಾಶಯ ಕೋರಿದ್ದಾರೆ.

    ಹುಟ್ಟುಹಬ್ಬದ ಶುಭಾಶಯಗಳು ಮಿಥಾಲಿ, ಪ್ರತಿಭಾವಂತ ಆಟಗಾರ್ತಿ. ಭಾರತೀಯ ಕ್ರಿಕೆಟ್‌ನಲ್ಲಿ ಅತ್ಯುದ್ಭುತ ಸಾಧನೆ ಮಾಡಿದ್ದೀರಿ. ಹೀಗೆಯೇ ಮುಂದುವರಿಯಲಿ. ನಿಮ್ಮ ಸಾಧನೆ ಬಗ್ಗೆ ಎಲ್ಲರಿಗೂ ಹೆಮ್ಮೆಯಿದೆ ಎಂದು ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಮಿಥಾಲಿ ಎಂದು ಸಚಿನ್ ಟ್ವೀಟ್ ಮೂಲಕ ಶುಭಾಶಯ ತಿಳಿಸಿದ್ದಾರೆ.

    ಹೈದರಾಬಾದ್ ಮೂಲದ ಮಿಥಾಲಿ ರಾಜ್, ತಮ್ಮ 16ನೇ ವಯಸ್ಸಿಗೆ 1999ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಜತೆಗೆ ಐರ್ಲೆಂಡ್ ಎದುರು ಅಜೇಯ 114 ರನ್ ಬಾರಿಸಿದ್ದರು. ಬಳಿಕ ರಾಷ್ಟ್ರೀಯ ತಂಡದಲ್ಲಿ ಕಾಯಂ ಸ್ಥಾನ ಗಿಟ್ಟಿಸಿಕೊಂಡರು. 209 ಏಕದಿನ, 89 ಟಿ20 ಹಾಗೂ 10 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೂ 6,888 ರನ್ ಸಿಡಿಸಿರುವ ಮಿಥಾಲಿ, 200 ಏಕದಿನ ಪಂದ್ಯಗಳನ್ನಾಡಿದ ಮೊದಲ ಮಹಿಳಾ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 7 ಶತಕ, 53 ಅರ್ಧಶತಕ ಬಾರಿಸಿದ್ದಾರೆ. ಜತೆಗೆ 2005 ಹಾಗೂ 2017ರಲ್ಲಿ ಏಕದಿನ ವಿಶ್ವಕಪ್‌ನಲ್ಲಿ ಮಿಥಾಲಿ ರಾಜ್ ಭಾರತದ ನಾಯಕಿಯಾಗಿದ್ದರು.

    https://www.instagram.com/p/CIVMTbHJfmv/?utm_source=ig_web_copy_link

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts