More

    3ನೇ ಟೆಸ್ಟ್​ನಿಂದ ಕೆಎಲ್​ ರಾಹುಲ್​ ಔಟ್​: ಯುವ ಆಟಗಾರರು ಪದಾರ್ಪಣೆ ಸಾಧ್ಯತೆ!

    ರಾಜ್​ಕೋಟ್​: ಮೂರನೇ ಟೆಸ್ಟ್​ ಆರಂಭಕ್ಕೂ ಮುನ್ನವೇ ಟೀಮ್​ ಇಂಡಿಯಾಗೆ ಮತ್ತೊಂದು ಆಘಾತ ಎದುರಾಗಿದೆ. ಮಧ್ಯಮ ಕ್ರಮಾಂಕ ಬ್ಯಾಟರ್​, ಕನ್ನಡಿಗ ಕೆಎಲ್​ ರಾಹುಲ್​ 3ನೇ ಟೆಸ್ಟ್​ನಿಂದ ಹೊರಬಿದ್ದಿದ್ದಾರೆ. ಬದಲಿಗೆ ಮತ್ತೋರ್ವ ಕನ್ನಡಿಗ ದೇವದತ್​ ಪಡಿಕ್ಕಲ್​ ತಂಡ ಸೇರ್ಪಡೆಯಾಗಲಿದ್ದು, ಅವರಿಗೆ ರಾಷ್ಟ್ರೀಯ ತಂಡದ ಚೊಚ್ಚಲ ಕರೆ ಎನಿಸಿದೆ. ಹೈದರಾಬಾದ್​ ಟೆಸ್ಟ್​ ಪಂದ್ಯದ ವೇಳೆ ಗಾಯಗೊಂಡ ಕಾರಣ 2ನೇ ಟೆಸ್ಟ್​ನಿಂದ ಹೊರಗುಳಿದಿದ್ದ ರಾಹುಲ್​ ಮತ್ತು ಜಡೇಜಾ, ಕೊನೇ 3 ಟೆಸ್ಟ್​ಗಳಿಗೆ ತಂಡದಲ್ಲಿ ಸ್ಥಾನ ಪಡೆದಿದ್ದರೂ, ಫಿಟ್ನೆಸ್​ ಪರೀೆಯಲ್ಲಿ ಉತ್ತೀರ್ಣರಾದರಷ್ಟೇ ಮರಳಿ ಕಣಕ್ಕಿಳಿಯಲಿದ್ದಾರೆ ಎಂದು ಬಿಸಿಸಿಐ ಸ್ಪಷ್ಟನೆ ಒದಗಿಸಿತ್ತು. ಬಲತೊಡೆ ಸ್ನಾಯುವಿನ ನೋವಿನಿಂದ ಬಳಲುತ್ತಿರುವ ರಾಹುಲ್​ ಸಂಪೂರ್ಣವಾಗಿ ಫಿಟ್​ ಆಗಲು ಇನ್ನೂ ಒಂದು ವಾರ ಕಾಲ ಸಮಯ ಹಿಡಿಯಲಿದೆ ಎಂದು ಎನ್​ಸಿಎ ವೈದ್ಯಕಿಯ ತಂಡವು ಆಯ್ಕೆದಾರರಿಗೆ ತಿಳಿಸಿದೆ. ರಾಹುಲ್​ ಸದ್ಯ ಎನ್​ಸಿಎಯಲ್ಲಿ ಉಳಿಯಲಿದ್ದಾರೆ. ಆಲ್ರೌಂಡರ್​ ರವೀಂದ್ರ ಜಡೇಜಾ ಫಿಟ್ನೆಸ್​ ಪರೀೆಯಲ್ಲಿ ಉತ್ತೀರ್ಣರಾಗಿದ್ದು, ಮೂರನೇ ಟೆಸ್ಟ್​ ಪಂದ್ಯದ ಆಯ್ಕೆಗೆ ಲಭ್ಯವಿದ್ದಾರೆ.

    ಪ್ರವಾಸಿ ಇಂಗ್ಲೆಂಡ್​ ವಿರುದ್ಧ ಮೊದಲೆರಡು ಟೆಸ್ಟ್ ಪಂದ್ಯದಲ್ಲಿ ರನ್​ಬರ ಎದುರಿಸಿದ ಶ್ರೇಯಸ್​ ಅಯ್ಯರ್​ ಅವರನ್ನು ಅಂತಿಮ ಮೂರು ಪಂದ್ಯಗಳಿಂದ ಕೈ ಬಿಡಲಾಗಿದೆ. ಇನ್ನೂ ಕೆಎಲ್​ ರಾಹುಲ್​ ಸಹ ಮೂರನೇ ಟೆಸ್ಟ್​ ಪಂದ್ಯದಿಂದ ಹೊರಗುಳಿಯಲಿದ್ದು, ಅವರ ಗೈರಿನಲ್ಲಿ ದೇಶೀಯ ಟೂರ್ನಿಯಲ್ಲಿ ರನ್​ಮಳೆ ಹರಿಸಿರುವ ಮುಂಬೈ ಬ್ಯಾಟರ್​ ಸ್ರಾರ್ಜ್​ ಖಾನ್​ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡುವ ಸಾಧ್ಯತೆಗಳಿವೆ. 26 ವರ್ಷದ ಸ್ರಾರ್ಜ್​ ಖಾನ್​ ಸತತ ಮೂರು ದೇಶೀಯ ಕ್ರಿಕೆಟ್​ ಋತುವಿನಲ್ಲಿ ನೂರರ ಸರಾಸರಿಯಲ್ಲಿ ರನ್​ ಕಲೆಹಾಕಿದ್ದಾರೆ. ರಜತ್​ ಪಾಟೀದಾರ್​ ಬಳಿಕ ಸ್ರಾರ್ಜ್​ ಸರಣಿಯಲ್ಲಿ ಟೀಮ್​ ಇಂಡಿಯಾ ಟೆಸ್ಟ್​ ಕ್ಯಾಪ್​ ಪಡೆಯಲಿರುವ 2ನೇ ಆಟಗಾರ ಎನಿಸಲಿದ್ದಾರೆ. ವಿಕೆಟ್​ ಕೀಪಿಂಗ್​ನಲ್ಲಿ ಗಮರ್ನಾಹ ಎನಿಸಿದರೂ, ಬ್ಯಾಟಿಂಗ್​ನಲ್ಲಿ ಗಮನಸೆಳೆಯಲು ವಿಲವಾಗಿರುವ ಕೆಎಸ್​ ಭರತ್​ ಪ್ರದರ್ಶನ ಬಗ್ಗೆ ಟೀಮ್​ ಮ್ಯಾನೇಜ್​ಮೆಂಟ್​ ತೃಪ್ತಿ ಹೊಂದಿಲ್ಲ ಎನ್ನಲಾಗಿದೆ. ಬದಲಿಗೆ 23 ವರ್ಷದ ಧ್ರುವ್​ ಜುರೆಲ್​ ಅವಕಾಶ ಪಡೆಯುವ ನಿರೀೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts