More

    ಹಸಿರು ಶಾಲನ್ನು ದೇಶಕ್ಕೆ ವಿಸ್ತರಿಸಿದ್ದು ಕರ್ನಾಟಕ ; ರಾಕೇಶ್ ಟಿಕಾಯತ್ ಅಭಿನಂದನೆ

    ಬೆಂಗಳೂರು : ಸಮೃದ್ಧಿಯ ಸಂಕೇತ, ಅನ್ನದ ಮೂಲವಾಗಿರುವ ಹಸಿರು ಬಣ್ಣದ ಶಾಲನ್ನು ಇಡೀ ದೇಶಕ್ಕೆ ವಿಸ್ತರಿಸಿದ್ದು ಕರ್ನಾಟಕ ಎಂದು ಹಿರಿಯ ರೈತಮುಖಂಡ, ಭಾರತೀಯ ಕಿಸಾನ್ ಯೂನಿಯನ್ ಮತ್ತು ಸಂಯುಕ್ತ ಕಿಸಾನ್ ಮೋರ್ಚಾದ ನಾಯಕ ರಾಕೇಶ್ ಟಿಕಾಯತ್ ಅಬಿಪ್ರಾಯಿಸಿದ್ದಾರೆ. ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಂಟಿಯಾಗಿ ಆಯೋಜಿಸಿದ್ದ ‘ನಮ್ಮ ಎಂಡಿಎನ್’ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ 88ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ದೇಶದ ಎಲ್ಲ ಹೋರಾಟಗಳಿಗೆ ಪ್ರೇರಣೆ ನೀಡುವ ನೆಲ ಕರ್ನಾಟಕ. ಮೊದಲಿಗೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಬಳಕೆಯಲ್ಲಿದ್ದ ರೈತರ ಹಸಿರು ಶಾಲುಗಳು ಇಂದು ದೇಶಾದ್ಯಂತ ವಿಸ್ತರಿಸಿವೆ. ರೈತ ಹೋರಾಟದ ಪ್ರಮುಖ ಲಾಂಛನವಾಗಿ ಬಳಕೆಯಾಗುತ್ತಿರುವ ಹಸಿರು ಶಾಲನ್ನು ದೇಶಕ್ಕೆ ನೀಡಿದ್ದು ಕರ್ನಾಟಕ. ಕರ್ನಾಟಕದಲ್ಲಿ ಹಸಿರು ಪ್ರಜ್ಞೆಯ್ನನು (ರೈತ ಹೋರಾಟ) ಜಾಗೃತಗೊಳಿಸಿದ ಶ್ರೇಯಸ್ಸು ರೈತಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರಿಗೆ ಸಲ್ಲುತ್ತದೆ. ಆ ಕಾರಣಕ್ಕೆ ದೇಶದ ರೈತ ಸಮುದಾಯದ ಪರವಾಗಿ ನಂಜುಂಡಸ್ವಾಮಿಯವರಿಗೆ ಮತ್ತು ಕರ್ನಾಟಕಕ್ಕೆ ಧನ್ಯವಾದ ಸಲ್ಲಿಸಲು ಬಯಸುತ್ತೇನೆ ಎಂದು ಟಿಕಾಯತ್ ತಿಳಿಸಿದರು.

    ರೈತ ವಿರೋಧಿ ಬಹುರಾಷ್ಟ್ರೀಯ ಕಂಪನಿ ಪಾಲಿಸಿಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದ ನಂಜುಂಡಸ್ವಾಮಿಯವರು ಆ ಕಾಲದಲ್ಲೇ ರೈತರ ಪರವಾಗಿ ಹೋರಾಟ ಆರಂಭಿಸಿದ್ದರು. ಹಿಂದಿ ಭಾಷೆ ಬರದೇ ಇದ್ದರೂ ದಕ್ಷಿಣ ಮತ್ತು ಉತ್ತರ ಭಾರತದ ರೈತ ಮುಖಂಡರನ್ನು ಹಾಗೂ ರೈತ ಸಂಘಟನೆಗಳನ್ನು ಒಗ್ಗೂಡಿಸಿ ರೈತ ಸಮುದಾಯಕ್ಕೆ ಬಲ ತಂದುಕೊಟ್ಟಿದ್ದರು. ಆ ಬಲದ ಪ್ರತಿಲವೇ ದಿಲ್ಲಿಯಲ್ಲಿ 13 ತಿಂಗಳು ನಡೆದ ಹೋರಾಟ ಮತ್ತು ಅದರಿಂದ ಕೇಂದ್ರ ಸರ್ಕಾರ ರೈತವಿರೋಧಿ ಕಾನೂನು ಹಿಂಪಡೆಯಲು ಸಾಧ್ಯವಾಯಿತು. ಆ ರೈತಹೋರಾಟದ ಗೆಲುವಿನ ಶ್ರೇಯಸ್ಸು ಎಂಡಿಎನ್ ಅವರಿಗೆ ಸಲ್ಲಬೇಕು ಎಂದು ಟಿಕಾಯತ್ ಪ್ರೊ.ನಂಜುಂಡಸ್ವಾಮಿಯವರೊಂದಿಗಿನ ಹೋರಾಟದ ಒಡನಾಟವನ್ನು ನೆನಪಿಸಿಕೊಂಡರು.

    ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ದಿಲ್ಲಿಯಲ್ಲಿ ನಡೆಯಲಿರುವ ಹೋರಾಟಕ್ಕೆ ತೆರಳುತ್ತಿದ್ದ ರೈತರನ್ನು ಅಲ್ಲಲ್ಲಿ ಬಂಧಿಸುವ ಕಾರ್ಯ ಕೇಂದ್ರ ಸರ್ಕಾರದಿಂದ ನಡೆಯುತ್ತಿದೆ. ಕರ್ನಾಟಕದ ರೈತರನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿದೆ. ಇದನ್ನು ಖಂಡಿಸಿರುವ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು. ಯಾವುದೇ ಕೇಂದ್ರ ನಾಯಕರ ರಾಜ್ಯಕ್ಕೆ ಬಂದಾಗ ಅವರ ವಿರುದ್ಧ ರೈತರು ಕಪ್ಪು ಭಾವುಟ ಪ್ರದರ್ಶಿಸಿ ಎಂದರು

    ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಸಲಹೆಗಾರ, ಶಾಸಕ ಬಿ.ಆರ್.ಪಾಟೀಲ್, ಭಾರತೀಯ ಕಿಸಾನ್ ಮೋರ್ಚಾ ಮುಖಂಡ ಯುದ್ಧವೀರ ಸಿಂಗ್, ಚುಕ್ಕಿ ನಂಜುಂಡಸ್ವಾಮಿ, ಪಚ್ಚೆ ನಂಜುಂಡಸ್ವಾಮಿ, ಪ್ರೊ.ರಾಮಚಂದ್ರೇಗೌಡರು, ತಮಿಳುನಾಡು ರೈತಸಂಘದ ಮುಖಂಡ ನಲ್ಲಗೌಂಡರ್, ಹಿರಿಯ ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು. ದಿನಪೂರ್ತಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಕುರಿತು ಗೋಷ್ಠಿ, ರೈತಗೀತೆಗಳ ಗಾಯನ, ಸಂವಾದ, ನಾಟಕ, ದೇಸಿ ಬೀಜಗಳ ಪ್ರದರ್ಶನ, ಎಂಡಿಎನ್ ಚಿಂತನೆಯನ್ನಾಧರಿಸಿದ ‘ಬಾರುಕೋಲು’ ಕೃತಿ ಲೋಕಾರ್ಪಣೆ ನಡೆಯಿತು. ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ರೈತಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ಒಂದು ಗ್ರಾಮ ಒಂದು ಟ್ರ್ಯಾಕ್ಟರ್’ ಹೋರಾಟ : ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಪ್ರಮುಖ ಬೆಳೆಯಾಗಿರುವ ತೆಂಗು ಬೆಳೆಗಾರರಿಂದ, ಕಾಶ್ಮೀರದ ಸೇಬು ಬೆಳೆಗಾರರವರೆಗೆ ರೈತರು ತೀವ್ರ ಸಂಕಷ್ಠ ಎದುರಿಸುತ್ತಿದ್ದಾರೆ. ಸ್ವಾಮಿನಾಥನ್ ವರದಿ ಈ ವರೆಗೆ ರೈತರಿಗೆ ಲ ನೀಡಿಲ್ಲ. ದೇಶದ ರೈತರ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜಧಾನಿ ದಿಲ್ಲಿಯಲ್ಲಿ ಮತ್ತೆ ಆಂದೋಲನ ಮಾಡಲು ನಿರ್ಧರಿಸಲಾಗಿದೆ ಎಂದು ರೈತಮುಖಂಡ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.

    ರೈತರ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸುವ ಟ್ರ್ಯಾಕ್ಟರ್ ಮೂಲಕ ರೈತರನ್ನು ಸಂಘಟಿಸಲು ‘ಒಂದು ಗ್ರಾಮ ಒಂದು ಟ್ರ್ಯಾಕ್ಟರ್’ ಪರಿಕಲ್ಪನೆಯಲ್ಲಿ ಫೆ.16ಕ್ಕೆ ದಿಲ್ಲಿಯಲ್ಲಿ ಬೃಹತ್ ರ್ಯಾಲಿ ನಡೆಸಲು ಸಿದ್ಧತೆ ನಡೆಸಲಾಗಿದೆ. ಸರ್ಕಾರದ ಬೆದರಿಕೆಗೆ ರೈತರು ಭಯಪಡುವ ಅಗತ್ಯವಿಲ್ಲ. ಹೋರಾಟಕ್ಕೆ ಸನ್ನದ್ಧರಾಗುವಂತೆ ಅವರು ಕರೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts