More

    ಏಪ್ರಿಲ್ 26, 27, 28ರಂದು ಹಿರಿಯರ ಕ್ರಿಕೆಟ್ ಪಂದ್ಯಾವಳಿ

    ವಿರಾಜಪೇಟೆ: ಬಾಲ್ಯದಲ್ಲಿ ಹಲವಾರು ಜನರು ಅನೇಕ ಕ್ರೀಡೆಗಳಲ್ಲಿ ಭಾಗವಹಿಸಿದರಾದರೂ ಒಂದು ಹಂತದಲ್ಲಿ ಅದರಿಂದ ಹೊರ ಬರುತ್ತಾರೆ. ಅಂತಹ ನೆನಪುಗಳನ್ನು ಮುಪ್ಪಿನಲ್ಲಿ ಮತ್ತೊಮ್ಮೆ ಕಾರ್ಯರೂಪಕ್ಕೆ ತರುವ ಪ್ರಯತ್ನ ಒಳ್ಳೆಯದು ಎಂದು ಹಿರಿಯ ಕ್ರಿಕೆಟ್ ಆಟಗಾರ ಮತ್ತು ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಶಿವು ಮಾದಪ್ಪ ಅಭಿಪ್ರಾಯಪಟ್ಟರು.

    ಕ್ರೌನ್ಸ್ ಕ್ರಿಕೆಟರ್ಸ್‌ ವತಿಯಿಂದ ಜಿಲ್ಲೆಯಲ್ಲಿ ಪ್ರಪ್ರಥಮ ಭಾರಿಗೆ 40+ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಪಂದ್ಯಾವಳಿ ಅಯೋಜಿಸುವ ಸಂಬಂಧ ನಗರದ ಹೊರ ವಲಯ ಪೆರುಂಬಾಡಿ ಗ್ರಾಮದ ಮ್ಯೆಗನೋಲಿಯ ರೆಸಾರ್ಟ್‌ನಲ್ಲಿ ಬುಧವಾರ ಆಯೋಜಿಸಿದ್ದ ಆಟಗಾರರ ಬಿಡ್ಡಿಂಗ್ ಕಾರ್ಯಕ್ರಮದಲ್ಲಿ ಮಾತನಾಡಿದರು.

    80 ರಿಂದ 90 ರ ದಶಕದಲ್ಲಿ ಕ್ರಿಕೆಟ್ ಪಂದ್ಯಾಟಗಳ ಅಯೋಜನೆ ಜಿಲ್ಲೆಯಲ್ಲಿ ವಿರಳವಾಗಿತ್ತು. ಆದರೆ ಆಟಗಾರರರಿಗೆ ಕೊರತೆ ಇರಲಿಲ್ಲ. ಬೆರಳಣಿಕೆಯಷ್ಟು ಜನರು ತಂಡವನ್ನು ಪ್ರತಿನಿಧಿಸುತ್ತಿದ್ದರು. ಹಲವು ಪ್ರತಿಭೆಗಳು ಅವಕಾಶದಿಂದ ವಂಚಿತರಾಗುತ್ತಿದ್ದರು. ಪ್ರಸ್ತುತ ಕ್ರಿಕೆಟ್‌ನಲ್ಲಿ ಓವರ್, ಲೀಗ್, 20-20 ಹೀಗೆ ವಿವಿಧ ರೀತಿಯ ಪಂದ್ಯಾವಳಿ ಆಯೋಜನೆಗೊಳ್ಳುತ್ತಿವೆ. ಆ ಮೂಲಕ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ದೊರಕುತ್ತಿದೆ ಎಂದರು.

    ಪಂದ್ಯಾವಳಿ ಆಯೋಜಕ ಎಚ್.ಎಂ.ಆನಂದ್ ಮಾತನಾಡಿ, ಜಿಲ್ಲೆಯ ಹಿರಿಯ ಆಟಗಾರರಿಗೆ ವೇದಿಕೆ ಕಲ್ಪಿಸುವ ನಿಟ್ಟನಲ್ಲಿ ಟೂರ್ನಿ ಆಯೋಜಿಸಲಾಗಿದೆ. ಹಿರಿಯರ ಪ್ರತಿಭೆಗಳನ್ನು ಯುವ ಕ್ರೀಡಾಪಟುಗಳಿಗೆ ಪರಿಚಯ ಮಾಡುವ ಉದ್ದೇಶವಿದೆ. ಏ. 26,27, ಮತ್ತು 28 ರಂದು ನಗರದ ಸಂತ ಅನ್ನಮ್ಮ ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. 40+, 50+ ವಯಸ್ಸಿನ ಕ್ರೀಡಾಪಟುಗಳು ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳ ಕ್ರೀಡಾಪಟುಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಆಟಗಾರರ ಬಿಡ್ಡಿಂಗ್ ನಡೆಯುತ್ತಿದೆ ಎಂದು ಹೇಳಿದರು.

    ಕ್ರೌನ್ಸ್ ಕ್ರಿಕೆಟರ್ಸ್‌ ಸಂಸ್ಥಾಪಕ ಎಂ.ಪಿ.ಅಲ್ತಾಫ್ ಮಾತನಾಡಿ, ಪಂದ್ಯಾಟದಲ್ಲಿ ಒಟ್ಟು 130 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ವಿರಾಜಪೇಟೆಯ ಎಂ.ವೈ.ಸಿ.ಸಿ, ರೈರ್ಸ್‌, ಹರ್ಷ ಕ್ರಿಕೆಟರ್ಸ್, ಮನ್ನಾ ಸೂಪರ್ ಕಿಂಗ್ಸ್, ಕೂರ್ಗ್ ವಾರಿಯರ್ಸ್, ರೈಸಿಂಗ್ ಸ್ಟಾರ್, ಕಾಟುಮಡಂ ಪ್ರೊಡಕ್ಷನ್, ಮೂರ್ನಾಡುವಿನ ಕಾವೇರಿ ಯೂತ್ ಕ್ರಿಕೆಟರ್ಸ್ ಕ್ಲಬ್, ಕುಟ್ಟ ಎಂ.ಬಿ.ಎಸ್, ಕುಶಾಲನಗರದ ಟೀಂ ಮಂಜೇಶ್ ತಂಡ ಪಂದ್ಯಾಟದಲ್ಲಿ ಭಾಗವಹಿಸಲಿವೆ. ಪಂದ್ಯಾಟವು ಲೀಗ್ ಮಾದರಿಯಲ್ಲಿದ್ದು, ವಿಜೇತರಿಗೆ ಆಕರ್ಷಕ ಟ್ರೋಫಿ ಮತ್ತು ನಗದು ನೀಡಲಾಗುತ್ತದೆ. ತೃತೀಯ ಹಾಗೂ ನಾಲ್ಕನೇ ಸ್ಥಾನ ಪಡೆಯುವ ತಂಡಗಳಿಗೆ ಟ್ರೋಫಿ, ವೈಯಕ್ತಿಕ ಪರಿತೋಷಕ ನೀಡಲಾಗುತ್ತದೆ ಎಂದು ಹೇಳಿದರು.

    ನಗರದ ಹಿರಿಯ ಆಟಗಾರ ಎಲ್.ಜಿ.ಭಾಸ್ಕರ್ ಮಾತನಾಡಿದರು. ಮೂರ್ನಾಡು ಕಾಂತೂರು ಗ್ರಾಮ ಪಂಚಾಯಿತಿ ಸದಸ್ಯರಾದ ಕುಶನ್ ರೈ, ಮ್ಯಾಗ್ನೋಲಿಯ ರೆಸಾರ್ಟ್ ವ್ಯವಸ್ಥಾಪಕ ಪ್ರವೀಣ್ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts