More

    ಖುಷ್ಬೂ ಬಳಿಕ ಮತ್ತೋರ್ವ ನಟಿ ಬಿಜೆಪಿಗೆ ಸೇರ್ಪಡೆ ಸಾಧ್ಯತೆ?

    ಇತ್ತೀಚೆಗಷ್ಟೇ ಬಹುಭಾಷಾ ನಟಿ ಖುಷ್ಬೂ ಸುಂದರ್​, ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದರು. ಇದೀಗ ತೆಲುಗು ನಾಡಿನ ಮತ್ತೋರ್ವ ಹಿರಿಯ ನಟಿ ಕಾಂಗ್ರೆಸ್​ ಗೆ ಗುಡ್​ಬೈ ಹೇಳಲಿದ್ದಾರೆ ಎನ್ನಲಾಗುತ್ತಿದೆ.

    ಇದನ್ನೂ ಓದಿ: ಕಂಗನಾ ಮನೆ ಕೆಡವಲು ಮುಂಬೈ ಪಾಲಿಕೆ ವಕೀಲರಿಗೆ ನೀಡಿದ ಬಂಪರ್ ಮೊತ್ತವಿದು!

    ಕನ್ನಡ, ತೆಲುಗು ಸೇರಿ ಹಲವು ಭಾಷೆಗಳಲ್ಲಿ ನಟಿಸಿರುವ ನಟಿ ವಿಜಯಶಾಂತಿ ಕಾಂಗ್ರೆಸ್​ ಕೈ ಬಿಟ್ಟು ಕಮಲ ಮುಡಿಗೇರಿಸಿಕೊಳ್ಳಲಿದ್ದಾರಂತೆ. ಹೀಗೊಂದು ಸುದ್ದಿ ಪಕ್ಕದ ತೆಲಂಗಾಣದಲ್ಲಿ ಸುದ್ದಿಯಾಗುತ್ತಿದ್ದು, ಶೀಘ್ರದಲ್ಲಿಯೇ ವಿಜಯಶಾಂತಿ ಅವರ ನಿರ್ಧಾರ ಹೊರಬೀಳಲಿದೆ.

    ವಿಜಯಶಾಂತಿ ಅವರನ್ನು ಭೇಟಿ ಮಾಡಿದ ಕೇಂದ್ರ ಸಚಿವ ಕಿಶನ್​ ರೆಡ್ಡಿ, ಸುದೀರ್ಘ ಎರಡು ಗಂಟೆಗಳ ಕಾಲ ಚರ್ಚೆ ಮಾಡಿದ್ದಾರೆ. ಈ ವಿಚಾರ ಹೊರಬೀಳುತ್ತಿದ್ದಂತೆ ವಿಜಯಶಾಂತಿ ಬಿಜೆಪಿ ಸೇರ್ಪಡೆ ಆಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

    ಇದನ್ನೂ ಓದಿ: ಚಿತ್ರ ಹೇಗಿರುತ್ತದೆ ಎಂದು ಪರಿಚಯಿಸುವುದಕ್ಕೆ 25 ನಿಮಿಷಗಳ ಶೋರೀಲ್​!

    ಇತ್ತ ಸರಿಲೇರು ನಿಕ್ಕೇವ್ವರು ಸಿನಿಮಾದ ಬಳಿಕ ಬೇರಾವ ಸಿನಿಮಾಕ್ಕೆ ವಿಜಯಶಾಂತಿ ಸಹಿ ಹಾಕಿಲ್ಲ. ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲು ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ ಎನ್ನಲಾಗುತ್ತಿದೆ. (ಏಜೆನ್ಸೀಸ್​)

    ಇನ್ನೊಂದು ಹಾಲಿವುಡ್​ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ನಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts