More

    ‘ಬಿಜೆಪಿಯ 121 ನಾಯಕರ ಹೆಸರನ್ನು ಇಡಿಗೆ ಕೊಡ್ತೇನೆ’ ನನ್ನ ಹೆಂಡತಿಯನ್ನು ಬಿಟ್ಟು, ಅವರನ್ನು ವಿಚಾರಿಸಲಿ ಎಂದ ಶಿವಸೇನೆ ನಾಯಕ

    ಮುಂಬೈ: ಪಿಎಂಸಿ ಬ್ಯಾಂಕ್​ ಹಗರಣ ಸಂಬಂಧಿಸಿದ ವಿಚಾರಣೆಗೆ ಶಿವಸೇನೆಯ ನಾಯಕ ಸಂಜಯ್​ ರಾವತ್​ ಅವರ ಪತ್ನಿಯನ್ನು ಜಾರಿ ನಿರ್ದೇಶನಾಲಯವು ಎರಡನೇ ಬಾರಿಗೆ ವಿಚಾರಣೆಗೆ ಕರೆದಿದೆ. ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ಜಾರಿ ಮಾಡಿರುವ ಬೆನ್ನಲ್ಲೇ ಸಂಜಯ್​ ರಾವತ್​ ಕೇಂದ್ರ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿದ್ದು, ಬಿಜೆಪಿಯ 121 ನಾಯಕರ ಹೆಸರುಗಳನ್ನು ಜಾರಿ ನಿರ್ದೇಶನಾಲಯಕ್ಕೆ ನೀಡುವುದಾಗಿ ಹೇಳಿದ್ದಾರೆ.

    ಇದನ್ನೂ ಓದಿ: ನಿಗದಿಯಂತೆ ಜ.1ರಂದು ಶಾಲಾ-ಕಾಲೇಜು ಆರಂಭವಾಗತ್ತಾ? ಸಂದೇಹಗಳಿಗೆ ತೆರೆ ಎಳೆದ ಸಿಎಂ…

    ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆ, ಸಿಬಿಐ ಎಲ್ಲವನ್ನೂ ಕೇಂದ್ರ ಸರ್ಕಾರ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಮೊದಲೆಲ್ಲಾ ಈ ಸಂಸ್ಥೆಗಳು ದಾಳಿ ನಡೆಸಿವೆ ಅಂದರೆ ಅಲ್ಲೊಂದು ಮುಖ್ಯ ಹಗರಣ ಇದೆ ಎನ್ನುವಂತಿತ್ತು. ಆದರೆ ಈಗ ಕೇಂದ್ರ ಸರ್ಕಾರ ಯಾರ ಮೇಲೆ ಮುನಿಸಿಕೊಂಡಿರುತ್ತದೆಯೋ ಅವರ ಮೇಲೆ ಈ ಸಂಸ್ಥೆಗಳು ದಾಳಿ ನಡೆಸುತ್ತಿವೆ ಎಂದು ಸಂಜಯ್​ ರಾವತ್​ ಆರೋಪಿಸಿದ್ದಾರೆ.

    ರಾಜಕೀಯ ಕಿತ್ತಾಟಗಳು ಮುಖಾಮುಖಿಯಾಗಿರಬೇಕು. ನಾನು ಈ ಕುರಿತಾಗಿ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರೊಂದಿಗೆ ಮಾತನಾಡಿದ್ದೇನೆ. ನಾವು ಬೇರೆಯದ್ದೇ ರೀತಿಯಲ್ಲಿ ಪರಿಸ್ಥಿತಿ ಎದುರಿಸಲು ಸಿದ್ಧರಾಗಿದ್ದೇವೆ. ಬಿಜೆಪಿಯ 121 ನಾಯಕರ ಹೆಸರು ನನ್ನ ಬಳಿ ಇದೆ. ಅವರೆಲ್ಲರ ಹೆಸರನ್ನು ಇಡಿಗೆ ಸಲ್ಲಿಸುತ್ತೇನೆ. ಇನ್ನು 5 ವರ್ಷಗಳ ಕಾಲ ಅವರ ವಿಚಾರಣೆ ನಡೆಸಲು ಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಕೇಂದ್ರಕ್ಕಿರುವುದು ಇನ್ನೊಂದೇ ತಿಂಗಳ ಗಡುವು: ಇಲ್ಲದಿದ್ದರೆ ಇದೇ ನನ್ನ ಕೊನೆಯ ಉಪವಾಸ ಸತ್ಯಾಗ್ರಹ

    ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕಿನಲ್ಲಿ ಸಾಲ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಕರಣದಲ್ಲಿ ಸಂಜಯ್​ ರಾವತ್​ ಅವರ ಪತ್ನಿ ವರ್ಷಾ ರಾವತ್​ ಅವರನ್ನು ಜಾರಿ ನಿರ್ದೇಶನಾಲಯವು ಎರಡು ಬಾರಿ ವಿಚಾರಣೆಗೆ ಕರೆಸಿದೆ. ಈ ಹಿಂದೆ ಎರಡು ಬಾರಿ ಸಮನ್ಸ್​ ನೀಡಿದಾಗಲೂ ಆರೋಗ್ಯದ ನೆಪ ಹೇಳಿ ಅವರು ವಿಚಾರಣೆಯನ್ನು ತಪ್ಪಿಸಿಕೊಂಡಿದ್ದರು. (ಏಜೆನ್ಸೀಸ್​)

    ಭಾವಿ ಪತಿಗೆ ಮಲಗಲು ತನ್ನ ಮನೆಯಲ್ಲೇ ಜಾಗ ಕೊಟ್ಟ ಯುವತಿ, ಬೆಳಗ್ಗೆ ಎದ್ದಾಗ ಕಾದಿತ್ತು ಶಾಕ್​!

    2021 ಇನ್ನೂ ಭೀಕರವಾಗಿರುತ್ತೆ! ಬಲ್ಗೇರಿಯನ್ ನಿಗೂಢ ಮಹಿಳೆ ಬಾಬಾ ವಂಗಾ ಭವಿಷ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts