More

    ಭಯದಲ್ಲಿರುವ ರೈತರಿಗೆ ಬೇಕಿದೆ ಕೇಂದ್ರದ ಅಭಯ

    ಚಿತ್ರದುರ್ಗ: ಕೃಷಿ ಹಾಗೂ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗಳ ಕುರಿತಂತೆ ಕೃಷಿ ಸಮೂಹದಲ್ಲಿರುವ ಅನುಮಾನ,ಆತಂಕಗಳನ್ನು ನಿವಾರಿಸುವ ಹೊಣೆ ಸರ್ಕಾರಗಳ ಮೇಲಿದೆ ಎಂದು ಆರ್ಥಿಕ ಚಿಂತಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಹೇಳಿದರು.

    ನಗರದ ಐಐಟಿ ಸಭಾಂಗಣದಲ್ಲಿ ಬುಧವಾರ ಕೃಷಿ ಇಲಾಖೆ ಇತರೆ ಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ರೈತ ದಿನಾಚರಣೆ ಹಾಗೂ ಕೃಷಿ ಮಸೂದೆಗಳು-2020ರ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿ,ಕೃಷಿ ಉತ್ಪನ್ನ,ವ್ಯಾಪಾರ ವಾಣಿಜ್ಯ,ಎಪಿಎಂಸಿ ಕಾಯ್ದೆ ತಿದ್ದುಪಡಿ, ಕೃಷಿ ಉತ್ಪನ್ನಗಳಿಗೆ ಭರವಸೆಯ ಬೆಲೆ,ಒಪ್ಪಂದ ಕಾಯ್ದೆಗಳು, ಮನವರಿಕೆಯಾಗದಿರುವುದೇ ರೈತರ ಪ್ರತಿಭಟನೆ ಕಾರಣವಾಗಿದೆ.ಪ್ರತಿಭಟನೆ ಹಿಂದಿರುವ ರಾಜಕೀಯ ಕಾರಣಗಳನ್ನು ಹುಡುಕುವ ಬದಲು,ಭಯದಲ್ಲಿರುವ ರೈತರಿಗೆ ಕೇಂದ್ರ ಅಭಯ ನೀಡ ಬೇಕು. ಕೃಷಿ ಒಪ್ಪಂದಗಳಲ್ಲಿ ಉಂಟಾಗುವ ವಿವಾದಗಳಿಗೆ ರೈತರನ್ನೂ ಒಳಗೊಂಡಿರುವ ನ್ಯಾಯಮಂಡಳಿ ರಚಿಸಬೇಕು. ಹೋಬಳಿಗಳಿಗೂ ವಿಸ್ತ ರಿಸುವ ಮೂಲಕ ಎಪಿಎಂಸಿಗಳ ವಿಕೇಂದ್ರೀಕರಣವಾಗ ಬೇಕೆಂದು ಅಭಿಪ್ರಾಯಪಟ್ಟ ಅವರು,ಕಾಯ್ದೆಗಳಿಂದ ಅನುಕೂಲಗಳು ಆಗಬೇಕೆ ಹೊರತು ಅನಾನುಕೂಲಗಳಲ್ಲ. ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಜಾರಿಯಿಂದಲೂ ಕೃಷಿ ವಲಯದಲ್ಲಿ ಉಂಟಾಗಿರುವ ಆತಂಕವನ್ನು ರಾಜ್ಯಸರ್ಕಾರವೂ ನಿವಾರಿಸ ಬೇಕಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಜಂಟಿ ಕೃಷಿ ನಿರ್ದೇಶಕ ವಿ.ಸದಾಶಿವ ಮತ್ತಿತರರು ಮಾತನಾಡಿದರು. ಇದೇ ವೇಳೆ ಚಿತ್ರದುರ್ಗ ತಾಲೂಕಿನ ಪ್ರಗತಿಪರ ರೈತರಾದ ಜ್ಞಾನೇಶ್,ನಾಗರಾಜ್,ಲಲಿತಮ್ಮ,ರತ್ನಮ್ಮ,ಬಸವರಾಜಪ್ಪ ಹಾಗೂ ರಾ ಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಸುಮಂಗಳಮ್ಮ ದಂಪತಿಯನ್ನು ಸನ್ಮಾನಿಸಲಾಯಿತು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಹುಲಿರಾಜ್, ರೇಷ್ಮೆ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ ಮತ್ತಿತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts