More

    ಒಂದೇ ದಿನ ದೇಶದಲ್ಲಿ ಮತ್ತೊಂದು ಮಹತ್ವದ ನೇಮಕ; ಇಲ್ಲಿದೆ ಮಾಹಿತಿ..

    ನವದೆಹಲಿ: ದೇಶದಲ್ಲಿ ಇಂದು ಒಂದೇ ದಿನದಲ್ಲಿ ಮತ್ತೊಂದು ಮಹತ್ವದ ನೇಮಕವಾಗಿದೆ. ಭಾರತೀಯ ಸೇನಾ ಪಡೆಗಳ ಮುಖ್ಯಸ್ಥರಾಗಿ ನಿವೃತ್ತ ಲೆ. ಜನರಲ್​ ಅನಿಲ್ ಚೌಹಾಣ್​ ಅವರನ್ನು ನೇಮಿಸಿದ ಬೆನ್ನಿಗೇ ಇನ್ನೊಂದು ನೇಮಕದ ಆದೇಶ ಹೊರಬಿದ್ದಿದೆ.

    ದೇಶದ ನೂತನ ಅಟಾರ್ನಿ ಜನರಲ್ ಆಗಿ ಹಿರಿಯ ವಕೀಲ ಆರ್. ವೆಂಕಟರಮಣಿ ಅವರನ್ನು ನೇಮಕ ಮಾಡಲಾಗಿದೆ. ಇವರ ನೇಮಕಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧಿಸೂಚನೆ ಹೊರಡಿಸಿದ್ದಾರೆ. ವೆಂಕಟರಮಣಿ ಅವರು ಅ. 1ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

    ವೆಂಕಟರಮಣಿ ಅವರು ತಮಿಳುನಾಡು ಬಾರ್​ ಕೌನ್ಸಿಲ್​ನಲ್ಲಿ 1977ರ ಜುಲೈನಲ್ಲಿ ನೋಂದಣಿ ಮಾಡಿಕೊಂಡಿದ್ದರು. ಸುಪ್ರೀಂಕೋರ್ಟ್​ನ ಹಿರಿಯ ವಕೀಲ ಪಿ.ಆರ್.ರಾವ್ ಅವರ ಮಾರ್ಗದರ್ಶನದಲ್ಲಿ ಪ್ರಾಕ್ಟಿಸ್ ಮಾಡಲಾರಂಭಿಸಿದ ವೆಂಕಟರಮಣಿ, 1982ರಲ್ಲಿ ಸುಪ್ರೀಂಕೋರ್ಟ್​ನಲ್ಲಿ ಸ್ವತಂತ್ರವಾಗಿ ವಕೀಲಿಕೆ ಆರಂಭಿಸಿದ್ದರು.

    1997ರಲ್ಲಿ ಇವರು ಸುಪ್ರೀಂಕೋರ್ಟ್​ನ ಹಿರಿಯ ವಕೀಲರು ಅಂತನಿಸಿಕೊಂಡರು. ನಂತರ 2010 ಹಾಗೂ 2013ರಲ್ಲಿ ಭಾರತೀಯ ಕಾನೂನು ಆಯೋಗದ ಸದಸ್ಯರಾಗಿ ನೇಮಕಗೊಂಡಿದ್ದರು. ಇವರು ಸುಪ್ರೀಂಕೋರ್ಟ್​​ನಲ್ಲೇ 42 ವರ್ಷಗಳ ವಕೀಲಿಕೆ ಅನುಭವ ಹೊಂದಿದ್ದಾರೆ.

    ಭಾರತೀಯ ಸೇನಾಪಡೆಗಳ ನೂತನ ಮುಖ್ಯಸ್ಥರ ನೇಮಕ; ಬಿಪಿನ್​ ರಾವತ್​ರಿಂದ ತೆರವಾದ ಸ್ಥಾನಕ್ಕೆ ಅನಿಲ್ ಚೌಹಾಣ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts